ಶಾಕ್ ನೀಡಿದ ಜಿಯೋ: ಏರ್ಟೆಲ್ ವೊಡಾಫೋನ್ ಬಳಿಕ ಜಿಯೋ ರೀಚಾರ್ಜ್ ದರ ಏರಿಕೆ - Mahanayaka

ಶಾಕ್ ನೀಡಿದ ಜಿಯೋ: ಏರ್ಟೆಲ್ ವೊಡಾಫೋನ್ ಬಳಿಕ ಜಿಯೋ ರೀಚಾರ್ಜ್ ದರ ಏರಿಕೆ

jio
29/11/2021

ನವದೆಹಲಿ: ಏರ್ಟೆಲ್ ಹಾಗೂ ವೋಡಾಫೋನ್ ತಮ್ಮ ಯೋಜನೆಗಳನ್ನು ದುಬಾರಿಗೊಳಿಸಿದ ಬೆನ್ನಲ್ಲೇ ಜಿಯೋ ಕೂಡ ತನ್ನ ರೀಚಾರ್ಜ್ ದರವನ್ನು ಏರಿಕೆ ಮಾಡಿದ್ದು, ಈ ಮೂಲಕ ಗ್ರಾಹಕರಿಗೆ ಶಾಕ್ ನೀಡಿದೆ. ಡಿಸೆಂಬರ್ 1ರಿಂದ  ಜಿಯೋ ಕೂಡ ಗ್ರಾಹಕರಿಗೆ ದುಬಾರಿಯಾಗಲಿದೆ.

ಜಿಯೋದ  ಜನಪ್ರಿಯ ಪ್ಲಾನ್ 555 ಪ್ಲಾನ್ ಇದೀಗ 666 ಆಗಿದ್ದು,  599 ಪ್ಲಾನ್ ಈಗ ರೂ.719 ಆಗಿದೆ. ಈ ಎರಡೂ ಯೋಜನೆಗಳ 84 ದಿನಗಳವರೆಗೆ ಆಗಿರುತ್ತದೆ. ಇನ್ನು ಹೊಸ ಪ್ಲಾನ್ ಗಳನ್ನು ನೋಡುವುದಾದರೆ, 75 ರೂಗಳ ಪ್ಲಾನ್ ಈಗ ರೂ 91 ಆಗಿದೆ. ಇದು ಕೇವಲ 29 ದಿನಗಳಿಗೆ. ಈ ಯೋಜನೆಯಲ್ಲಿ, ಪ್ರತಿ ತಿಂಗಳು 3GB ಡೇಟಾದೊಂದಿಗೆ ಅನಿಯಮಿತ ಕರೆ ಮತ್ತು 50 SMS ಸಹ ಲಭ್ಯವಿದೆ.

ಈ ಹಿಂದೆ 129 ರೂಪಾಯಿ ಇದ್ದ ಪ್ಲಾನ್ ಖರೀದಿಸಲು 155 ರೂಪಾಯಿ ಆಗಿದೆ. ಇದರಲ್ಲಿ, 2GB ಡೇಟಾ, ಅನಿಯಮಿತ ಕರೆಗಳು ಮತ್ತು 300 SMS ಪ್ರತಿ ತಿಂಗಳು ಲಭ್ಯವಿದೆ. ಅದೇ ರೀತಿ, ರೂ.149 ಪ್ಲಾನ್‌ ಗೆ ರೂ.179 ಪಾವತಿಸಬೇಕಾಗುತ್ತದೆ. ಇದು ದಿನಕ್ಕೆ 1 ಜಿಬಿ ಡೇಟಾ, ಅನಿಯಮಿತ ಕರೆಗಳು ಮತ್ತು ದಿನಕ್ಕೆ 100 ಎಸ್‌ ಎಂಎಸ್‌ ಗಳನ್ನು 24 ದಿನಗಳವರೆಗೆ ನೀಡುತ್ತಿದೆ.

ಇದೇ ರೀತಿ ಜಿಯೋದ ಎಲ್ಲ ಯೋಜನೆಗಳು ಕೂಡ ದುಬಾರಿಯಾಗಿವೆ. ಏರ್ಟೆಲ್, ವೋಡಾಫೋನ್ ಗಳು ತಮ್ಮ ರೀ ಚಾರ್ಚ್ ಪ್ಲಾನ್ ಗಳನ್ನು ದುಪ್ಪಟ್ಟು ಮಾಡಿದ ವೇಳೆ, ನಾವು ಜಿಯೋಗೆ ಪೋರ್ಟ್ ಮಾಡುತ್ತೇವೆ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ, ಇದೀಗ ಜಿಯೋ ಕೂಡ ಈ ಎಲ್ಲ ಕಂಪೆನಿಗಳ ಹಾದಿಯನ್ನು ಹಿಡಿದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

“ನಾನು ಅಧಿಕಾರದಲ್ಲಿರಲು ಬಯಸುವುದಿಲ್ಲ” ಎಂದ ಪ್ರಧಾನಿ ನರೇಂದ್ರ ಮೋದಿ!

ಸರಿಗಮಪ ವೇದಿಕೆಗೆ ಬೇಗ ಬಂದು ಸೇರಿಕೊಳ್ಳುತ್ತೇನೆ | ಕನ್ನಡಿಗರಿಗೆ ಸಂತಸದ ಸುದ್ದಿ ನೀಡಿದ ಹಂಸಲೇಖ

ಒಮಿಕ್ರಾನ್  ಭೀತಿಯ ನಡುವೆಯೇ ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದಿಳಿದ ಇಬ್ಬರಿಗೆ ಕೊವಿಡ್ ದೃಢ!

ನಮ್ಮಲ್ಲಿ ಸಮಾಧಾನವಾಗದಿದ್ದಾಗ ಬಿಜೆಪಿಗೆ ಹೋದ ಬಂಡುಕೋರ | ರಮೇಶ್ ಜಾರಕಿಹೊಳಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಪಂಚ್

ಮುಂದಿನ ಸರಿಗಮಪ ವೇದಿಕೆಯಲ್ಲಿ ಹಂಸಲೇಖ ಇಲ್ಲದಿದ್ದರೆ, ‘ಝೀ ಕನ್ನಡ’ಕ್ಕೆ ಆಗಲಿದೆ ಭಾರೀ ನಷ್ಟ!

ABCD ಗೊತ್ತಿಲ್ಲದ ಇಬ್ಬರು ಇಂಗ್ಲಿಷ್ ಶಿಕ್ಷಕರ ಅಮಾನತು

ಇತ್ತೀಚಿನ ಸುದ್ದಿ