ಜೀವ ಉಳಿಸಿದ ಆ್ಯಪಲ್​ ವಾಚ್ - Mahanayaka
10:12 PM Thursday 14 - November 2024

ಜೀವ ಉಳಿಸಿದ ಆ್ಯಪಲ್​ ವಾಚ್

apple
19/03/2022

ಹರಿಯಾಣ: ಆಧುನಿಕ ತಂತ್ರಜ್ಞಾನ ಯುಗದಲ್ಲಿ ಮಾನವನ ಪ್ರತಿಯೊಂದು ಕಾರ್ಯದಲ್ಲೂ ಜತೆಯಾಗಿ ನಿಲ್ಲಬಲ್ಲ ಸಾವಿರಾರು ಸಾಧನಗಳು ಲಭ್ಯವಿವೆ. ಇವುಗಳಲ್ಲಿ ಕೆಲವು ಮಾನವನ ಅಸ್ತಿತ್ವಕ್ಕೆ ಅಪಾಯಕಾರಿಯಾಗಿದ್ದರೆ ಇನ್ನೂ ಕೆಲವು ಮನುಷ್ಯರ ದಿನನಿತ್ಯದ ಜೀವನವನ್ನು ಸುಲಭಗೊಳಿಸುವಲ್ಲಿ ಸಹಾಯ ಮಾಡುತ್ತವೆ.

ಆ್ಯಪಲ್ ವಾಚ್ ಜೀವ ಉಳಿಸುವ ಸಾಧನವಾಗಿ ಬದಲಾಗುವ ಹಲವಾರು ಕಥೆಗಳನ್ನು ಕೇಳಿರಬಹುದು. ಅದರಂತೆ ಇದೀಗ ಮತ್ತೊಮ್ಮೆ ಅಂತಹದೇ ಘಟನೆ ನಡೆದಿದೆ. ತನ್ನ ವಿಶಿಷ್ಟ ತಂತ್ರಜ್ಞಾನದ ಮೂಲಕ ಹೆಸರುವಾಸಿಯಾಗಿರುವ ಆ್ಯಪಲ್‌ನ ಸಾಧನವೊಂದು ಹರಿಯಾಣದ ವ್ಯಕ್ತಿಯೊಬ್ಬರ ಜೀವ ಉಳಿಸಿದೆ.

ಹರಿಯಾಣದ ನಿವಾಸಿಯಾದ ನಿತೇಶ್ ಚೋಪ್ರಾ (34 ) ಅವರು ಅಸೌಖ್ಯದಿಂದ ಬಳಲುತ್ತಿದ್ದರು, ಅವರಿಗೆ ಕಡಿಮೆ ಶಕ್ತಿಯ ಮಟ್ಟಗಳು ಮತ್ತು ಎದೆನೋವು ಹೊಂದಿದ್ದರು. ಹೀಗಾಗಿ ಪತ್ನಿ ನೇಹಾ ಅವರ ಆರೋಗ್ಯದ ಸರಿಯಾದ ಮಾಹಿತಿ ತಿಳಿದುಕೊಳ್ಳಲು ನಿತೀಶ್​ಗೆ ಕಳೆದ ವರ್ಷ ಉಡುಗೊರೆಯಾಗಿ ಆ್ಯಪಲ್ ವಾಚ್ 6 ನೀಡಿದ್ದರು. ಅದರಂತೆ ನಿತೀಶ್​​ ಆ ವಾಚ್​ ಅನ್ನು ಧರಿಸಿದ್ದರು.

ಅನಾರೋಗ್ಯದಿಂದ ಬಳಸುತ್ತಿದ್ದ ನಿತೀಶ್​ ಅವರ ಆರೋಗ್ಯದ ಮಾಹಿತಿಯನ್ನು ಆ್ಯಪಲ್​ ವಾಚ್​ ನೀಡುತ್ತಿತ್ತು. ಇತ್ತೀಚೆಗೆ ಇಸಿಜಿ ಮಾಹಿತಿಯನ್ನು ಆ್ಯಪಲ್ ವಾಚ್​ ನೀಡಿದೆ ಮತ್ತು ಅದರ ಆರೋಗ್ಯದಲ್ಲಿ ಕೊಂಚ ಏರುಪೇರಾಗಿರುವುದನ್ನು ಹೇಳಿದೆ.




ಆ್ಯಪಲ್​ ವಾಚ್​ ನಿತೀಶ್​ಗಾದ ಆರೋಗ್ಯದ ಕುರಿತಾದ ಸರಿಯಾದ ಮಾಹಿತಿಯನ್ನು ಆ್ಯಪಲ್​ ವಾಚ್​ ತೋರಿಸಿದಂತೆಯೇ ಅವರು ತಕ್ಷಣ ಹತ್ತಿರದ ಆಸ್ಪತ್ರೆಗೆ ತೆರಳಿದರು. ಆಸ್ಪತ್ರೆಯಲ್ಲಿ ಆಂಜಿಯೋಗ್ರಫಿ ಮಾಡಿದ ನಂತರ, ನಿತೇಶ್ ಅವರ ಅಪಧಮನಿಗಳಲ್ಲಿ 99.9 ಪ್ರತಿಶತದಷ್ಟು ತೊಂದರೆ ಕಾಣಿಸಿದೆ ಎಂದು ತಿಳಿದುಬಂತು.

ಇದೀಗ ಆರೋಗ್ಯವಾಗಿರುವ ನಿತೇಶ್ ಇತ್ತೀಚೆಗಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆ್ಯಪಲ್ ವಾಚ್‌ನ ಈ ರೀತಿಯ ಗಂಭೀರ ವಿಷಯದ ಬಗ್ಗೆ ಎಚ್ಚರಿಸುವ ಸಾಮರ್ಥ್ಯದಿಂದ ಪ್ರೇರೇಪಿಸಲ್ಪಟ್ಟ ನೇಹಾ ಆಪಲ್ ಸಿಇಒ ಟಿಮ್ ಕುಕ್‌ಗೆ ಇಮೇಲ್ ಬರೆದು ಆ್ಯಪಲ್ ವಾಚ್ ತನ್ನ ಗಂಡನ ಜೀವವನ್ನು ಹೇಗೆ ಉಳಿಸಿತು ಎಂದು ತಿಳಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮಕ್ಕಳಿಗೆ ಬೇಕಿರುವುದು ಭವಿಷ್ಯ ರೂಪಿಸುವ ಶಿಕ್ಷಣ: ಎಚ್‌.ಡಿ.ಕುಮಾರಸ್ವಾಮಿ

ಎಸ್ಸೆಸೆಲ್ಸಿ ಆದವರಿಗೆ ಉದ್ಯೋಗವಕಾಶ

ಬಂಗಾಳಕೊಲ್ಲಿಯಲ್ಲಿ ‘ಅಸನಿ’ ಚಂಡಮಾರುತ: ಹವಾಮಾನ ಇಲಾಖೆ ಮುನ್ಸೂಚನೆ

ಬೆಲೆ ಏರಿಕೆಯ ಬಿಸಿಯಿಂದ ಜನರನ್ನು ರಕ್ಷಿಸಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

ಇತ್ತೀಚಿನ ಸುದ್ದಿ