ಜಿಂಕೆಯನ್ನು ಬೇಟೆಯಾಡುತ್ತಿದ್ದವರ ಮೇಲೆ ಅರಣ್ಯಾಧಿಕಾರಿಗಳಿಂದ ಗುಂಡಿನ ದಾಳಿ!
ಮಂಡ್ಯ: ಜಿಂಕೆಯನ್ನು ಬೇಟೆಯಾಡುತ್ತಿದ್ದವರ ಮೇಲೆ ಅರಣ್ಯಾಧಿಕಾರಿಗಳು ಗುಂಡಿನ ದಾಳಿ ನಡೆಸಿದ ಘಟನೆ ಶುಕ್ರವಾರ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬಸವನ ಬೆಟ್ಟ ಅರಣ್ಯ ಪ್ರದೇಶದಲ್ಲಿ ನಡೆದಿದ್ದು, ಬೇಟೆಗಾರರ ಗುಂಪಿನಲ್ಲಿ ನಾಲ್ವರು ಇದ್ದು, ಓರ್ವನಿಗೆ ಗಾಯವಾಗಿದೆ.
ಅರಣ್ಯ ಪ್ರದೇಶದ ಮುಖ್ಯ ರಸ್ತೆಯಲ್ಲಿ ಅಡಗಿ ಕುಳಿತಿದ್ದ ನಾಲ್ವರು ಜಿಂಕೆ ಸೇರಿದಂತೆ ಇತರ ಪ್ರಾಣಿಗಳು ರಸ್ತೆಯನ್ನು ದಾಟುವಾಗ ಗುಂಡು ಹಾರಿಸಿ ಬೇಟೆಯಾಡುತ್ತಿದ್ದರು. ಈ ವಿಚಾರ ತಿಳಿದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಆರೋಪಿಗಳನ್ನು ಬಂಧಿಸಲು ಯತ್ನಿಸಿದ್ದಾರೆ.
ಈ ವೇಳೆ ಬೇಟೆಗಾರರು ಅಧಿಕಾರಿಗಳ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ್ದು, ಈ ವೇಳೆ ಅಧಿಕಾರಿಗಳು ಸಹ ಪ್ರತಿದಾಳಿ ನಡೆಸಿದ್ದಾರೆ. ಈ ವೇಳೆ ಓರ್ವನಿಗೆ ಗಾಯವಾಗಿದ್ದು, ಉಳಿದವರು ಪರಾರಿಯಾಗಿದ್ದಾರೆ. ಗಾಯಾಳುವನ್ನು ಗೊಲ್ಲರದೊಡ್ಡಿ ಗ್ರಾಮದ ವೆಂಕಟೇಶ್ ಎಂದು ಗುರುತಿಸಲಾಗಿದೆ. ಬೇಟೆಗಾರರ ತಂಡ ಎರಡು ಜಿಂಕೆಗಳನ್ನು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಇನ್ನಷ್ಟು ಸುದ್ದಿಗಳು…
“ನಾವು ತಯಾರಾಗಿದ್ದೇವೆ ಎನ್.ಇ.ಪಿ ಬಗ್ಗೆ ಚರ್ಚೆಗೆ ನೀವು ತಯಾರಾಗಿದ್ದೀರಾ?”: ಕ್ಯಾಂಪಸ್ ಫ್ರಂಟ್ ಭಿತ್ತಿಪತ್ರ ಪ್ರದರ್ಶನ
ಹಲ್ಲಿನಿಂದಲೇ ರಿಬ್ಬನ್ ಕತ್ತರಿಸಿ ಶೋರೂಂ ಉದ್ಘಾಟಿಸಿದ ಸಚಿವ! | ಜಗತ್ತಿನಲ್ಲೇ ಇದು ಮೊದಲು!
ಗ್ಯಾಸ್, ತೈಲ ಬೆಲೆ ಏರಿಕೆಗೆ ತಾಲಿಬಾನ್ ಕಾರಣ ಎಂದ ಶಾಸಕ ಅರವಿಂದ್ ಬೆಲ್ಲದ್!
ತ್ರಿಸ್ಟಾರ್ ಹೊಟೇಲ್ ನಲ್ಲಿ 8 ತಿಂಗಳು ತಂಗಿದ | 25 ಲಕ್ಷ ರೂ. ಬಿಲ್ ಆದ ಬಳಿಕ ಆತ ಮಾಡಿದ್ದೇನು ಗೊತ್ತಾ?
ಗಂಡ, ಹೆಂಡತಿ ನಡುವೆ ರಾಜಿ ಪಂಚಾಯಿತಿ ವೇಳೆ ಮನ ಬಂದಂತೆ ಗುಂಡು ಹಾರಿಸಿದ ನಿವೃತ್ತ ಸೈನಿಕ | ಇಬ್ಬರು ಸಾವು
ಭಾರತದ ಬಡ ಮುಸ್ಲಿಮರನ್ನು ತಾಲಿಬಾನಿಗಳು ಎನ್ನುವುದನ್ನು ನಿಲ್ಲಿಸಬೇಕು | ಓವೈಸಿ ಕಿಡಿ