ಜ. 23ರಂದು ಸಂಪೂರ್ಣ ಲಾಕ್‌ ಡೌನ್ ; ಸಿಎಂ ಸ್ಟಾಲಿನ್ - Mahanayaka

ಜ. 23ರಂದು ಸಂಪೂರ್ಣ ಲಾಕ್‌ ಡೌನ್ ; ಸಿಎಂ ಸ್ಟಾಲಿನ್

stalin
22/01/2022

ಚೆನ್ನೈ: ಕೋವಿಡ್-19 ಹರಡುವುದನ್ನು ತಡೆಗಟ್ಟುವ ಸಲುವಾಗಿ ಜ. 23ರಂದು ರಾಜ್ಯಾದ್ಯಂತ ಸಂಪೂರ್ಣ ಲಾಕ್‌ ಡೌನ್ ಜಾರಿಯಲ್ಲಿರುತ್ತದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಶುಕ್ರವಾರ ಘೋಷಿಸಿದ್ದಾರೆ.

ರಾಜ್ಯದಲ್ಲಿ ಹೆಚ್ಚುತ್ತಿರುವ ಪ್ರಕರಣಗಳ ಸಂಖ್ಯೆ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜ.16 ರಂದು ಜಾರಿಯಲ್ಲಿದ್ದ ಲಾಕ್‌ ಡೌನ್ ವೇಳೆ ಅನುಮತಿಸಲಾದ ಮತ್ತು ನಿರ್ಬಂಧಿಸಲಾದ ಚಟುವಟಿಕೆಗಳು ಜ. 23ಕ್ಕೂ ಅನ್ವಯಿಸುತ್ತವೆ ಎಂದು ಮುಖ್ಯಮಂತ್ರಿ ಸ್ಟಾಲಿನ್ ತಿಳಿಸಿದ್ದಾರೆ.

ಅಲ್ಲದೆ, ಇತರ ಸ್ಥಳಗಳಿಂದ ಚೆನ್ನೈಗೆ ಆಗಮಿಸುವ ಪ್ರಯಾಣಿಕರ ಹಿತದೃಷ್ಟಿಯಿಂದ, ಮೊಬೈಲ್ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ಕಾರ್ಯನಿರ್ವಹಿಸುವ ಆಟೋರಿಕ್ಷಾಗಳು ಮತ್ತು ಟ್ಯಾಕ್ಸಿಗಳನ್ನು ಚೆನ್ನೈ ಸೆಂಟ್ರಲ್  ರೈಲು ನಿಲ್ದಾಣ, ಎಗ್ಮೋರ್ ರೈಲು ನಿಲ್ದಾಣ ಮತ್ತು ಕೊಯಮತ್ತೂರು ಬಸ್ ಟರ್ಮಿನಸ್‌ ನಿಂದ ಸಂಚರಿಸಲು ಅನುಮತಿಸಲಾಗುವುದು. ಈ ವಾಹನಗಳಲ್ಲಿ ಪ್ರಯಾಣಿಕರು ತಮ್ಮ ಪ್ರಯಾಣವನ್ನು ಕಾಯ್ದಿರಿಸಬಹುದು. ಇದು ಜಿಲ್ಲೆಯ ರೈಲು ನಿಲ್ದಾಣಗಳು ಮತ್ತು ಇತರ ಬಸ್ ನಿಲ್ದಾಣಗಳಿಗೂ ಅನ್ವಯಿಸುತ್ತದೆ ಎಂದಿದ್ದಾರೆ.


Provided by

ಕೋವಿಡ್-19 ಹರಡುವುದನ್ನು ತಡೆಯಲು ತೆಗೆದುಕೊಳ್ಳುತ್ತಿರುವ ಕ್ರಮಗಳಿಗೆ ಸಾರ್ವಜನಿಕರು ಸಹಕರಿಸುವಂತೆ ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸ್ಟ್ಯಾಲಿನ್  ಮನವಿ ಮಾಡಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಅಪ್ರಾಪ್ತೆ ಮೇಲೆ ಅತ್ಯಾಚಾರ; ಇಬ್ಬರು ಆರೋಪಿಗಳ ಬಂಧನ

ಫಿಲಿಪ್ಪೀನ್ಸ್​​​: 6.5 ತೀವ್ರತೆಯ ಭೂಕಂಪ

ಹಿಟ್​ ಆಂಡ್​ ರನ್​; ವೃದ್ಧೆ ಸ್ಥಳದಲ್ಲೇ ಸಾವು

ಬ್ರೇಕಿಂಗ್ ನ್ಯೂಸ್: ವೀಕೆಂಡ್ ಕರ್ಪ್ಯೂ ರದ್ದು: ಕಂದಾಯ ಸಚಿವ ಆರ್.ಅಶೋಕ್ ಮಾಹಿತಿ

ಮಹಿಳೆಯ ಕೊಲೆ ಪ್ರಕರಣ; ಬಿಜೆಪಿ ಕೌನ್ಸಿಲರ್ ಬಂಧನ

 

ಇತ್ತೀಚಿನ ಸುದ್ದಿ