ಅಮೆರಿಕದ ನೂತನ ಅಧ್ಯಕ್ಷರ ಹೆಸರು ಅಧಿಕೃತವಾಗಿ ಘೋಷಣೆ

07/01/2021

ವಾಷಿಂಗ್ಟನ್: ಅಮೆರಿಕದ ಸಂಯುಕ್ತ ಸಂಸ್ಥಾನದ ಅಧ್ಯಕ್ಷರಾಗಿ ಜೋ ಬೈಡೆನ್ ಮತ್ತು ಉಪಾಧ್ಯಕ್ಷರಾಗಿ ಕಮಲಾ ಹ್ಯಾರಿಸ್ ಅಧಿಕೃತವಾಗಿ ಘೋಷಣೆಯಾಗಿದ್ದಾರೆ. ಡೊನಾಲ್ಡ್ ಟ್ರಂಪ್ ಬೆಂಬಲಿಗರು ಕ್ಯಾಪಿಟಲ್  ಕಟ್ಟಡದೊಳಗೆ ನುಗ್ಗಿ ಹಿಂಸಾಚಾರಕ್ಕೆ ಯತ್ನಿಸಿದ ಕೆಲವೇ ಹೊತ್ತಿನ ಬಳಿಕ ಅಮೆರಿಕ ಸಂಸತ್ ಈ ಘೋಷಣೆ ಮಾಡಿದೆ.

ಜೋ ಬೈಡೆನ್ ಹಾಗೂ ಕಮಲಾ ಹ್ಯಾರಿಸ್ 306 ಮತಗಳನ್ನು ಗಳಿಸಿದ್ದು, ಡೊನಾಲ್ಡ್ ಟ್ರಂಪ್ ಬಣ 232 ಮತಗಳನ್ನಷ್ಟೇ ಗಳಿಸಿದೆ.  ದಾಂಧಲೆ ನಡೆಸಿದ ಕೆಲ ಹೊತ್ತಿನ ಬಳಿಕ ಅಮೆರಿಕ ಕಾಂಗ್ರೆಸ್ ಜೋಬೈಡೆನ್ ಆಯ್ಕೆಯನ್ನು ಪ್ರಮಾಣೀಕರಿಸಿದೆ.

ಅಮೆರಿಕದ ಇತಿಹಾಸದಲ್ಲಿಯೇ ಡೊನಾಲ್ಡ್ ಟ್ರಂಪ್ ಕರಾಳ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಅಧಿಕಾರ ಬಿಟ್ಟುಕೊಡದೇ ಹಿಂಸಾತ್ಮಕವಾಗಿ ನಡೆದುಕೊಂಡು ತನ್ನ ಬೆಂಬಲಿಗರನ್ನು ಸಂಸತ್ ಭವನದ ಮೇಲೆ ದಾಳಿ ನಡೆಸಿದ್ದಾರೆ ಎಂದು ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದು, ಘಟನೆಯನ್ನು ಖಂಡಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version