ಜಾತಿ ಭಯೋತ್ಪಾದಕರ ಅಟ್ಟಹಾಸ: ದಲಿತ ಯುವಕನ ಗುದದ್ವಾರಕ್ಕೆ ಕೋಲು ತುರುಕಿ ಅಮಾನವೀಯ ಹಲ್ಲೆ - Mahanayaka

ಜಾತಿ ಭಯೋತ್ಪಾದಕರ ಅಟ್ಟಹಾಸ: ದಲಿತ ಯುವಕನ ಗುದದ್ವಾರಕ್ಕೆ ಕೋಲು ತುರುಕಿ ಅಮಾನವೀಯ ಹಲ್ಲೆ

khanpur
10/07/2021

ಕಾನ್ಪುರ್: 20 ವರ್ಷ ವಯಸ್ಸಿನ ದಲಿತ ಯುವಕನ ಮೇಲೆ ಜಾತಿ ಭಯೋತ್ಪಾದಕರ ಗುಂಪೊಂದು ದಾಳಿ ನಡೆಸಿದ್ದು, ಕೋಲುಗಳಿಂದ ಅಮಾನವೀಯವಾಗಿ ಥಳಿಸಿ, ಗುದದ್ವಾರಕ್ಕೆ ಕೋಲು ತುರುಕಿ ಗಂಭೀರವಾಗಿ ಗಾಯಗೊಳಿಸಿರುವ ವಿಡಿಯೋವೊಂದು ವೈರಲ್ ಆಗಿದೆ.

ಉತ್ತರಪ್ರದೇಶದ ಕಾನ್ಪುರ್ ದೇಹತ್ ಜಿಲ್ಲೆಯ ಅಕ್ಬರ್ ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಮೊದಲು ಯುವಕನ ಜಾತಿಯನ್ನು ಕೇಳಿದ್ದು, ಆತ ದಲಿತ ಎನ್ನುವುದು ತಿಳಿಯುತ್ತಿದ್ದಂತೆಯೇ ಮನ ಬಂದಂತೆ ಥಳಿಸಲಾಗಿದೆ. ಇನ್ನೂ ಘಟನೆ ಸಂಬಂಧ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ತನ್ನ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಲಾಗುತ್ತಿದ್ದರೂ, ಯುವಕ ನೋವನ್ನು ಸಹಿಸಿಕೊಳ್ಳುತ್ತಿರುವ ದೃಶ್ಯ ಹೃದಯ ವಿದ್ರಾವಕವಾಗಿದ್ದು, ಉತ್ತರಪ್ರದೇಶದಲ್ಲಿ ಬಿಜೆಪಿ ಆಡಳಿತದಲ್ಲಿ, ದಲಿತರ ಜೀವನ ಅತ್ಯಂತ ಹೀನಾಯ ಸ್ಥಿತಿಗೆ ತಲುಪಿದೆ.

ಜಾತಿ ಹಾಗೂ ಧರ್ಮದ ಕಾರಣಕ್ಕಾಗಿ ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನೂ ಭಯೋತ್ಪಾದನೆ ಎಂದು ಪರಿಗಣಿಸಿ ಆರೋಪಿಗಳ ವಿರುದ್ಧ ಕ್ರಮವನ್ನು ಕೈಗೊಳ್ಳಬೇಕು ಎನ್ನುವ ಒತ್ತಾಯಗಳು ಘಟನೆಯ ಬೆನ್ನಲ್ಲೇ ಕೇಳಿ ಬಂದಿದೆ.

ಪ್ರೀತಿಸಿದ್ದಕ್ಕಾಗಿ  ದಲಿತ ಯುವಕನ ತಲೆಬೋಳಿಸಿ, ಚಪ್ಪಲಿಹಾರ ಹಾಕಿ ವಿಕೃತಿ ಮೆರೆದ ಯುವತಿಯ ತಂದೆ

 

 

ಸುಂದರವಾಗಿ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕನ ಮನೆಗೆ ನುಗ್ಗಿ ಮಾರಣಾಂತಿಕ ಹಲ್ಲೆ

ಮನು ಕುಲವನ್ನೇ ಬೆಚ್ಚಿ ಬೀಳಿಸಿದ ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ | ಅರ್ಜುನ್ ಎಂಬ ವಿಕೃತ PSI ತಲೆದಂಡವಾಗಲೇಬೇಕು

ಇತ್ತೀಚಿನ ಸುದ್ದಿ