ಜಾರ್ಖಂಡ್ ಚುನಾವಣೆ: ಬಿಜೆಪಿ ಪರ ಫೇಸ್ ಬುಕ್ ಮಾಲೀಕನಿಂದ ಪ್ರಚಾರ? - Mahanayaka
10:14 AM Monday 23 - December 2024

ಜಾರ್ಖಂಡ್ ಚುನಾವಣೆ: ಬಿಜೆಪಿ ಪರ ಫೇಸ್ ಬುಕ್ ಮಾಲೀಕನಿಂದ ಪ್ರಚಾರ?

08/11/2024

ಫೇಸ್ ಬುಕ್, ವಾಟ್ಸಾಪ್ ಮತ್ತು ಇನ್ಸ್ಟಾಗ್ರಾಮ್ ಗಳ ಮಾಲೀಕನಾಗಿರುವ ಮೆಟಾ ಕಂಪನಿಯು ಜಾರ್ಖಂಡ್ ಚುನಾವಣೆಯ ಈ ಸಂದರ್ಭದಲ್ಲಿ ಬಿಜೆಪಿ ಪರ ಕೆಲಸ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ನ ಬಿಜೆಪಿ ಪರ ಪೇಜುಗಳಲ್ಲಿ ಮುಸ್ಲಿಮರನ್ನು ಅತ್ಯಾಚಾರಿಗಳು, ಕ್ರಿಮಿನಲ್ ಗಳು, ಲವ್ ಜಿಹಾದಿಗಳು ಮುಂತಾಗಿ ಯಥೇಚ್ಛ ಜಾಹೀರಾತುಗಳನ್ನು ನೀಡುತ್ತಿದೆ ಎಂದು ವಿವಿಧ ಸಂಘಟನೆಗಳು ನಡೆಸಿದ ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ದಲಿತ ಸಾಲಿಡಾರಿಟಿ ಫಾರಂ, ಹಿಂದೂಸ್ ಫಾರ್ ಹ್ಯೂಮನ್ ರೈಟ್ಸ್, ಇಂಡಿಯಾ ಸಿವಿಲ್ ವಾಚ್ ಇಂಟರ್ನ್ಯಾಷನಲ್, ಇಂಡಿಯನ್ ಅಮೆರಿಕನ್ ಮುಸ್ಲಿಂ ಕೌನ್ಸಿಲ್ ಮತ್ತು ಟೆಕ್ ಜಸ್ಟಿಸ್ ಪ್ರಾಜೆಕ್ಟ್ ಮುಂತಾದ ಸಂಸ್ಥೆಗಳು ವಿಸ್ತೃತ ಅಧ್ಯಯನ ವರದಿಯನ್ನು ಬಿಡುಗಡೆಗೊಳಿಸಿವೆ. ಮುಸ್ಲಿಂ ದ್ವೇಷವನ್ನು ಪ್ರಚೋದಿಸುವ ಕೋಮು ಪ್ರಚೋದಕ ಜಾಹೀರಾತುಗಳ ಸುಮಾರು 87 ಖಾತೆಗಳನ್ನು ಈ ವರದಿಯಲ್ಲಿ ಎತ್ತಿ ಹೇಳಲಾಗಿದೆ.
ಬದ್ಲೆಗಾ ಜಾರ್ಖಂಡ್ ಎಂಬ ಫೇಸ್ಬುಕ್ ಪುಟಕ್ಕೆ 28,000 ಫಾಲೋವರ್ಸ್ ಗಳಿದ್ದಾರೆ ಮತ್ತು ಇದರ ಇನ್‌ಸ್ಟಾ ಗ್ರಾಂ ಖಾತೆಯಲ್ಲಿ 37,000 ಫಾಲೋವರ್ಸ್ ಗಳಿದ್ದಾರೆ. ಈ ಖಾತೆಗೆ 1,40,000 ರೂಪಾಯಿಯನ್ನು ಖರ್ಚು ಮಾಡಲಾಗಿದೆ. 340 ಪೋಸ್ಟುಗಳ ಮೂಲಕ ಒಂದು ಕೋಟಿ ಜನರನ್ನು ತಲುಪುವ ಗುರಿಯನ್ನು ಹೊಂದಲಾಗಿದೆ. ಈ ಖಾತೆಯಲ್ಲಿ ಪ್ರಕಟವಾಗಿರುವ ಪೋಸ್ಟುಗಳೆಲ್ಲ ಮುಸ್ಲಿಂ ವಿರೋಧಿ ಮತ್ತು ದ್ವೇಷದಿಂದ ಕೂಡಿದೆ. ಮುಸ್ಲಿಮರನ್ನು ಅತ್ಯಾಚಾರಿಗಳು, ಕ್ರಿಮಿನಲ್ ಗಳು ಮತ್ತು ಲವ್ ಜಿಹಾದಿಗಳು ಎಂದು ಬಿಂಬಿಸಲಾಗಿದೆ.

ಈ ವರದಿಯನ್ನು ಎತ್ತಿಕೊಂಡಿರುವ ಜಾರ್ಖಂಡ ಮುಖ್ಯಮಂತ್ರಿ ಶಿಬು ಸೊರೇನ್ ಅವರು ಚುನಾವಣಾ ಆಯೋಗದ ನಿಷ್ಕ್ರಿಯತೆಯನ್ನು ಪ್ರಶ್ನಿಸಿದ್ದಾರೆ. ಪ್ರಜಾಸತ್ತೆಯನ್ನು ದಮನ ಮಾಡುವುದಕ್ಕೆ ಬಿಜೆಪಿಗೆ ಗುತ್ತಿಗೆ ಕೊಟ್ಟಿದೆಯೇ ಎಂದವರು ಪ್ರಶ್ನಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಇತ್ತೀಚಿನ ಸುದ್ದಿ