ಜೆಡಿಎಸ್ ನವರ ಹತಾಶೆಯ ಟೀಕೆಗೆ ತಲೆಕೆಡಿಸಿಕೊಳ್ಳುವುದಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್
16/11/2023
ಬೆಂಗಳೂರು: “ಕೊಳಕು ಮಂಡಲ ಎಂಬ ಟೀಕೆಯನ್ನು ಯಾರೋ ಕಾರ್ಯಕರ್ತರು ಅಥವಾ ಸಿಬ್ಬಂದಿ ಮಾಡಿರಬಹುದು. ಇಂತಹ ಟೀಕೆ ಸರಿಯಲ್ಲ. ಹತಾಶೆಯಲ್ಲಿ ಟೀಕೆ ಮಾಡಿರುತ್ತಾರೆ. ಈ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ” ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ಜೆಡಿಎಸ್ ಪಕ್ಷದ ಎಕ್ಸ್ ಖಾತೆಯಲ್ಲಿ ನಿಮ್ಮನ್ನು ಕೊಳಕು ಮಂಡಲ ಹಾವು ಎಂಬ ವೈಯಕ್ತಿಕ ಟೀಕೆ ಮಾಡಲಾಗಿದೆ ಎಂದು ಮಾಧ್ಯಮಗಳು ಹೇಳಿದಾಗ ಶಿವಕುಮಾರ್ ಅವರು ಈ ರೀತಿ ಪ್ರತಿಕ್ರಿಯೆ ವ್ಯಕ್ತಪಡಿಸಿದರು.
“ಇದನ್ನು ಅವರ ಪಕ್ಷದ ನಾಯಕರೇ ಮಾತನಾಡಿದ್ದಾರೆ ಎಂದು ಹೇಳುವುದಿಲ್ಲ. ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಕರೆಂಟ್ ಅಕ್ರಮವಾಗಿ ಬಳಸಿದ್ದ ಬಗ್ಗೆ ಕುಮಾರಸ್ವಾಮಿ ಅವರು ತಪ್ಪೊಪ್ಪಿಕೊಂಡಿದ್ದಾರೆ. ಅದು ಅವರ ದೊಡ್ಡತನ” ಎಂದರು.
ಬೆಸ್ಕಾಂ ಸಿಬ್ಬಂದಿ ದೂರು ದಾಖಲಿಸಿಕೊಂಡಿರುವ ಬಗ್ಗೆ ಪ್ರಶ್ನೆ ಕೇಳಿದಾಗ, “ಈ ಬಗ್ಗೆ ನನಗೆ ಗೊತ್ತಿಲ್ಲ. ಅವರು ದಂಡ ಕಟ್ಟುತ್ತೇನೆ ಎಂದು ಹೇಳಿದ ವಿಚಾರ ಮಾಧ್ಯಮಗಳ ಮೂಲಕ ತಿಳಿದಿದ್ದೇನೆ” ಎಂದು ತಿಳಿಸಿದರು.