ಜಾತಿ ವ್ಯವಸ್ಥೆಯ ನೋವು, ಅವಮಾನವನ್ನು ಸಂಚಾರಿ ವಿಜಯ್ ಅನುಭವಿಸಿದ್ದು ನಿಜ | ನೀನಾಸಂ ಸತೀಶ್ - Mahanayaka

ಜಾತಿ ವ್ಯವಸ್ಥೆಯ ನೋವು, ಅವಮಾನವನ್ನು ಸಂಚಾರಿ ವಿಜಯ್ ಅನುಭವಿಸಿದ್ದು ನಿಜ | ನೀನಾಸಂ ಸತೀಶ್

sanchari vijay sathish ninasam
21/06/2021

ಸಂಚಾರಿ ವಿಜಯ್ ಅವರು ಕನ್ನಡ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ತಂದುಕೊಟ್ಟು ಕನ್ನಡ ಚಿತ್ರರಂಗಕ್ಕೆ ಹೆಮ್ಮೆ ತಂದಿದ್ದರೂ ಅವರಿಗೆ ಜಾತಿ ವ್ಯವಸ್ಥೆಯಿಂದ ತೀವ್ರವಾಗಿ ನೋವಾಗಿದೆ ಎನ್ನುವ ವಿಚಾರಗಳು ಇದೀಗ ವ್ಯಾಪಕವಾಗಿ ಚರ್ಚೆಗೀಡಾಗುತ್ತಿದೆ.

Kannada Pichhar ಎಂಬ ಯೂಟ್ಯೂಬ್ ಚಾನೆಲ್ ಗೆ ನೀಡಿರುವ ಸಂದರ್ಶನದಲ್ಲಿ ಈ ವಿಚಾರದ ಬಗ್ಗೆ ಕನ್ನಡ ಖ್ಯಾತ ನಟ ನೀನಾಸಂ ಸತೀಶ್ ಅವರು ಕೂಡ ಈ ಬಗ್ಗೆ ಮಾತನಾಡಿದ್ದಾರೆ. ಮನುಷ್ಯ ಶಿಕ್ಷಣ, ವಿಜ್ಞಾನ ಎಲ್ಲದರಲ್ಲಿಯೂ ಮುಂದಿದ್ದರೂ ಮನುಷ್ಯತ್ವದಲ್ಲಿ ಪ್ರಾಣಿಗಿಂತಲೂ ಹಿಂದಿದ್ದಾನೆ. ಅವನ ಮನಸ್ಸಿನಲ್ಲಿ ಬಹಳಷ್ಟು ವಿಷ ತುಂಬಿಕೊಂಡಿದೆ ಎಂದು ಅವರು ಜಾತಿ ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಂಚಾರಿ ವಿಜಯ್ ಅವರಿಗೆ ಜಾತಿ ವ್ಯವಸ್ಥೆಯಿಂದ ಪೆಟ್ಟು ಬಿದ್ದಿದೆಯೇ? ಇದರ ಬಗ್ಗೆ ಅವರು ಏನಾದರೂ ಹೇಳಿಕೊಂಡಿದ್ದರೆ ಎಂದು ಸಂದರ್ಶಕರು ಪ್ರಶ್ನಿಸಿದಾಗ ನೀನಾಸಂ ಸತೀಶ್ ಅವರು ಹೌದು, ಖಂಡಿತವಾಗಿಯೂ ಅವರು ನನ್ನ ಬಳಿಯಲ್ಲಿ ಹೇಳಿಕೊಂಡಿದ್ದರು. ನಾನ್ಯಾಕೆ ಸುಳ್ಳು ಹೇಳಲಿ? ಆ ರೀತಿ ಅವರು ಹೇಳಿದ್ದೂ, ನಿಜ. ಆಗಿದ್ದೂ ನಿಜ. ಆ ನೋವುಗಳನ್ನು, ಅವಮಾನಗಳನ್ನು ಸಂಚಾರಿ ವಿಜಯ್ ಅನುಭವಿಸಿದ್ದು ಕೂಡ ನಿಜ ಎಂದು ಹೇಳಿದರು. ಸಮಯ ಬರಲಿ, ವೇದಿಕೆ ಬರಲಿ. ಎಲ್ಲವನ್ನು ನಾನು ಮಾತನಾಡುತ್ತೇನೆ. ಅವನಿಗೆ ಏನೇನಾಗಿತ್ತು ಎನ್ನುವುದನ್ನು ನಾನು ಎಳೆಎಳೆಯಾಗಿ ವಿವರಿಸುತ್ತೇನೆ. ನನಗೆ ಏನೇ ಸಮಸ್ಯೆಯಾದರೂ ಪರವಾಗಿಲ್ಲ ನಾನು ಫೇಸ್ ಮಾಡಲು ಸಿದ್ಧ ಎಂದು ಅವರು ಹೇಳಿದರು.

ನಾನು ನಿನ್ನ ಜೊತೆಗಿದ್ದೇನೆ ಎಂದರೆ, ಊಟದಲ್ಲಿ, ತಿಂಡಿಯಲ್ಲಿ, ಜೊತೆಗೆ ಓಡಾಡೋದ್ರಲ್ಲಿ, ಹೆಗಲಿಗೆ ಕೈ ಹಾಕೋದ್ರಲ್ಲಿ ಜೊತೆಗಿರೋದಲ್ಲ, ಅವನ ವಿಚಾರದಲ್ಲಿ ನಾನಿದ್ದೇನೆ, ಆತನ ನೋವಿನಲ್ಲಿ ನಾನಿದ್ದೇನೆ. ಖಂಡಿತವಾಗಿಯೂ ನಾನು ವಿಜಯ್ ಗೆ ಆಗಿದ್ದ ನೋವುಗಳ ಬಗ್ಗೆ ಮಾತನಾಡುತ್ತೇನೆ ಎಂದು ಅವರು ಹೇಳಿದರು.




ಸಂಚಾರಿ ವಿಜಯ್ ಅವರು ಇದೇ ಕಾರಣಕ್ಕಾಗಿ ಹೊರಗಡೆ ಹೆಚ್ಚಾಗಿ ಮಾತನಾಡುತ್ತಿರಲಿಲ್ಲವೇ ಎನ್ನುವ ಸಂದರ್ಶಕರ ಪ್ರಶ್ನೆಗೆ ಉತ್ತರಿಸಿದ ಅವರು, ಇಲ್ಲಿ ವ್ಯವಸ್ಥೆಯೇ ಹೀಗಿದೆ. ಯಾರಾದರೂ ಏನಾದರೂ ಮಾತನಾಡಿದರೆ, ಇವನು ಇದೇ ರೀತಿ, ಇವನು ಇಂತಹವನೇ ಎಂದು ಆತನನ್ನು ಹೊರಗಿಟ್ಟು ಬಿಡುತ್ತಾರೆ. ಆತನ ವಿರುದ್ಧ ಮಾತನಾಡುವವನನ್ನು ಕೂಡ ಹಾಗೆಯೇ ಪ್ರತ್ಯೇಕವಾಗಿ ನೋಡುತ್ತಾರೆ. ಇಂತಹ ಸ್ಥಿತಿಯಲ್ಲಿ ಹಿಂಜರಿಕೆ ಅನ್ನೋದು ಸಾಮಾನ್ಯವಾಗಿದೆ ಎಂದು ಅವರು ಉತ್ತರಿಸಿದರು.

ಸಂಚಾರಿ ವಿಜಯ್ ಕೊನೆಯವರೆಗೂ ಮರೆಯದ ಆ ನೋವು ಏನು ಗೊತ್ತಾ? | ಕಣ್ಣೀರು ತರಿಸುತ್ತೆ ಆ ಘಟನೆ!

ಇತ್ತೀಚಿನ ಸುದ್ದಿ