ಜಾತಿಗಳ ಮಧ್ಯೆ ಜಗಳ ತಂದಿಡುವವರು ಸಿಎಂ ಆಗುತ್ತಾರಾ? | ಡಿಕೆಶಿಗೆ ತಿರುಗೇಟು ನೀಡಿದ ಮುನಿರತ್ನ
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಜಾತಿಯ ಬಗ್ಗೆ ಮಾತನಾಡಿ ಸಣ್ಣತನ ತೋರಿಸಿದ್ದಾರೆ. ಅವರು ಇಂತಹ ಸಣ್ಣತನಗಳನ್ನು ಬಿಡುವುದು ಉತ್ತಮ ಎಂದು ರಾಜರಾಜೇಶ್ವರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಹೇಳಿದ್ದಾರೆ.
ಮುನಿರತ್ನ ಒಕ್ಕಲಿಗ ಮುಖಂಡರನ್ನು ಬೆಳೆಸಿಲ್ಲ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ನಾನು ಕಾಂಗ್ರೆಸ್ ನಲ್ಲಿದ್ದಾಗ ಡಿ.ಕೆ.ಶಿವಕುಮಾರ್ ಈ ಮಾತುಗಳನ್ನು ಆಡಿಲ್ಲ, ಕೆಂಪೇಗೌಡ ಅಧ್ಯಯನ ಪೀಠದ ಉದ್ಘಾಟನೆ ಸಂದರ್ಭದಲ್ಲಿ ನನ್ನನ್ನು ಅವರು ಹಾಡಿ ಹೊಗಳಿದ್ದಾರೆ. ಈಗ ಜಾತಿ ಬಗ್ಗೆ ಮಾತನಾಡಿ ಸ್ವಾರ್ಥ ತೋರಿಸಿದ್ದಾರೆ ಎಂದು ಅವರು ಟೀಕಿಸಿದರು.
ಇಂತಹ ಹೇಳಿಕೆಗಳು ಕಾಂಗ್ರೆಸ್ ನಾಯಕರಿಗೆ ಶೋಭೆ ತರುವುದಿಲ್ಲ, ಜಾತಿಯನ್ನು ಮುಂದಿಟ್ಟುಕೊಂಡು ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲು ಸಾಧ್ಯವೇ? ಜಾತಿಗಳ ನಡುವೆ ಜಗಳ ತಂದಿರುವವರು ಮುಖ್ಯಮಂತ್ರಿಯಾಗುವುದಿಲ್ಲ ಎಂದು ಅವರು ಡಿ.ಕೆ.ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಹಾನಾಯಕ ಟೆಲಿಗ್ರಾಮ್ ಗ್ರೂಪ್ ಗೆ ಜಾಯಿನ್ ಆಗಿ