ಜೆಡಿಎಸ್ ನಾಯಕರು ತಂದ ಅನುದಾನಕ್ಕೆ ಶಾಸಕ ಪ್ರೀತಂ ಗೌಡ ಹೆಸರು: ಜೆಡಿಎಸ್ ಯುವ ಮುಖಂಡ ಪ್ರವೀಣ್ ಗೌಡ ಕಿಡಿ - Mahanayaka

ಜೆಡಿಎಸ್ ನಾಯಕರು ತಂದ ಅನುದಾನಕ್ಕೆ ಶಾಸಕ ಪ್ರೀತಂ ಗೌಡ ಹೆಸರು: ಜೆಡಿಎಸ್ ಯುವ ಮುಖಂಡ ಪ್ರವೀಣ್ ಗೌಡ ಕಿಡಿ

praveen gowda
10/03/2023

ಹಾಸನ: ಚೆನ್ನಪಟ್ಟಣದ ಅಭಿವೃದ್ಧಿಗಾಗಿ 2020ರ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅಂದಿನ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು 144 ಕೋಟಿ ರೂಪಾಯಿಗಳನ್ನು ಬಜೆಟ್ ನಲ್ಲಿ ಮೀಸಲಿಟ್ಟಿದ್ದರು. ಇದೀಗ ಈ ಅನುದಾನದಲ್ಲಿ ನಡೆಸಲಾಗಿರುವ ಅಭಿವೃದ್ಧಿ ಕೆಲಸಗಳಿಂದ ಶಾಸಕ ಪ್ರೀತಂ ಗೌಡ ಅವರು ಪ್ರಚಾರ ಪಡೆದುಕೊಳ್ಳುತ್ತಿದ್ದು, ಜನರ ಕಣ್ಣೀಗೆ ಮಣ್ಣೆರಚುತ್ತಿದ್ದಾರೆ ಎಂದು ಯುವ ಜೆಡಿಎಸ್ ಮುಖಂಡ ಪ್ರವೀಣ್ ಗೌಡ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


Provided by

ಸಮ್ಮಿಶ್ರ ಸರ್ಕಾರದಲ್ಲಿ ಹೆಚ್.ಡಿ.ರೇವಣ್ಣನವರ ಸಮ್ಮುಖದಲ್ಲಿ ಚನ್ನಪಟ್ಟಣದ ಅಭಿವೃದ್ಧಿಗಾಗಿ 144 ಕೋಟಿ ರೂಪಾಯಿಗಳನ್ನು ಬಜೆಟ್ ನಲ್ಲಿ ಮೀಸಲಿಸಲಾಗಿತ್ತು. ಆದರೆ ಸಮ್ಮಿಶ್ರ ಸರ್ಕಾರ ಪತನಗೊಂಡ ಬಳಿಕ ಈ ಅನುದಾನವನ್ನು ಡಿವಿಜನ್ ಮಾಡಿಕೊಂಡು ಹಾಸನದಲ್ಲಿ ರಸ್ತೆ, ಪಾರ್ಕ್, ಚರಂಡಿ, ಕೆರೆ ಮೊದಲಾದ ಅಭಿವೃದ್ಧಿ ಕಾರ್ಯಗಳಿಗೆ ಶಾಸಕರು ಬಳಸಿದ್ದರು. ಆದರೆ ಇದು ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್ ನಾಯಕರಾದ ಕುಮಾರಸ್ವಾಮಿ  ಹಾಗೂ ರೇವಣ್ಣನವರ ಕೊಡುಗೆ ಎನ್ನುವ ವಿಚಾರವನ್ನು ಮುಚ್ಚಿಟ್ಟ ಪ್ರೀತಂ ಗೌಡ ಅವರು, ಇದು ನಮ್ಮ ಸಾಧನೆ ಎನ್ನುವಂತೆ ಜನರ ಕಣ್ಣಿಗೆ ಮಣ್ಣೆರಚುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಈ ಯೋಜನೆಯನ್ನು ತಂದವರು ಯಾರು? ಈ ಅಭಿವೃದ್ಧಿ ಕಾರ್ಯಕ್ಕೆ ಶ್ರಮಿಸಿದವರು ಯಾರು ಅನ್ನೋ ವಿಚಾರವನ್ನು ಪ್ರೀತಂ ಗೌಡ ಜನತೆಯಿಂದ ಮುಚ್ಚಿಟ್ಟಿದ್ದಾರೆ. ಯಾವುದೇ ಮಾಧ್ಯಮದಲ್ಲಿ ಈ ಅನುದಾನದ ಮೂಲ ಯಾವುದು ಅನ್ನೋದರ ಬಗ್ಗೆ ಅವರು ತುಟಿ ತೆರೆಯುತ್ತಿಲ್ಲ, ಜೆಡಿಎಸ್ ನಾಯಕರು ಶ್ರಮಪಟ್ಟು ನೀಡಿರುವ ಅನುದಾನವನ್ನು ತಮ್ಮದೆಂದು ಬಿಂಬಿಸುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರವೀಣ್ ಗೌಡ ಪ್ರಶ್ನಿಸಿದ್ದಾರೆ.


Provided by

ಜನರ ಕಣ್ಣಿಗೆ ಮಣ್ಣೆರಚಲು ಜನರು ದಡ್ಡರಲ್ಲ ಅನ್ನೋದನ್ನು ಪ್ರೀತಂ ಗೌಡ ಅವರು ತಿಳಿಯಬೇಕಿದೆ. ಇನ್ನಾದರೂ ನೀವು ಸತ್ಯವನ್ನು ಬಾಯ್ತೆರೆದು ಮಾತನಾಡಿ, ಇದು ಜೆಡಿಎಸ್ ನಾಯಕರ ಶ್ರಮದ ಅಭಿವೃದ್ಧಿ ಕಾರ್ಯ ಅನ್ನೋದನ್ನು ಬಹಿರಂಗಗೊಳಿಸಿ ಎಂದ ಅವರು, ನಿಮ್ಮ ಸರ್ಕಾರ ಈ ಬಾರಿ ಅಂತ್ಯ ಕಾಣಲಿದೆ  ಎಂದಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ