ಚಿನ್ನಾಭರಣ, ನಗದು ಕಳವು: ಕದ್ದಿರೋದು ಯಾರೆಂದು ತಿಳಿದಾಗ ಮನೆ ಮಾಲಿಕನಿಗೆ ಶಾಕ್!
ಪಶ್ಚಿಮವಿಭಾಗ, ಜ್ಞಾನಭಾರತಿ ಪೊಲೀಸ್ ಮಾಲೀಕರ ಮನೆಯಲ್ಲಿ ಕಳವು ಮಾಡಿದ್ದ ಆರೋಪಿಯನ್ನು ಬಂಧಿಸಿ ಬಂಧಿತರಿಂದ ಸುಮಾರು 1.50 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಜ್ಞಾನ ಭಾರತಿ ಪೊಲೀಸ್ ಠಾಣೆ ವ್ಯಾಪಿ ನಿವಾಸಿಯೊಬ್ಬರ ಮನೆಯಲ್ಲಿ ಚಿನ್ನಾಭರಣ ನಗದು ಹಣ ಕಳವು ಆಗಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಕೇಸಿನ ತನಿಖೆ ಕೈಗೊಂಡ ಜ್ಞಾನಭಾರತಿ ಪೊಲೀಸ್ ಠಾಣೆಯ ಅಧಿಕಾರಿಗಳು ನಂಬಿಕೆಯಿಂದ ಮನೆ ಕೆಲಸ ಕೊಟ್ಟಿದ್ದ ಮಾಲೀಕರ ಮನೆಯಲ್ಲಿ ಮನೆ ಕೆಲಸ ಮಾಡುತ್ತಿದ್ದ ಮಹಿಳೆಯೇ ಮನೆಯ ಮಾಲೀಕರಿಗೆ ತಿಳಿಯದಂತೆ ಆಗಿಂದಾಗ್ಗೆ ಅವಕಾಶ ಸಿಕ್ಕಾಗಲೆಲ್ಲಾ ಹಣ, ಚಿನ್ನಾಭರಣ ಕಳವು ಮಾಡಿರುವುದಾಗಿ ಪತ್ತೆ ಮಾಡಿದ್ದಾರೆ.
ಆರೋಪಿಯಿಂದ 1.50ಲಕ್ಷ ರೂ ಬೆಲೆ ಬಾಳುವ 31 ಗ್ರಾಂ ತೂಕದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಳವು ಮಾಡಿದ್ದ ನಗದು ಹಣವನ್ನು ಆಕೆಯು ತನ್ನ ಸ್ವಂತಕ್ಕೆ ಬಳಕೆ ಮಾಡಿಕೊಂಡಿರುವುದಾಗಿ ತಿಳಿಸಿದ್ದು, ದಸ್ತಗಿರಿಯಾದ ಮಹಿಳೆಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಮನೆ ಕೆಲಸಕ್ಕೆ ನೇಮಕ ಮಾಡಿಕೊಳ್ಳುವ ಮೊದಲು ಅವರ ನಡ ತೆ ಪೂರ್ವ ಚರಿತ್ರೆ ಬಗ್ಗೆ ತಪಾಸಣೆ ನಡೆಸಿಕೊಳ್ಳಬೇಕೆಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw