ಜನರಿಗೆ ಸ್ಪಂದಿಸದ ಸರ್ಕಾರ ಇದ್ರೆ ಅದುವೇ 40% ಬಿಜೆಪಿ ಸರ್ಕಾರ: ಬಿ.ಕೆ.ಹರಿಪ್ರಸಾದ್
ಮಂಗಳೂರು: ರಾಜ್ಯದಲ್ಲಿ ಜನರಿಗೆ ಸ್ಪಂದಿಸದ ಸರ್ಕಾರ ಇದ್ರೆ ಅದುವೇ 40% ಬಿಜೆಪಿ ಸರ್ಕಾರ. ಇದೀಗ ಬಿಜೆಪಿ ಅವರು ಜನೋತ್ಸವ ಎಂದು ಏನನ್ನು ಮಾಡ್ತಾ ಇದ್ದರೋ ಅದು 50% ನಲ್ಲಿ ಭ್ರಷ್ಟಾಚಾರ ಯಾವ ರೀತಿ ಮಾಡಿದ್ದೀವಿ ಎಂಬುದನ್ನು ಅವರು ತೋರಿಸೋಕೆ ಮಾಡುತ್ತಿರುವಂತಹ ಉತ್ಸವ ಎಂದು ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ವ್ಯಂಗ್ಯವಾಡಿದ್ದಾರೆ.
ಮಂಗಳೂರಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಈ ಮೂಲಕ 5% ಅನ್ನ ಖರ್ಚು ಮಾಡಿ 35% ಅನ್ನ ತಮ್ಮ ಜೇಬಿಗೆ ಹಾಕುವಂತಹ ಪ್ರಯತ್ನವನ್ನು ಅವರು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಜನ ಸೇರಿಸೋಕೆ ಅವರು ಪ್ರಯತ್ನ ಮಾಡುತ್ತಿದ್ದಾರೆ. ಅದ್ಯಾಕೆ ಮಂಗಳೂರಿಗೆ ಮೋದಿ ಅವರು ಬಂದಾಗ ಜನರನ್ನ ಸೇರಿಸೋಕೆ ಅವರಿಗೆ ಸಾಧ್ಯವಾಗಿಲ್ಲ. ಬೆದರಿಕೆ ಹಾಕಿ ಇದ್ದ ಬದ್ದವರನ್ನು ಸೇರಿಸಿ ಮೋದಿ ಕಾರ್ಯಕ್ರಮವನ್ನು ನಡೆಸಿದ್ದಾರೆ ಎಂದು ವ್ಯಂಗ್ಯವಾಡಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka