ಬಿಗ್ ಬಾಸ್ ಸ್ಪರ್ಧಿ ಜಯಶ್ರೀ ಆತ್ಮಹತ್ಯೆ | ಈ ಹಿಂದೆ ದಯಾಮರಣಕ್ಕಾಗಿ ಬೇಡಿದ್ದ ಜಯಶ್ರೀ - Mahanayaka
11:44 PM Tuesday 24 - December 2024

ಬಿಗ್ ಬಾಸ್ ಸ್ಪರ್ಧಿ ಜಯಶ್ರೀ ಆತ್ಮಹತ್ಯೆ | ಈ ಹಿಂದೆ ದಯಾಮರಣಕ್ಕಾಗಿ ಬೇಡಿದ್ದ ಜಯಶ್ರೀ

25/01/2021

ಬೆಂಗಳೂರು:  ಬಿಗ್ ಬಾಸ್ ಸ್ಪರ್ಧಿ ಜಯಶ್ರೀ  ಮಾಗಡಿ ರಸ್ತೆಯ ಪ್ರಗತಿ ಲೇ ಔಟ್ನಲ್ಲಿರುವ ಸಂಧ್ಯಾಕಿರಣ ವೃದ್ಧಾಶ್ರಮದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ನಡೆದಿದ್ದು, ಈ ಹಿಂದೆಯೂ ತಾವು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿಕೊಂಡಿದ್ದ ಜಯಶ್ರೀ ಇದೀಗ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಖಿನ್ನತೆ ಹಾಗೂ ಜಗತ್ತಿಗೆ ವಿದಾಯ ಹೇಳುತ್ತಿದ್ದೇನೆ ಎಂದು ಈ ಹಿಂದೆ ಜಯಶ್ರೀ ತಮ್ಮ ಪೋಸ್ಟ್ ನಲ್ಲಿ ಹೇಳಿಕೊಂಡಿದ್ದರು. ಬಳಿಕ ಈ ಪೋಸ್ಟ್ ನ್ನು ಡಿಲೀಟ್ ಮಾಡಿ, ನಾನು ಆರಾಮವಾಗಿದ್ದೇನೆ, ಸುರಕ್ಷಿತವಾಗಿದ್ದೇನೆ ಎಂದು ಜಯಶ್ರೀ ಪೋಸ್ಟ್ ಮಾಡಿದ್ದರು.

ಆ ಬಳಿಕ ಪೇಸ್ ಬುಕ್ ನಲ್ಲಿ ಲೈವ್ ಬಂದು ತಾನು ಸಾಯಬೇಕು. ಚಿಕ್ಕ ವಯಸ್ಸಿನಿಂದಲೂ ನನಗೆ ಆಗಬಾರದ ಘಟನೆಗಳು ಆಗಿವೆ. ಅದನ್ನು ಮರೆಯಲು ಸಾಧ್ಯವಾಗುತ್ತಿಲ್ಲ. ನಾನು ಆರ್ಥಿಕವಾಗಿ ಚೆನ್ನಾಗಿಯೇ ಇದ್ದೇನೆ. ಆದರೆ ನನಗೆ ನಡೆದ ಮೋಸಗಳನ್ನು ಮರೆಯಲು ಆಗುತ್ತಿಲ್ಲ ಎಂದು ಹೇಳಿದ್ದರು.

ಫೇಸ್ ಬುಕ್ ನಲ್ಲಿ ನನಗೆ ಬಂದಿರುವ ಕಮೆಂಟ್ ಗಳನ್ನು ನೋಡುತ್ತಿದ್ದೇನೆ. ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಲಾಗುತ್ತಿದೆ. ನಾನೊಬ್ಬಳು ಲೂಸರ್, ಹುಚ್ಚಿ, ನಾನು ಸಾಯಬೇಕು ಎಂಧು ಅವರು ಹೇಳಿದ್ದರು. ಅಲ್ಲದೇ ನನಗೆ ದಯಾಮರಣ ನೀಡಿದರೆ ಸಾಕು ಎಂದು ಅವರು ಹೇಳಿದ್ದರು.

ಇದೆಲ್ಲದರ ಬಳಿಕ ಕಿಚ್ಚ ಸುದೀಪ್ ಅವರು ಜಯಶ್ರೀ ಅವರಿಗೆ ಕರೆ ಮಾಡಿ ಫೋನ್ ನಲ್ಲಿ ಮಾತನಾಡಿ ಧೈರ್ಯ ತುಂಬಿದ್ದರು. ಇದಕ್ಕಾಗಿ ಜಯಶ್ರೀ ಧನ್ಯವಾದ ಕೂಡ ಹೇಳಿದ್ದರು. ಆದರೆ ಇದೀಗ ಅವರು ಆತ್ಮಹತ್ಯೆ ಶರಣಾಗಿದ್ದಾರೆ. ಅವರ ಆತ್ಮಹತ್ಯೆಗೆ ನಿರ್ದಿಷ್ಟ ಕಾರಣಗಳು ತಿಳಿದಿಲ್ಲ. ಆದರೆ ಅವರು ಬಹಳಷ್ಟು ಸಮಯಗಳಿಂದ ಖಿನ್ನತೆಗೆಗೆ ಒಳಗಾಗಿದ್ದರು.

ಇತ್ತೀಚಿನ ಸುದ್ದಿ