ಜಾತಿ ತಾರತಮ್ಯ ನಿರ್ಮೂಲನೆ ಮಾಡುವ ಗ್ರಾಮಕ್ಕೆ 10 ಲಕ್ಷ ರೂಪಾಯಿ ಬಹುಮಾನ!
ಚೆನ್ನೈ: ಜಾತಿ ತಾರತಮ್ಯ ನಿರ್ಮೂಲನೆ ಮೂಲಕ ಮಾದರಿಯಾಗುವ ಗ್ರಾಮಕ್ಕೆ 10 ಲಕ್ಷ ರೂಪಾಯಿ ಬಹುಮಾನವನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟ್ಯಾಲಿನ್ ಘೋಷಿಸಿದ್ದು, ಜಾತಿ ಆಧಾರದಲ್ಲಿ ನಡೆಯುತ್ತಿರುವ ತಾರತಮ್ಯ ತಡೆಗಟ್ಟಲು ಸ್ಟ್ಯಾಲಿನ್ ಸರ್ಕಾರ ದಿಟ್ಟ ಹೆಜ್ಜೆಯನ್ನಿಡುವ ಮೂಲಕ ದೇಶದಲ್ಲೇ ಮಾದರಿಯಾಗಿದ್ದಾರೆ.
ಜಾತಿ ಆಧಾರದಲ್ಲಿ ಅಂತ್ಯಕ್ರಿಯೆ ನಡೆಸುವ ವಿಚಾರದಲ್ಲಿ ಕೂಡ ತಾರತಮ್ಯವಾಗುತ್ತಿದೆ. ಇದನ್ನು ತಡೆಗಟ್ಟಲು ಸರ್ವಜನಾಂಗಕ್ಕೂ ಒಂದೇ ಸ್ಮಶಾನ ಸ್ಥಾಪನೆಯಾಗಬೇಕು ಎನ್ನುವ ಆಶಯವನ್ನು ಎಂ.ಕೆ.ಸ್ಟ್ಯಾಲಿನ್ ವ್ಯಕ್ತಪಡಿಸಿದ್ದಾರೆ.
ಇನ್ನೂ ತಮಿಳುನಾಡಿನಲ್ಲಿ ಮಕ್ಕಳಿಗೆ ಉಚಿತವಾಗಿ ವಿತರಿಸಲು ಸಿದ್ಧವಾಗಿರುವ 65 ಲಕ್ಷ ಶಾಲಾ ಬ್ಯಾಗ್ ಗಳ ಮೇಲೆ ಎಐಡಿಎಂಕೆ ನಾಯಕಿ ಜಯಲಲಿತಾ ಮತ್ತು ಹಿಂದಿನ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರು ಭಾವಚಿತ್ರಗಳು ಮುದ್ರಣವಾಗಿತ್ತು. ಈ ಭಾವ ಚಿತ್ರಗಳನ್ನು ತೆಗೆಸಲಾಗುವುದು ಎಂದೇ ವಿರೋಧ ಪಕ್ಷಗಳು ಭಾವಿಸಿದ್ದವು. ಆದರೆ, ಈ ವಿಚಾರದಲ್ಲಿ ಸ್ಟ್ಯಾಲಿನ್ ಔದಾರ್ಯ ಮೆರೆದಿದ್ದು, ಬ್ಯಾಗ್ ಗಳ ಮೇಲೆ ಚಿತ್ರ ತೆಗೆಯುವುದು ಬೇಡ ಎಂದುಹೇಳಿದ್ದಾರೆ.
ಈ ನಿರ್ಧಾರಕ್ಕೆ ರಾಜಕೀಯ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಮುಖ್ಯಮಂತ್ರಿಯ ಈ ಕ್ರಮದಿಂದ ತಮಿಳುನಾಡು ಬೊಕ್ಕಸಕ್ಕೆ ರೂ.14 ಕೋಟಿ ಉಳಿತಾಯಾಗಿದೆ. ಭಾವಚಿತ್ರಗಳನ್ನು ಬದಲಿಸಬೇಕು ಎಂದು ತೀರ್ಮಾನಿಸಿದಿದ್ದರೆ ಇಷ್ಟು ದೊಡ್ಡ ಮೊತ್ತದ ಹಣ ವ್ಯರ್ಥವಾಗುತ್ತಿತ್ತು ಈ ನಿಟ್ಟಿನಲ್ಲಿ ಸಿಎಂ ಸ್ಟ್ಯಾಲಿನ್ ಅವರ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಹಿಂದೆ ಅಧಿಕಾರದಲ್ಲಿದ್ದ ನಾಯಕರು ಘೋಷಿಸಿದ್ದ ಸಾರ್ವಜನಿಕ ಯೋಜನೆಗಳಲ್ಲಿ ಇರುವ ಭಾವಚಿತ್ರಗಳನ್ನು ಹೊಸದಾಗಿ ಅಧಿಕಾರಕ್ಕೆ ಬಂದವರು ತೆರವುಗೊಳಿಸುವುದು ಸಾಮಾನ್ಯ ಎಂಬಂತೆ ನಡೆಯುತ್ತಿದೆ. ಇದರಿಂದಾಗಿ ಸರ್ಕಾರಕ್ಕೆ ಸಾವಿರಾರು ಕೋಟಿ ರೂಪಾಯಿಗಳು ವ್ಯರ್ಥವಾಗಿ ಹೋಗುತ್ತಿದೆ. ಈ ನಿಟ್ಟಿನಲ್ಲಿ ಸ್ಟ್ಯಾಲಿನ್ ಅವರು ತೆಗೆದುಕೊಂಡಿರುವ ಕ್ರಮದ ಬಗ್ಗೆ ವ್ಯಾಪಕ ಪ್ರಸಂಶೆ ವ್ಯಕ್ತವಾಗಿದೆ. ಜೊತೆಗೆ ಜಾತಿ ತಾರತಮ್ಯವನ್ನು ಕೊನೆಗಾಣಿಸಲು ಸ್ಟ್ಯಾಲಿನ್ ಖಂಡಿತ ದಿಟ್ಟ ಹೆಜ್ಜೆ ಇಡುತ್ತಾರೆ ಎಂಬ ನಿರೀಕ್ಷೆಗಳು ಇದೀಗ ಸೃಷ್ಟಿಯಾಗಿವೆ.
ಇನ್ನಷ್ಟು ಸುದ್ದಿಗಳು…
ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ವ್ಯಾನ್ ಗೆ ಲಾರಿ ಡಿಕ್ಕಿ: ನಾಲ್ವರು ಮಹಿಳೆಯರು ಸಾವು, 15 ಮಂದಿಗೆ ಗಾಯ
ಡಾಬಾದಲ್ಲಿ ಊಟ ಮುಗಿಸಿ, ಬೈಕ್ ಹತ್ತಿದ ಸ್ನೇಹಿತರಿಬ್ಬರು ಕ್ಷಣ ಮಾತ್ರದಲ್ಲೇ ಸಾವು!
ವಿದ್ಯುತ್ ಚಾಲಿತ ವಾಹನ ಬಳಸಿದರೆ, ಪೆಟ್ರೋಲ್ ಬೆಲೆ ಇಳಿಯುತ್ತದೆ | ಸಚಿವ ನಾರಾಯಣ ಗೌಡ
“ಕಾರ್ ನನ್ನದು, ಯಾಕ್ರಿ ಟೋಯಿಂಗ್ ಮಾಡ್ತಿದ್ದೀರಿ” | ಟ್ರಾಫಿಕ್ ಪೊಲೀಸರನ್ನು ಗದರಿದ ಮಹಿಳೆ
ವಾನರ ಸೇನೆಯ ದಾಳಿ: ಎರಡನೇ ಮಹಡಿಯಿಂದ ಬಿದ್ದು ಬಿಜೆಪಿ ನಾಯಕನ ಪತ್ನಿ ಸಾವು
2 ವರ್ಷದ ಮಗು ಕೊವಿಡ್ ಗೆ ಬಲಿ: 3ನೇ ಅಲೆಯ ಮುನ್ಸೂಚನೆಯೇ?
ಹೊಟೇಲ್ ನಲ್ಲಿ 16 ವರ್ಷ ವಯಸ್ಸಿನ ಬಾಲಕಿಯ ಅತ್ಯಾಚಾರ | ಬಿಜೆಪಿ, ಜೆಡಿಯು ಮುಖಂಡರ ಸಹಿತ ಮೂವರ ಬಂಧನ
ದೋಣಿ ಮಗುಚಿ ಮೂವರು ಮಕ್ಕಳು ಸೇರಿದಂತೆ 6 ಮಂದಿ ಜಲಸಮಾಧಿ!




























