ಜನಿವಾರ ಧರಿಸಿರುವ ವ್ಯಕ್ತಿಯ ಛಿದ್ರಗೊಂಡ ಶವ ರೈಲು ಹಳಿ ಮೇಲೆ ಪತ್ತೆ - Mahanayaka

ಜನಿವಾರ ಧರಿಸಿರುವ ವ್ಯಕ್ತಿಯ ಛಿದ್ರಗೊಂಡ ಶವ ರೈಲು ಹಳಿ ಮೇಲೆ ಪತ್ತೆ

murthadeha patte
01/08/2022

ಮಣಿಪಾಲ:   ದೊಡ್ಡಣಗುಡ್ಡೆ ಇಲ್ಲಿಯ ಆದಿಶಕ್ತಿ ದೇವಸ್ಥಾನದ ಬಳಿ ಹಾದುಹೋಗುವ ರೈಲು ಹಳಿಯ ಬಳಿ ರೈಲು ಬಡಿದು, ಛಿದ್ರಗೊಂಡ ಸ್ಥಿತಿಯಲ್ಲಿ ಅಪರಿಚಿತ ಯುವಕನೊರ್ವನ ಶವವು ಸೋಮವಾರ ಕಂಡುಬಂದಿದೆ.


Provided by

ಶವವು ಗುರುತಿಸಲಾಗದಷ್ಟು ಛಿದ್ರಗೊಂಡಿದ್ದು, ದೇಹದಲ್ಲಿ ಜನಿವಾರ ಇರುವುದನ್ನು ಗುರುತಿಸಲಾಗಿದೆ.  ಮಣಿಪಾಲ ಠಾಣಾಧಿಕಾರಿ ರಾಜಶೇಖರ ಹೊಂದಾಳಿ ಘಟನಾ ಸ್ಥಳದಲ್ಲಿದ್ದು ಕಾನೂನು ಪ್ರಕ್ರಿಯೆ ನಡೆಸಿದರು.

ಶವ ಘಟನಾ ಸ್ಥಳದಲ್ಲಿಂದ ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ರಕ್ಷಿಸಿಡಲು ಸಮಾಜಸೇವಕ ನಿತ್ಯಾನಂದ ಒಳಕಾಡು ಇಲಾಖೆಗೆ ಸಹಕರಿಸಿದರು. ಮೃತನ ವಾರಸುದಾರರು ಮಣಿಪಾಲ ಪೋಲಿಸ್ ಠಾಣೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸಲು ಸೂಚಿಸಲಾಗಿದೆ.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ