ಜನರ ಭಾವನೆಗಳನ್ನು ಕೆಡವಿದವರು ಈಗ ದೇವಸ್ಥಾನವನ್ನೂ ಕೆಡವಿದ್ದಾರೆ | ಯು.ಟಿ.ಖಾದರ್ ಆಕ್ರೋಶ - Mahanayaka
2:17 PM Wednesday 5 - February 2025

ಜನರ ಭಾವನೆಗಳನ್ನು ಕೆಡವಿದವರು ಈಗ ದೇವಸ್ಥಾನವನ್ನೂ ಕೆಡವಿದ್ದಾರೆ | ಯು.ಟಿ.ಖಾದರ್ ಆಕ್ರೋಶ

u t khadar
15/09/2021

ಮಂಗಳೂರು:  ಬಿಜೆಪಿ ಸರ್ಕಾರ ಸಂಸ್ಕೃತಿ ಕೆಡವುತ್ತದೆ, ಜನರ ಭಾವನೆಗಳನ್ನು ಕೆಡವಿದವರು ಈಗ ದೇವಸ್ಥಾನವನ್ನೂ ಕೆಡವಿದ್ದಾರೆ ಎಂದು ದೇವಸ್ಥಾನಗಳನ್ನು ಉರುಳಿಸುತ್ತಿರುವ ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಸಚಿವ ಯು.ಟಿ.ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇವಸ್ಥಾನಗಳನ್ನು ಕೆಡವಿದ ಬಗ್ಗೆ ಸರ್ಕಾರ ಯಾರನ್ನು ಜವಾಬ್ದಾರಿ ಮಾಡುತ್ತದೆ ಎಂದು ಪ್ರಶ್ನಿಸಿದ ಅವರು, ದೇವಸ್ಥಾನದ ಇತಿಹಾಸ, ಅಲ್ಲಿನ ಶಿಲ್ಪಕಲೆ ಎಲ್ಲವೂ ಇವರಿಗೆ ಅರ್ಥವಾಗುವುದಿಲ್ಲವೇ? ಇದು ಮೈಸೂರು ಮಾತ್ರವಲ್ಲ, ಇಡೀ ದೇಶಕ್ಕೆ ದೊಡ್ಡ ಕಪ್ಪು ಚುಕ್ಕೆ ಎಂದು ಯು.ಟಿ.ಖಾದರ್ ಆಕ್ರೋಶ ವ್ಯಕ್ತಪಡಿಸಿದರು.

ಈ ಘಟನೆಯ ನೈತಿಕ ಹೊಣೆ ಹೊತ್ತು ಮೈಸೂರು ಉಸ್ತುವಾರಿ ಸಚಿವರು ರಾಜೀನಾಮೆ ನೀಡಬೇಕು.  ಸರ್ಕಾರ ಈ ಆದೇಶವನ್ನು ನೀಡುವಾಗ ಯಾಕೆ ಯೋಚನೆ ಮಾಡಿಲ್ಲ? ಇದನ್ನು ಕೂತು ಚರ್ಚಿಸಿದ್ದರೆ, ಸಮಸ್ಯೆ ಪರಿಹಾರವಾಗುತ್ತಿರಲಿಲ್ಲವೇ? ಎಂದು ಅವರು ಪ್ರಶ್ನಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ.

ಇನ್ನಷ್ಟು ಸುದ್ದಿಗಳು…

ಮಹಿಳೆ ಮೃತಪಟ್ಟು ನಾಲ್ಕು ತಿಂಗಳ ಬಳಿಕ ಕೊರೊನಾ ಲಸಿಕೆ ನೀಡಿದ ಆರೋಗ್ಯ ಕೇಂದ್ರ!

ದೇವಸ್ಥಾನ ತೆರವು ವಿಚಾರ: ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ

ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಗೆ ಪರ್ಯಾಯ ರಾಜಕೀಯ ಪಕ್ಷ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ | ಡಾ.ಎಂ.ವೆಂಕಟಸ್ವಾಮಿ

ಟೂತ್ ಪೇಸ್ಟ್ ಎಂದು ಭಾವಿಸಿ, ಇಲಿ ವಿಷದಲ್ಲಿ ಹಲ್ಲುಜ್ಜಿದ ಯುವತಿ ಸಾವು!

ಬಿಗ್ ಬ್ರೇಕಿಂಗ್ ನ್ಯೂಸ್:  ಖ್ಯಾತ ನಟ ಸೋನುಸೂದ್ ಕಚೇರಿ ಮೇಲೆ ಐಟಿ ದಾಳಿ

ಅವಸರದಿಂದ ದೇವಸ್ಥಾನಗಳನ್ನು ಒಡೆಯಬೇಡಿ: ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ

6 ವರ್ಷದ ಬಾಲಕಿಯ ಅತ್ಯಾಚಾರ, ಹತ್ಯೆ ಆರೋಪಿಯನ್ನು ಎನ್ ಕೌಂಟರ್ ಮಾಡುತ್ತೇವೆ | ತೆಲಂಗಾಣ ಸಚಿವ ಬಹಿರಂಗ ಹೇಳಿಕೆ

ಇತ್ತೀಚಿನ ಸುದ್ದಿ