ಜಿರಳೆ, ನೊಣಗಳ ಕಾಟದಿಂದ ಮುಕ್ತಿ ಹೊಂದುವುದು ಹೇಗೆ? | ಇಲ್ಲಿದೆ ಟಿಪ್ಸ್

cockroach
20/03/2021

ಬೇಸಿಗೆ ಕಾಲ ಆರಂಭವಾದರೆ ಸಾಕು ನೊಣ, ಜಿರಳೆಗಳ ಸಮಸ್ಯೆಗಳನ್ನೇ ಜನರು ಹೇಳುತ್ತಾರೆ. ಇದಕ್ಕಾಗಿ ಮಾರುಕಟ್ಟೆಗಳಲ್ಲಿ ಸಿಗುವ ರಾಸಾಯನಿಕ ವಸ್ತುಗಳಿಂದ ತಯಾರಿಸಿರುವ ಸ್ಪ್ರೇಗಳನ್ನು ಸಾಮಾನ್ಯವಾಗಿ ಜನರು ಬಳಸುತ್ತಾರೆ. ಆದರೆ ಇದು ಮನುಷ್ಯನ ಆರೋಗ್ಯದ ಮೇಲೆಯೂ ಗಂಭೀರವಾದ ಪರಿಣಾಮಗಳನ್ನು ನಿಧಾನವಾಗಿ ತೋರಿಸಲು ಪ್ರಾರಂಭಿಸುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಜಿರಳೆಗಳು ಈ ರಾಸಾಯನಿಕ ವಸ್ತುಗಳ ಸ್ಪ್ರೇಗಳು ಬರುವುದಕ್ಕಿಂತಲೂ ಹಿಂದಿನಿಂದಲೇ ಇದ್ದವು ಅಲ್ಲವೇ? ಹಾಗಿದ್ದರೆ, ಹಿಂದಿನ ಕಾಲದವರು ಈ ಜಿರಳೆಯನ್ನು ಓಡಿಸಲು ಏನು ಮಾಡುತ್ತಿದ್ದರು ಎನ್ನುವುದನ್ನು ಆಲೋಚಿಸಲೇ ಬೇಕು ಅಲ್ಲವೇ?

ಹೌದು…! ಜಿರಳೆಗಳು ಹಾಗೂ ನೊಣಗಳು ಸಾಮಾನ್ಯವಾಗಿ ಕಹಿ ವಸ್ತುಗಳ ಸಮೀಪಕ್ಕೂ ಬರುವುದಿಲ್ಲ. ಹೀಗಾಗಿ ಮನೆಯಲ್ಲಿಯೇ ಸಿಗುವಂತಹ ಕೆಲವು ಗಿಡಗಳನ್ನು ಬಳಸಿಕೊಂಡು ಜಿರಳೆಗಳಿಗೆ ನೊಣಗಳಿಗೆ ಮುಕ್ತಿ ಹಾಡಬಹುದಾಗಿದೆ.

ಜಿರಳೆ, ನೊಣ ಸೇರಿದಂತೆ ಹಲವು ಕೀಟಗಳನ್ನು ಓಡಿಸಲು, ಪುದೀನಾವನ್ನು ಬಳಸಬಹುದು.  ಪಾತ್ರೆಯಲ್ಲಿ ½ ಗ್ಲಾಸ್ ನೀರನ್ನು ತೆಗೆದುಕೊಂಡು ಅದರಲ್ಲಿ ಪುದೀನಾ ರಸವನ್ನು ಮಿಕ್ಸ್ ಮಾಡಿ ಮನೆಯ ಮೂಲೆ ಮೂಲೆಗೂ ಸಿಂಪಡಿಸಿದರೆ ಕೀಟಗಳ ಕಾಟದಿಂದ ತಪ್ಪಿಸಿಕೊಳ್ಳಬಹುದು.

ಬೇವಿನ ರಸವನ್ನು ಸೀಮೆ ಎಣ್ಣೆಯೊಂದಿಗೆ ಮಿಕ್ಸ್ ಮಾಡಿ ಮನೆಯಲ್ಲಿ ಸಿಂಪಡಿಸಿದರೆ ಅದರ ವಾಸನೆಗೆ ಕೀಟಗಳು ಓಡಿಹೋಗುತ್ತವೆ. ಇನ್ನೂ  ಬೆಳ್ಳುಳ್ಳಿ, ಈರುಳ್ಳಿ, ಕರಿಮೆಣಸನ್ನು ಸೇರಿಸಿ ಪೇಸ್ಟ್ ತಯಾರಿಸಿ ಅದನ್ನು ನೀರಿನಲ್ಲಿ ಬೆರೆಸಿ ಮನೆಯ ಎಲ್ಲಾ ಭಾಗಗಳಿಗೂ ಸಿಂಪಡಿಸಿದರೆ ಕೀಟಗಳು ನಿಮ್ಮ ಮನೆಯ ಬಳಿಗೂ ಬರುವುದಿಲ್ಲ.

ಇತ್ತೀಚಿನ ಸುದ್ದಿ

Exit mobile version