ಪ್ರಸಿದ್ಧ ಗಾಯಕ ಜಿತೇಂದ್ರ ಶೆಟ್ಟಿ ಕಾರ್ಯಾಣ ನಿಧನ
ಬೆಳ್ತಂಗಡಿ: ಪಡಂಗಡಿ ಗ್ರಾಮದ ಕಾರ್ಯಾಣ ನಿವಾಸಿ, ಪ್ರಸ್ತುತ ತೆಂಕಕಾರಂದೂರುವಿನಲ್ಲಿ ನೆಲೆಸಿರುವ ಊರಿನ ಪ್ರಸಿದ್ದ ಗಾಯಕ ಜಿತೇಂದ್ರ ಶೆಟ್ಟಿ(55) ಕಾರ್ಯಾಣ ಅಲ್ಪಕಾಲದ ಅಸೌಖ್ಯದಿಂದ ಇಂದು (ಅ.28) ಬೆಳಗ್ಗಿನ ಜಾವ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಕಳೆದ ಹಲವಾರು ವರ್ಷಗಳಿಂದ ಭಜನೆ, ಸಂಗೀತ, ಭಕ್ತಿ ರಸಮಂಜರಿ ಮುಖೇನಾ ಹಲವಾರು ವೇದಿಕೆಗಳಲ್ಲಿ ಹಾಡಿ ಜನರನ್ನು ರಂಜಿಸಿ ಗುರುತಿಸಿಕೊಂಡಿದ್ದರು.
ಮೃಧು, ಸಾಧು ಸ್ವಭಾವದ ವ್ಯಕ್ತಿತ್ವ ಹೊಂದಿದ್ದ ಇವರು ಊರಿನಲ್ಲಿಎಲ್ಲರೊಂದಿಗೂ ಆತ್ಮೀಯರಾಗಿದ್ದರು. ಸ್ವಾತಿ ಮ್ಯೂಸಿಕಲ್ ಬೆಳ್ತಂಗಡಿ ಇದರ ಸಂಚಾಲಕರಾಗಿ, ನಮ ಮಾತರ್ಲ ಒಂಜೇ ಕಲಾತಂಡದ ಆಧಾರ ಸ್ತಂಭವಾಗಿ, ಆನೇಕ ಕಲಾವಿದರಿಗೆ ಬೆಳಕಾಗಿ ಕಲಾವಿದರನ್ನು ಬೆಳೆಸಿ ಕಲೆಗಾಗಿಯೆ ತನ್ನ ಜೀವನವನ್ನು ಸವೆಸಿದ್ದರು.
ಮೃತರು ಪತ್ನಿ ಶರ್ಮೀಳಾ ಶೆಟ್ಟಿ, ಓರ್ವ ಪುತ್ರ ಜೀವನ್ ಶೆಟ್ಟಿ, ಓರ್ವ ಪುತ್ರಿ ಜೀವಿತಾ ಹಾಗೂ ಅಪಾರ ಕುಟುಂಬ ವರ್ಗದವರನ್ನು ಅಗಲಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka