ಬಿರುಕು ಬಿಟ್ಟ ಶಾಲಾ ಕಟ್ಟಡ, ಯಾವುದೇ ಕ್ಷಣದಲ್ಲಿ ಕುಸಿಯುವ ಭೀತಿ: ಜಮ್ಮುವಿನಲ್ಲಿ ಬೀಗ ಜಡಿದು ಪ್ರತಿಭಟಿಸಿದ ವಿದ್ಯಾರ್ಥಿಗಳು ಪೋಷಕರು
ಊರಿನಲ್ಲಿರುವ ಸರ್ಕಾರಿ ಹೈಸ್ಕೂಲಿನ ಬಿರುಕು ಬಿಟ್ಟ ಕಟ್ಟಡದ ಅವ್ಯವಸ್ಥೆಯನ್ನು ಖಂಡಿಸಿ ಶಾಲಾ ಮಕ್ಕಳು ಮತ್ತು ಅವರ ಪೋಷಕರೇ ಸೇರಿಕೊಂಡು ತಮ್ಮ ಶಾಲೆಗೆ ಬೀಗ ಜಡಿದು ವ್ಯವಸ್ಥೆಯ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ ಘಟನೆ ಜಮ್ಮು ಮತ್ತು ಕಾಶ್ಮೀರದ ಉಧಮ್ ಪುರ ಜಿಲ್ಲೆಯಲ್ಲಿ ನಡೆದಿದೆ.
ಘೋರ್ಡಿ ಬ್ಲಾಕ್ ವ್ಯಾಪ್ತಿಯ ಸರಕಾರಿ ಹೈಸ್ಕೂಲ್ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿತ್ತು. ಇಲ್ಲಿ ಸುಮಾರು 128 ವಿದ್ಯಾರ್ಥಿಗಳು ಕಲಿಯುತ್ತಿದ್ದರು. ಆದರೆ ಈ ಶಾಲೆಯ ಕಟ್ಟಡ ಯಾವ ಕ್ಷಣದಲ್ಲಾದರೂ ಕುಸಿದು ಬೀಳುವ ಹಂತದಲ್ಲಿತ್ತು.
ಇದು ತಮ್ಮ ಮಕ್ಕಳಿಗೆ ಯಾವುದೇ ಕ್ಷಣದಲ್ಲಾದರೂ ಅಪಾಯವಾಗಬಹುದು ಎಂಬುದನ್ನು ಮನಗಂಡ ಮಕ್ಕಳ ಪೋಷಕರು ಈ ಶಾಲಾ ಕಟ್ಟಡಕ್ಕೆ ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಘೋರ್ಡಿಯ ಪ್ರಾದೇಶಿಕ ಶಿಕ್ಷಣ ಮತ್ತು ಯೋಜನಾಧಿಕಾರಿ ಕೃಷ್ಣ ದತ್, ‘ಈ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದಂತೆ ನಾವು ಸುರಕ್ಷಿತ ಕಟ್ಟಡದ ಹುಡುಕಾಟದಲ್ಲಿದ್ದೇವೆ’ ಎಂದಿದ್ದಾರೆ.
ಇನ್ನು ಈ ಕುರಿತಾದಂತೆ ಘೋರ್ಡಿಯ ಬ್ಲಾಕ್ ಡೆವಲ್ಪೆಂಟ್ ಕೌನ್ಸಿಲ್ ಅಧ್ಯಕ್ಷೆ ಆರ್ತಿ ಶರ್ಮಾ ಪ್ರತಿಕ್ರಿಯೆ ನೀಡಿದ್ದು, ‘ಈ ಮಕ್ಕಳು ಮತ್ತು ಪೋಷಕರ ಬೇಡಿಕೆ ನ್ಯಾಯಯುತವಾಗಿದ್ದು ನಾನು ಈ ವಿಷಯವನ್ನು ಕೌನ್ಸಿಲ್ ಮೀಟಿಂಗ್ ನಲ್ಲೂ ಪ್ರಸ್ತಾಪಿಸಿದ್ದೇನೆ’ ಎಂದಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw