ಜನಪ್ರಿಯ ಕಲಾವಿದ ಹೃದಯಾಘಾತದಿಂದ ನಿಧನ - Mahanayaka
12:17 AM Thursday 26 - December 2024

ಜನಪ್ರಿಯ ಕಲಾವಿದ ಹೃದಯಾಘಾತದಿಂದ ನಿಧನ

15/02/2021

ಬಾಗಲಕೋಟೆ: ನಟ ಉಪೇಂದ್ರ ಅವರನ್ನು ಅನುಕರಿಸಿ ಪ್ರೇಕ್ಷಕರನ್ನು ರಂಜಿಸುತ್ತಿದ್ದ 30 ವರ್ಷದ ಅಂಬಿಗೇರ ಎಂಬವರು  ಸೋಮವಾರ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.

ಅಂಬಿಗೇರ ಅವರು ಆರ್ಕೆಸ್ಟ್ರಾ ಹಾಗೂ ರಸಮಂಜರಿ ಕಾರ್ಯಕ್ರಮ ಕಲಾವಿದ ರಾಗಿದ್ದು, ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ನಡೆದ ಕಾರ್ಯಕ್ರಮದ ಬಳಿಕ ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ.

ಮಿಮಿಕ್ರಿ ಹಾಗೂ ನಟನೆ ಮೂಲಕ ಜೂನಿಯರ್ ಉಪೇಂದ್ರ ಎಂಬ ಹೆಸರು ಪಡೆದುಕೊಂಡಿದ್ದ ಇವರು, ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಕೂಡ ಹೊಂದಿದ್ದರು.

 

ಇತ್ತೀಚಿನ ಸುದ್ದಿ