ಜಿಯೋ ಫೋನ್ ಸ್ಫೋಟ: ಪ್ಯಾಂಟ್ ನ ಜೇಬಿನಲ್ಲಿದ್ದಾಗಲೇ ಏಕಾಏಕಿ ಸಿಡಿದ ಮೊಬೈಲ್ - Mahanayaka

ಜಿಯೋ ಫೋನ್ ಸ್ಫೋಟ: ಪ್ಯಾಂಟ್ ನ ಜೇಬಿನಲ್ಲಿದ್ದಾಗಲೇ ಏಕಾಏಕಿ ಸಿಡಿದ ಮೊಬೈಲ್

jio phone blast
13/08/2021

ಕೋಝಿಕ್ಕೋಡ್: ಜೇಬಿನಲ್ಲಿದ್ದ ಜಿಯೋ ಮೊಬೈಲ್ ಫೋನ್ ಸ್ಫೋಟಗೊಂಡ ಪರಿಣಾಮ ಯುವಕನೋರ್ವನ ತೊಡೆಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಯುವಕನನ್ನು ರಕ್ಷಿಸಲು ಮುಂದಾಗಿ ಮತ್ತೋರ್ವ ವ್ಯಕ್ತಿಯ ಕೈಗೂ ಬೆಂಕಿ ತಗಲಿ ಗಾಯವಾಗಿದೆ.

ಕೋಝಿಕ್ಕೋಡ್ ನ ಫ್ರಾನ್ಸಿಸ್ ರಸ್ತೆಯ ಇಸ್ಮಾಯಿಲ್ ಎಂಬವರು ಗಾಯಗೊಂಡವರಾಗಿದ್ದು,  ಶುಕ್ರವಾರ ಬೆಳಗ್ಗೆ ಅವರು ಕೆಲಸ ಮಾಡುತ್ತಿದ್ದ ಇಲ್ಲಿನ ಮಿರೈಥೆರು ಬಳಿಯ ಶೂ ಅಂಗಡಿಯಲ್ಲಿದ್ದ ವೇಳೆ ಈ ಘಟನೆ ನಡೆದಿದೆ. ಜೀನ್ಸ್ ಪ್ಯಾಂಟ್ ನ ಜೇಬಿನಲ್ಲಿದ್ದ ಮೊಬೈಲ್ ಸ್ಫೋಟಗೊಂಡಿದೆ,

ಫೋನ್ ಸಣ್ಣಗೆ ರಿಂಗ್ ಆದ ಬಳಿಕ ಏಕಾಏಕಿ ಸ್ಫೋಟವಾಗಿದ್ದು, ಯುವಕನ ಪ್ಯಾಂಟ್ ಗೆ ಬೆಂಕಿ ಹತ್ತಿಕೊಂಡಿದೆ ಎಂದು ಹೇಳಲಾಗಿದೆ. ಈ ವೇಳೆ ಅಂಗಡಿಯಲ್ಲಿದ್ದ ಇನ್ನೋರ್ವ ವ್ಯಕ್ತಿ ಯುವಕನನ್ನು ರಕ್ಷಿಸಿದ್ದು, ಈ ವೇಳೆ ಆತನ ಕೈಗೂ ಸುಟ್ಟ ಗಾಯವಾಗಿದೆ.

ಯುವಕ ಬಿಗಿಯಾದ ಪ್ಯಾಂಟ್ ನ್ನು ಹಾಕಿಕೊಂಡಿದ್ದು, ಜೇಬಿನಲ್ಲಿ ಮೊಬೈಲ್ ಫೋನ್ ಇರಿಸಿಕೊಂಡಿದ್ದ ಏಕಾಏಕಿ ಮೊಬೈಲ್ ಸ್ಫೋಟವಾಗಿದ್ದರಿಂದಾಗಿ ತೀವ್ರ ಸ್ವರೂಪದ ಗಾಯವಾಗಿದೆ. ಸ್ಫೋಟದ ವೇಳೆ ಯುವಕ ಪ್ಯಾಂಟ್ ನ ಇನ್ನೊಂದು ಜೇಬಿನಲ್ಲಿ ನೋಕಿಯೋ ಕಂಪೆನಿಯ ಮೊಬೈಲ್ ಇತ್ತು. ಆ ಮೊಬೈಲ್ ಸುರಕ್ಷಿತವಾಗಿತ್ತು ಎಂದು ತಿಳಿದು ಬಂದಿದೆ.

ಇನ್ನಷ್ಟು ಸುದ್ದಿಗಳು…

ತಾಯಿಯ ಕಣ್ಣೆದುರೇ ಇಬ್ಬರು ಹೆಣ್ಣು ಮಕ್ಕಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಹತ್ಯೆ ಮಾಡಿದ ದುಷ್ಟರು!

ಮುಸ್ಲಿಮ್ ಕಲಾವಿದರಿಂದ ಮೆಹೆಂದಿ ಹಚ್ಚಿಸಿಕೊಳ್ಳಬಾರದು | ಮೆಹೆಂದಿ ಸ್ಟಾಲ್ ಗೆ ಕರ್ಣಿಸೇನೆ ದಾಳಿ

ರಾಹುಲ್ ಗಾಂಧಿ ಟ್ವಿಟ್ಟರ್ ಖಾತೆ ಸ್ಥಗಿತಗೊಂಡ ತಕ್ಷಣ ಪ್ರಿಯಾಂಕಾ ಗಾಂಧಿ ಮಾಡಿದ್ದೇನು ಗೊತ್ತಾ?

ನಾಗರ ಪಂಚಮಿ: ಕೊವಿಡ್ ಹಿನ್ನೆಲೆಯಲ್ಲಿ ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ಕಡಿಮೆ

ಕಾಂಗ್ರೆಸ್ ನವರು ಕುಡುಕ ಸೂ*** ಮಕ್ಕಳು ಎಂದು ಹೇಳಿಕೆ ನೀಡಿದ ಸಚಿವ ಈಶ್ವರಪ್ಪ

ತನಗೆ ಕಚ್ಚಿದ ಹಾವನ್ನು ಕಚ್ಚಿ ಕಚ್ಚಿಯೇ ಕೊಂದ ಭೂಪ:  ಅಷ್ಟಕ್ಕೂ ಅಲ್ಲಿ ನಡೆದ್ದದ್ದೇನು ಗೊತ್ತಾ?

ಇತ್ತೀಚಿನ ಸುದ್ದಿ