ಶಾಕಿಂಗ್ ನ್ಯೂಸ್: ಪೊಗರು ಚಿತ್ರದಲ್ಲಿ ನಟಿಸಿದ್ದ 30 ವರ್ಷದ ಜೋ ಲಿಂಡ್ನರ್ ಸಾವು
ಕನ್ನಡದ ಪೊಗರು ಚಿತ್ರದಲ್ಲಿ ನಟಿಸಿದ್ದ, ಬಾಡಿ ಬಿಲ್ಡಿಂಗ್ ನಲ್ಲಿ ವಿಶ್ವಖ್ಯಾತಿ ಪಡೆದಿದ್ದ ಜೋ ಲಿಂಡ್ನರ್ ಅವರು ಸಾವನ್ನಪ್ಪಿದ್ದು, ಅವರ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಕಬ್ಬಿಣದಂತಹ ದೇಹ ಹೊಂದಿದ್ದ ಜೋ ಲಿಂಡ್ನರ್ ಗೆ 30 ವರ್ಷ ವಯಸ್ಸಾಗಿತ್ತು, ಫಿಟ್ನೆಸ್ ಮತ್ತು ಬಾಡಿ ಬಿಲ್ಡರ್ ಗಳಿಗೆ ಪ್ರೇರಣೆಯಾಗಿದ್ದರು. ಆದ್ರೆ ಅವರಿಗೆ ಇತ್ತೀಚೆಗೆ ಕುತ್ತಿಗೆಯಲ್ಲಿ ನೋವು ಕಾಣಿಸಿಕೊಂಡಿತ್ತು. ರಕ್ತನಾಳಗಳ ಸಮಸ್ಯೆಯ ಅವರ ಸಾವಿಗೆ ಕಾರಣವಾಗಿದೆ ಎನ್ನಲಾಗ್ತಿದೆ.
ಜೋ ಲಿಂಡ್ನರ್ ಸಾವನ್ನಪ್ಪಿರುವ ವಿಚಾರವನ್ನು ಅವರ ಪ್ರೇಯಸಿ ಖಚಿತಪಡಿಸಿದ್ದಾರೆ. ತಮ್ಮ ಕಟ್ಟುಮಸ್ತಾದ ಶರೀರದಿಂದ ಜೋ ಲಿಂಡ್ನರ್ ಜನಪ್ರಿಯರಾಗಿದ್ದರು. ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಮಂದಿ ಫಾಲೋವರ್ಸ್ ಇದ್ದರು.
ಕನ್ನಡದ ಪೊಗರು ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ನಾಯಕ ನಟ ಧ್ರುವಸರ್ಜಾ ಜೊತೆಗಿನ ಅದ್ಭುತ ಫೈಟ್ ಸೀನ್ ನಲ್ಲಿ ಅವರು ಕನ್ನಡಿಗರನ್ನು ರಂಜಿಸಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw