ಗೋಕಾಕ್ ಜನತೆಗೆ ಸಿಹಿ ಸುದ್ದಿ ನೀಡಿದ ರಮೇಶ್ ಜಾರಕಿಹೊಳಿ: ಉಚಿತ ಚಿತ್ರ ಪ್ರದರ್ಶನಕ್ಕೆ ಅವಕಾಶ - Mahanayaka
11:36 PM Sunday 15 - December 2024

ಗೋಕಾಕ್ ಜನತೆಗೆ ಸಿಹಿ ಸುದ್ದಿ ನೀಡಿದ ರಮೇಶ್ ಜಾರಕಿಹೊಳಿ: ಉಚಿತ ಚಿತ್ರ ಪ್ರದರ್ಶನಕ್ಕೆ ಅವಕಾಶ

ramesh jarakiholi
30/03/2022

ಬೆಳಗಾವಿ: ಗೋಕಾಕ್ ಜನತೆಗೆ ಸಿಹಿ ಸುದ್ದಿ ನೀಡಿರುವ ಶಾಸಕ ರಮೇಶ್ ಜಾರಕಿಹೊಳಿ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವನ್ನು ಉಚಿತ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿದ್ದು, ರಮೇಶ್ ಜಾರಕಿ ಹೊಳಿ ನೇತೃತ್ವದಲ್ಲಿ ಉಚಿತ ಚಿತ್ರ ಪ್ರದರ್ಶನ ಇರಲಿದೆ.

ಗೋಕಾಕ್ ನಗರದಲ್ಲಿರುವ ಲಕ್ಷ್ಮೀ ಹಾಗೂ ಆನಂದ ಚಿತ್ರಮಂದಿರಗಳಲ್ಲಿ ರಮೇಶ್​ ಜಾರಕಿಹೊಳಿ ಪ್ರಾಯೋಜಕತ್ವದಲ್ಲಿ ಇಂದಿನಿಂದ ಎಂಟು ದಿನಗಳ ಕಾಲ ನಿತ್ಯ ಬೆಳಗ್ಗೆ 9ರಿಂದ ದಿ ಕಾಶ್ಮೀರ್​ ಫೈಲ್ಸ್ ಚಿತ್ರ ಉಚಿತ ಪ್ರದರ್ಶನ ನಡೆಯಲಿದೆ ಎಂದು ವರದಿಯಾಗಿದೆ.

ದಿ ಕಾಶ್ಮೀರ್ ಫೈಲ್ಸ್ ಚಿತ್ರವು ಬಿಜೆಪಿಗೆ ಮುಂದಿನ ಚುನಾವಣೆಯ ದೃಷ್ಟಿಯಿಂದ ಲಾಭದಾಯಕವಾಗಿರಲಿದೆ ಎಂದು ಹೇಳಲಾಗುತ್ತಿದ್ದು, ಹಲವೆಡೆಗಳಲ್ಲಿ ಉಚಿತ ಪ್ರದರ್ಶನಕ್ಕೆ ಬಿಜೆಪಿ ಶಾಸಕರು ಅವಕಾಶ ಮಾಡಿಕೊಡುತ್ತಿದ್ದಾರೆ.

ಇನ್ನೂ ಚಿತ್ರವನ್ನು ಉಚಿತವಾಗಿ ಪ್ರದರ್ಶನ ಮಾಡಿಸಿದ್ದಕ್ಕೆ ಗೋಕಾಕ್ ಬಿಜೆಪಿ ಕಾರ್ಯಕರ್ತರು ರಮೇಶ್ ಜಾರಕಿಹೊಳಿ ಅವರಿಗೆ ಜೈಕಾರ ಕೂಗುವ ಮೂಲಕ ಹರ್ಷ ವ್ಯಕ್ತಪಡಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಇಂಧನ ಬೆಲೆ ಇಳಿಕೆ ಬಿಜೆಪಿಯ ಚುನಾವಣಾ ಕಾರ್ಯತಂತ್ರವಾಗಿತ್ತು: ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮನೆಗೆ ದುಷ್ಕರ್ಮಿಗಳ ದಾಳಿ: ಸಿಸಿಟಿವಿ, ಭದ್ರತಾ ಗೋಡೆ ಧ್ವಂಸ

ಹುಮ್ನಾಬಾದ್ ಪೊಲೀಸರ ಕಾರ್ಯಾಚರಣೆ: ಐಪಿಎಲ್ ಬುಕ್ಕಿಯ ಬಂಧನ

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮನೆಗೆ ದುಷ್ಕರ್ಮಿಗಳ ದಾಳಿ: ಸಿಸಿಟಿವಿ, ಭದ್ರತಾ ಗೋಡೆ ಧ್ವಂಸ

ಸಿಆರ್‌ಪಿಎಫ್‌ ಬಂಕರ್ ಮೇಲೆ ಬಾಂಬ್ ಎಸೆದ ಬುರ್ಖಾಧಾರಿ ಮಹಿಳೆ

 

ಇತ್ತೀಚಿನ ಸುದ್ದಿ