ಏಕಾಏಕಿ ಕೈಕೊಟ್ಟ Jio ನೆಟ್ ವರ್ಕ್ | ಗ್ರಾಹಕರು ಕಂಗಾಲು
ನವದೆಹಲಿ: ಫೇಸ್ ಬುಕ್, ವಾಟ್ಸಾಪ್, ಇನ್ ಸ್ಟಾಗ್ರಾಮ್ ಸ್ಥಗಿತಗೊಂಡು ವಿಶ್ವಾದ್ಯಂತ ಜನರಿಗೆ ಶಾಕ್ ನೀಡಿದ್ದರೆ, ಇತರ ಭಾರತದ ವಿವಿಧ ರಾಜ್ಯಗಳಲ್ಲಿ ಏಕಾಏಕಿ JIO ಬುಧವಾರ ಬೆಳಗ್ಗೆ 9:30ರಿಂದ ಸ್ಥಗಿತಗೊಂಡಿದ್ದು, ಜಿಯೋ ನೆಟ್ ವರ್ಕ್ ಸಿಗದೇ ಗ್ರಾಹಕರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಯೋ ನೆಟ್ ವರ್ಕ್ ಸಮಸ್ಯೆ ಕಾಣಿಸಿಕೊಂಡ ಬೆನ್ನಲ್ಲೇ ಗ್ರಾಹಕರು ಟ್ವಿಟ್ಟರ್ ನಲ್ಲಿ ತರಾಟೆಗೆತ್ತಿಕೊಂಡಿದ್ದಾರೆ. ಹೀಗಾಗಿ ಜಿಯೋ ನೆಟ್ ವರ್ಕ್ ಇದೀಗ ಟ್ವಿಟ್ಟರ್ ನಲ್ಲಿ ಟ್ರಂಟ್ ಆಗುತ್ತಿದೆ. ನೆಟ್ ವರ್ಕ್ ಸಮಸ್ಯೆಯ ಬಗ್ಗೆ ಗ್ರಾಹಕರು ನಿರಂತರವಾಗಿ ದೂರು ನೀಡುತ್ತಿದ್ದರೂ, ಈವರೆಗೆ ಯಾವುದೇ ಸ್ಪಂದನೆ ದೊರಕಿಲ್ಲ.
ಒಂದೆಡೆ ಏರ್ಟೆಲ್ ತನ್ನ ರೀಚಾರ್ಜ್ ದರಗಳನ್ನು ಏರಿಕೆ ಮಾಡಿದೆ. ಇದರಿಂದ ರೋಸಿ ಹೋಗಿ ಗ್ರಾಹಕರು ಜಿಯೋ ಸಿಮ್ ಖರೀದಿ ಮಾಡಿಕೊಂಡಿದ್ದಾರೆ. ಆದರೆ, ಇದೀಗ ಜಿಯೋ ಏಕಾಏಕಿ ಕೈಕೊಟ್ಟಿದ್ದು, ದೇಶಾದ್ಯಂತ ಹಲವು ಗಂಟೆಗಳಿಂದ Jio Network ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಯೋ ಗ್ರಾಹಕರಿಗೆ ಕರೆ ಮಾಡಲು ಹಾಗೂ ಕರೆ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ಇಂಟರ್ ನೆಟ್ ಕೂಡ ಕಾರ್ಯನಿರ್ವಹಿಸುತ್ತಿಲ್ಲ ಎಂದು ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಡುವೆ ಕಂಪೆನಿಯ ತಾಂತ್ರಿಕ ತಂಡ ಈ ಸಮಸ್ಯೆಯನ್ನು ಬಗೆ ಹರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.