ಜಿಲೆಟಿನ್ ಸಾಗಿಸುತ್ತಿದ್ದ ಮತ್ತೊಂದು ಲಾರಿ ಸ್ಫೋಟ: 6 ಕಾರ್ಮಿಕರು ಸಾವು | ಅಕ್ರಮ ಸ್ಫೋಟಕ ನಿಯಂತ್ರಿಸಲು ಸರ್ಕಾರ ವಿಫಲ
ಚಿಕ್ಕಬಳ್ಳಾಪುರ: ಅಕ್ರಮ ಜಿಲೆಟಿನ್ ಸಾಗಿಸುತ್ತಿದ್ದ ಸಂದರ್ಭದಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ 6 ಮಂದಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ತಾಲೂಕಿನ ಹೀರೇಂನಾಗವೇಲಿ ಗ್ರಾಮದ ಪೆರೇಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆರುಮಂದಿ ಕಾರ್ಮಿಕರ ದೇಹಗಳು ಗುರುತಿಸಲು ಸಾಧ್ಯವಾಗದಷ್ಟು ಛಿದ್ರವಾಗಿದ್ದು, ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಕ್ರಮ ಗಣಿಗಾರಿಕೆಯ ವಿರುದ್ಧ ಕ್ರಮಕೈಗೊಳ್ಳಲು ರಾಜ್ಯ ಸರ್ಕಾರ ವಿಫಲವಾಗಿದ್ದು, ಇತ್ತೀಚೆಗಷ್ಟೆ ನಡೆದ ಭಾರೀ ಸ್ಫೋಟದ ಬೆನ್ನಲ್ಲೇ ಮತ್ತೊಂದು ಸ್ಫೋಟ ನಡೆದಿದ್ದು, ಪೊಲೀಸರ ಭದ್ರತೆಗಳ ನಡುವೆ ಹೇಗೆ ಜಿಲೆಟಿನ್ ಗಳನ್ನು ಸಾಗಿಸಲಾಗುತ್ತಿದೆ ಎನ್ನುವ ಅನುಮಾನಗಳು ಕೇಳಿ ಬಂದಿವೆ.
ಹೀರೇನಾಗವಲ್ಲಿ ಗ್ರಾಮದ ಒಬ್ಬ ವ್ಯಕ್ತಿ, ಆಂಧ್ರಪ್ರದೇಶದ ಮೂವರು ವ್ಯಕ್ತಿಗಳು, ನೇಪಾಳದ ಒಬ್ಬರು, ಬಾಗೇಪಲ್ಲಿಯ ಒಬ್ಬ ಕಾರ್ಮಿಕರು ಮೃತ ದುರ್ದೈವಿಗಳು ಘಟನಾ ಸ್ಥಳಕ್ಕೆ ಉಸ್ತುವಾರಿ ಹಾಗೂ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಭೇಟಿ ನೀಡಿದ್ದು, ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದ್ದಾರೆ.