ಜೀವನ ತುಂಬಾ ಚಿಕ್ಕದು ನೆಗೆಟಿವ್ ಯೋಚನೆ ಬಿಟ್ಟು ಬಿಡಿ | ಮೇಘನಾ ರಾಜ್

chiru meghana
01/11/2021

ಬೆಂಗಳೂರು:  ಜೀವನ ತುಂಬಾ ಚಿಕ್ಕದು. ನಕಾರಾತ್ಮಕತೆಯನ್ನು ತೊಡೆದು ಹಾಕಿ ಎಂದು ನಟಿ ಮೇಘನಾರಾಜ್  ಸಾಮಾಜಿಕ ಜಾಲತಾಣದಲ್ಲಿ  ಚಿರು ಅಭಿಮಾನಿಗಳು ಮಾಡಿರುವ ಪೋಸ್ಟ್ ನ್ನು ಶೇರ್ ಮಾಡಿಕೊಂಡಿದ್ದಾರೆ.

ಮೇಘನಾ ತಮ್ಮ ಇನ್ ಸ್ಟಾದಲ್ಲಿ ಬರೆದುಕೊಂಡಿರುವಂತೆ, ಜೀವನ ತುಂಬಾ ಚಿಕ್ಕದಾಗಿದೆ. ನಕಾರಾತ್ಮಕತೆಯನ್ನು ತೊಡೆದು ಹಾಕಿ, ಗಾಸಿಪ್ ಮರೆತು ಬಿಡಿ. ಕಾಳಜಿ ಇಲ್ಲದ ಜನರಿಗೆ ವಿದಾಯ ಹೇಳಿ. ಯಾವಾಗಲೂ ಇರುವ ಜನರೊಂದಿಗೆ  ಸಮಯ ಕಳೆಯಿರಿ ಎಂದು ಚಿರು  ಫೊಟೋ ಬಳಸಿ ಬರೆಯಲಾಗಿದ್ದು, ಇದನ್ನು ಮೇಘನಾ ಹಂಚಿಕೊಂಡಿದ್ದಾರೆ.

ಚಿರು ಅಭಿಮಾನಿಗಳ ಇನ್ ಸ್ಟಾದಲ್ಲಿ ಈ ಪೋಸ್ಟ್ ನ್ನು ಹಂಚಿಕೊಂಡು ಮೇಘನಾ ಅವರಿಗೆ  ಟ್ಯಾಗ್ ಮಾಡಲಾಗಿತ್ತು. ಈ ಚಿತ್ರವನ್ನು ಅವರು  ತಮ್ಮ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಚಿರು  ಕೂಡ ಯಾರೂ ನಿರೀಕ್ಷಿಸದ ರೀತಿಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು.  ಚಿರು ಸಾವು ಕೂಡ ಕರ್ನಾಟಕದಲ್ಲಿ ಭಾರೀ ಚರ್ಚೆಯಾಗಿತ್ತು. ಇಷ್ಟು ಸಣ್ಣ ವಯಸ್ಸಿನಲ್ಲಿ ಮೃತಪಡುವುದೇ? ಇದು ಸಾಯುವ ವಯಸ್ಸೆ? ಇದು ಅನ್ಯಾಯ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb

ಇತ್ತೀಚಿನ ಸುದ್ದಿ

Exit mobile version