ಜಿಯೋ vs ಇತರ ಟೆಲಿಕಾಂ ಆಪರೇಟರ್ ಗಳು; ಇಲ್ಲಿವೆ ಪ್ಲಾನ್ ಗಳ ಹೋಲಿಕೆ
ಮುಂಬೈ : ದುಡ್ಡು ಉಳಿಸುವುದೇ ಸವಾಲಾಗಿರುವ ಈ ಸಮಯದಲ್ಲಿ ನಿಮ್ಮ ಫೋನ್ ಟಾರಿಫ್ ಕೂಡ ಸರಿಯಾಗಿರುವುದನ್ನು ಆರಿಸಿಕೊಳ್ಳಬೇಕು ಅಲ್ಲವಾ? ಅದು ಅಷ್ಟು ಮಾತ್ರ ಅಲ್ಲ, ಯಾವ ನೆಟ್ ವರ್ಕ್ ನಿಂದ ಎಷ್ಟು ಹಣಕ್ಕೆ ಎಷ್ಟು ಅನುಕೂಲ ಸಿಗುತ್ತದೆ ಅನ್ನುವುದನ್ನೂ ಹೋಲಿಸಲೇ ಬೇಕು. ಹೀಗೆ ಒಂದು ಹೋಲಿಕೆ ಮಾಡಿದ ಮೇಲೆ ಯಾವುದು ಉತ್ತಮವಾದ ಟೆಲಿಕಾಂ ಆಪರೇಟರ್ ಎಂಬುದು ಗ್ಯಾರಂಟಿ ಆಗುತ್ತದೆ. ಈಗಂತೂ ಏರ್ ಟೆಲ್, ವಿಐ, ಜಿಯೋ ಎಲ್ಲರೂ ತಮ್ಮ ದರವನ್ನು ಏರಿಕೆ ಮಾಡಿದ್ದಾರೆ. ಆದರೆ ಗ್ರಾಹಕರು ಎಷ್ಟು ಪಾವತಿ ಮಾಡುತ್ತಾರೆ ಹಾಗೂ ಪ್ರತಿಯಾಗಿ ಏನು ಸಿಗುತ್ತಿದೆ ಎಂಬುದನ್ನು ತಿಳಿದುಕೊಳ್ಳದಿದ್ದರೆ ಹೇಗೆ ಹೇಳಿ.
ಮೊದಲಿಗೆ 28 ದಿನದ ವ್ಯಾಲಿಡಿಟಿ ಇರುವಂಥ ಪ್ಲ್ಯಾನ್ ಗಮನಿಸೋಣ. ಜಿಯೋ 299 ರೂಪಾಯಿ ದರ ವಿಧಿಸಿದರೆ, ಇತರ ಟೆಲಿಕಾಂ ಆಪರೇಟರ್ ಗಳು ಇಷ್ಟೇ ದಿನದ ವ್ಯಾಲಿಡಿಟಿಗೆ 349 ರೂಪಾಯಿ ದರವನ್ನು ವಿಧಿಸುತ್ತಾರೆ. ಅಲ್ಲಿಗೆ ಜಿಯೋ ಗ್ರಾಹಕರಿಗೆ 50 ರೂಪಾಯಿ ಉಳಿತಾಯ ಆಯಿತು. ಹಾಗಂತ ಪ್ರತಿ ದಿನದ ಡೇಟಾದಲ್ಲಿ ಏನಾದರೂ ವ್ಯತ್ಯಾಸ ಇದೆಯಾ ಅಂತ ನೋಡಿದರೆ, ಹಾಗೇನೂ ಇಲ್ಲ. ಎಲ್ಲರೂ ದಿನಕ್ಕೆ 1.5 ಜಿಬಿ ಡೇಟಾ ಮಾತ್ರ ನೀಡುವುದು. ತಿಂಗಳಿಗೆ 50 ರೂಪಾಯಿ ಅಂತಾದರೆ, ವರ್ಷಕ್ಕೆ 600 ರೂಪಾಯಿ ಆಯಿತು.
ಈಗ ಬೇರೆ ಪ್ಲಾನ್ ಗಳ ಹೋಲಿಕೆ ಕೂಡ ನೋಡೋಣ. ಒಂದು ವರ್ಷದ ಪ್ಲಾನ್ ಗೆ ಜಿಯೋದಲ್ಲಿ 3599 ರೂಪಾಯಿ ಆಗುತ್ತದೆ, ಪ್ರತಿ ನಿತ್ಯ 2.5 ಜಿಬಿ ಡೇಟಾ ಸಿಗುತ್ತದೆ. ಉಳಿದ ಟೆಲಿಕಾಂ ಆಪರೇಟರ್ ಗಳು ಸಹ 3599 ರೂಪಾಯಿಯನ್ನೇ ವಿಧಿಸುತ್ತವೆ. ಆದರೆ ಪ್ರತಿ ದಿನ ಸಿಗುವ ಉಚಿತ ಡೇಟಾ 2 ಜಿಬಿ ಮಾತ್ರ. ಇನ್ನು ಜಿಯೋದ 84 ದಿನಗಳ ಪ್ಲಾನ್ ಗೆ 859 ರೂಪಾಯಿಯಾಗಿದ್ದು, ಪ್ರತಿ ದಿನ 2 ಜಿಬಿ ಡೇಟಾ ದೊರೆಯುತ್ತದೆ. ಉಳಿದ ಟೆಲಿಕಾಂ ಆಪರೇಟರ್ ಗಳು 979 ರೂಪಾಯಿ ದರ ವಿಧಿಸುತ್ತಿದ್ದು, ಪ್ರತಿ ದಿನ 2 ಜಿಬಿ ಡೇಟಾ ಉಚಿತವಾಗಿ ಸಿಗುತ್ತದೆ. ಈ ಪ್ಲಾನ್ ನಲ್ಲಿ ಜಿಯೋ ಗ್ರಾಹಕರಿಗೆ 120 ರೂಪಾಯಿ ಉಳಿತಾಯ ಆಗುತ್ತದೆ. 84 ದಿನಗಳ ವ್ಯಾಲಿಡಿಟಿಯ 1.5 ಜಿಬಿ ಡೇಟಾ ಪ್ಲಾನ್ ಕೂಡ ಇದೆ. ಅದಕ್ಕೆ ಜಿಯೋ ತನ್ನ ಗ್ರಾಹಕರಿಂದ ಪಡೆಯುವುದು 799 ರೂಪಾಯಿ ಮಾತ್ರ. ಬೇರೆ ಟೆಲಿಕಾಂ ಆಪರೇಟರ್ ಗಳು 859 ರೂಪಾಯಿ ವಸೂಲಿ ಮಾಡುತ್ತವೆ. ಅಂದರೆ ಈ ಪ್ಲಾನ್ ನಲ್ಲಿ ಜಿಯೋ ಗ್ರಾಹಕರಿಗೆ 60 ರೂಪಾಯಿ ಉಳಿತಾಯ ಆಗುತ್ತದೆ.
ಯಾರು ಬೇಸಿಕ್ ಮೊಬೈಲ್ ಹ್ಯಾಂಡ್ ಸೆಟ್ ಬಳಸುತ್ತಾರೋ ಅಂಥವರಿಗೆ ಉಳಿದ ಟೆಲಿಕಾಂ ಕಂಪನಿಗಳು 199 ರೂಪಾಯಿ ದರವನ್ನು ವಿಧಿಸುತ್ತವೆ. ಅದು ಕೂಡ 2ಜಿ ನೆಟ್ ವರ್ಕ್ ಮಾತ್ರ ಸಿಗುತ್ತದೆ. ಯುಪಿಐ ಇಲ್ಲ, ಯಾವುದೇ ಮನರಂಜನೆ ಇರುವುದಿಲ್ಲ. ಆದರೆ ಜಿಯೋಭಾರತ್ ಫೋನ್ ನಲ್ಲಿ 123 ರೂಪಾಯಿಗೆ 14 ಜಿಬಿ 4ಜಿ ಡೇಟಾ ಸಿಗುತ್ತದೆ. ಇದರ ಜೊತೆಗೆ ಅನಿಯಮಿತ ಕಾಲ್ ಗಳು, ಜಿಯೋಸಿನಿಮಾ, ಜಿಯೋಸಾವನ್ , ಜಿಯೋಪೇ (ಯುಪಿಐ), ಎಫ್ಎಂ ರೇಡಿಯೋ ಇವೆಲ್ಲ ಸಿಗುತ್ತದೆ. ಈ ಪ್ಲಾನ್ ಬಳಸುವಂಥ ಜಿಯೋ ಗ್ರಾಹಕರಿಗೆ 76 ರೂಪಾಯಿ ಉಳಿತಾಯ ಆಗುತ್ತದೆ. ಜಿಯೋ ಅಂತೂ ಬೇಸಿಕ್ ಫೋನ್ ಬಳಕೆದಾರರಿಗೆ ದರ ಏರಿಕೆ ಮಾಡಿಲ್ಲ ಅನ್ನುವುದನ್ನು ಗಮನಿಸಬೇಕು.
ಈಗ ಯಾವುದರಲ್ಲಿ ಕಡಿಮೆ ದರ ಹಾಗೂ ಉತ್ತಮ ಬೆನಿಫಿಟ್ ಗಳು ಅನ್ನುವುದನ್ನು ತುಂಬ ಸ್ಪಷ್ಟವಾಗಿ ನಿರ್ಧರಿಸಬಹುದು ಅಲ್ಲವಾ?
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: