ಬಿ ಎಸ್ ವೈ ಮೊದಲು ಶಾಸಕನಾಗಿದ್ದಾಗ ಬಳಸಿದ್ದ ಕಾರಿನಲ್ಲೇ ತೆರಳಿ ವಿಜಯೇಂದ್ರ ನಾಮಪತ್ರ ಸಲ್ಲಿಕೆ
![bs yadiurappa](https://www.mahanayaka.in/wp-content/uploads/2023/04/bs-yadiurappa.jpg)
ಶಿವಮೊಗ್ಗ : ಶಿಕಾರಿಪುರ ಬಿಜೆಪಿ ಅಭ್ಯರ್ಥಿ ಬಿ.ವೈ ವಿಜಯೇಂದ್ರ ಇಂದು ನಾಮಪತ್ರ ಸಲ್ಲಿಕೆ ಮಾಡಿದವರು. ನಾಮಪತ್ರ ಸಲ್ಲಿಕೆಗೆ ತೆರಳುವ ಸಂದರ್ಭದಲ್ಲಿ ವಿಜಯೇಂದ್ರ ತಮ್ಮ ತಂದೆಗೆ ರಾಜಕೀಯ ಅದೃಷ್ಟ ತಂದುಕೊಟ್ಟ ಕಾರನ್ನು ಬಳಕೆ ಮಾಡಿದ್ದು ವಿಶೇಷವಾಗಿತ್ತು.
ಬಿ ಎಸ್ ವೈ ಯಡಿಯೂರಪ್ಪ ನಾಮಪತ್ರ ಸಲ್ಲಿಸಲು ತೆಗೆದುಕೊಂಡು ಹೋಗುತ್ತಿದ್ದ ಹಳೆಯ ಅಂಬಾಸಿಡರ್ ಕಾರನ್ನು ಬಳಸಿ ಇಂದು ವಿಜಯೇಂದ್ರ ಕೂಡ ಶಿಕಾರಿಪುರದಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಬಿ ಎಸ್ ವೈ ಮೊದಲ ಬಾರಿಗೆ ಶಾಸಕರಾಗಿದ್ದ ಸಂದರ್ಭದಲ್ಲಿ ಈ ಕಾರನ್ನು ಬಳಕೆ ಮಾಡಿದ್ದರು. ಇದಾದ ಬಳಿಕ ಪ್ರತಿ ಬಾರಿ ಉಮೇದುವಾರಿಕೆ ಸಲ್ಲಿಸಲು ತೆರಳವಾಗಲೂ ಸಹ ಇದೇ ಕಾರನ್ನು ಬಳಸುತ್ತಿದ್ದರು. ಇದೀಗ ಅಪ್ಪನ ಹಾದಿಯನ್ನು ಪುತ್ರ ತುಳಿದಂತಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw