ಮಾಹಾರಾಜವಾಡಿ ಗ್ರಾಮದ ಜೆಜೆಎಮ್ ಕಾಮಗಾರಿ ಕಳಪೆ: ಸಿಎಂ ಕಚೇರಿಗೆ ಜಾಲತಾಣದಲ್ಲಿ ದೂರು - Mahanayaka

ಮಾಹಾರಾಜವಾಡಿ ಗ್ರಾಮದ ಜೆಜೆಎಮ್ ಕಾಮಗಾರಿ ಕಳಪೆ: ಸಿಎಂ ಕಚೇರಿಗೆ ಜಾಲತಾಣದಲ್ಲಿ ದೂರು

aurad
28/06/2024

ಔರಾದ: ತಾಲೂಕಿನ ಜಂಬಗಿ ಗ್ರಾಮ ಪಂಚಾಯತ್  ವ್ಯಾಪ್ತಿಯಲ್ಲಿ ಬರುವ ಮಾಹಾರಾಜವಾಡಿ ಗ್ರಾಮದಲ್ಲಿನ ಜೆಜೆಎಮ್ ಕಾಮಗಾರಿ ಕಳಪೆ ಮಟ್ಟದಿಂದ ಕೂಡಿದ್ದು ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥ ಸಾದುರೆ ಶಿವಕುಮಾರ  ಮುಖ್ಯಮಂತ್ರಿ ಕಚೇರಿಗೆ X ಖಾತೇಯಲ್ಲಿ ದೂರು ಸಲ್ಲಿಸಿದ್ದಾರೆ.


Provided by

ಗ್ರಾಮದಲ್ಲಿ ಜೆಜೆಎಮ್ ಕಾಮಗಾರಿ  ಸುಮಾರು  ಆರು ತಿಂಗಳಿಂದ  ಪೈಪ್ ಲೈನ್ ಕಾಮಗಾರಿ ಪೂರ್ಣಗೊಳ್ಳದೆ ಹಾಗೆ ಬಿಟ್ಟಿದಾರೆ. ಗ್ರಾಮದಲ್ಲಿ ಜೆಜೆಎಮ್ ಕಾಮಗಾರಿ ಮಾಡುವ ಸಂಬಂಧ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಿಸಿ ರಸ್ತೆ ಅಗೆದು ಸುಮಾರು ತಿಂಗಳಿಂದ ಹಾಗೆ ಬಿಟ್ಟಿದಾರೆ ಇದರಿಂದ ರಾತ್ರಿ ಹೊತ್ತು ಜನರಿಗೆ ತಿರುಗಾಡಲು ತೊಂದರೆ ಉಂಟಾಗುತಿದ್ದು,  ಸ್ವಲ್ಪ ಮಳೆ ಬಂದರೆ ಸಾಕು, ರಸ್ತೆಗಳೆಲ್ಲ ಕೆಸರುಗಳಾಗಿ ಮಾರ್ಪಡುತ್ತಿದೆ ಎಂದು ಆರೋಪಿಸಿದ್ದಾರೆ.

ಕಳಪೆ ಕಾಮಗಾರಿಯಲ್ಲಿ  ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಶಾಮೀಲಾಗಿದಾರೆ  ದೂರಲಾಗಿದೆ.


ಗ್ರಾಮದ ಪ್ರಮುಖ ಬೀದಿಗಳಲ್ಲಿ ಆರು ತಿಂಗಳಿಂದ  ಸಿಸಿ ರಸ್ತೆ ಅಗೆದು ಹಾಗೆ ಬಿಟ್ಟಿದ್ದಾರೆ. ಕೆಲವು ಕಡೆ ಪೈಪ್ ಲೈನ್ ಹಾಕದೆ ಹಾಗೆ ಬಿಟ್ಟಿದಾರೆ.  ಇದಕ್ಕೆ ಅಧಿಕಾರಿ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯವೇ  ಕಾರಣ.

– ಸಾದುರೆ ಶಿವಕುಮಾರ , ಮಾಹಾರಾಜವಾಡಿ ಗ್ರಾಮಸ್ಥ


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ