ನಾನು ಅಮೆರಿಕವನ್ನು ಕೆಂಪು-ನೀಲಿ ರಾಜ್ಯವಾಗಿ ನೋಡುವುದಿಲ್ಲ | ಗೆದ್ದ ಬಳಿಕ ಪ್ರಬುದ್ಧ ನುಡಿಗಳನ್ನಾಡಿದ ಜೋಬಿಡೆನ್ - Mahanayaka
11:11 PM Saturday 21 - December 2024

ನಾನು ಅಮೆರಿಕವನ್ನು ಕೆಂಪು-ನೀಲಿ ರಾಜ್ಯವಾಗಿ ನೋಡುವುದಿಲ್ಲ | ಗೆದ್ದ ಬಳಿಕ ಪ್ರಬುದ್ಧ ನುಡಿಗಳನ್ನಾಡಿದ ಜೋಬಿಡೆನ್

08/11/2020

ವಾಷಿಂಗ್ಟನ್: ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಜೋ ಬಿಡನ್ ಅವರು ಗೆದ್ದ ಬಳಿಕ ಆಡಿದ ಪ್ರಬುದ್ಧ ಮಾತುಗಳು ಇದೀಗ ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ.  “ನಾನು ಅಮೆರಿಕವನ್ನು ಕೆಂಪು ಮತ್ತು ನೀಲಿಯ ಆಧಾರದಲ್ಲಿ ನೋಡುವುದಿಲ್ಲ, ಯುನೈಟೆಡ್ ಸ್ಟೇಟ್ಸ್ ಆಗಿ ಮಾತ್ರವೇ ನೋಡುತ್ತೇನೆ ಎಂದು ಹೇಳುವ ಮೂಲಕ ತನ್ನ ವಿರುದ್ಧ ಮತ ಚಲಾಯಿಸಿದವರಿಗೂ ತಾನು ಅಧ್ಯಕ್ಷ ಎನ್ನುವ ಸಂದೇಶವನ್ನು ಸಾರಿದ್ದಾರೆ.

ನಾನು ವಿಭಜನೆ ಮಾಡುವುದಿಲ್ಲ, ದೇಶವನ್ನು ಏಕತೆಯತ್ತ ಕೊಂಡೊಯ್ಯುವ ಕೆಲಸ ಮಾಡುತ್ತೇನೆ. ನಾನು ಯಾವುದೇ ರಾಜ್ಯಗಳನ್ನು ಕೆಂಪು ಅಥವಾ ನೀಲಿ ಎಂದು ಬೇಧ ಭಾವದಿಂದ ನೋಡುವುದಿಲ್ಲ, ಯುನೈಟೆಡ್ ಸ್ಟೇಟ್ಸ್ ಆಗಿ ನೋಡುತ್ತೇನೆ. ನನ್ನ ಮೇಲೆ ಜನರು ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಬಿಡೆನ್ ತಮ್ಮ ವಿಜಯದ ಸಂದರ್ಭದಲ್ಲಿ ಜನತೆಗೆ ಧನ್ಯವಾದಗಳನ್ನು ಸಲ್ಲಿಸಿದರು.

ನೀವು ನನಗೆ ದೊಡ್ಡ ಯಶಸ್ಸನ್ನು ನೀಡಿದ್ದೀರಿ, ಈ ಸಮಯದಲ್ಲಿ ನಾವು ಪರಸ್ಪರ ಅವಕಾಶಗಳನ್ನು ವಿನಿಮಯ ಮಾಡಿಕೊಳ್ಳೋಣ, ದೇಶವನ್ನು ನ್ಯಾಯಯುತವಾಗಿ ನಿರ್ವಹಿಸಲು ನೀವು ನನ್ನನ್ನು ಆಯ್ಕೆ ಮಾಡಿದ್ದೀರಿ ಎಂದು ನಾನು ನಂಬುತ್ತೇನೆ. ಇದನ್ನು ಕಾರ್ಯಗತಗೊಳಿಸಲು ಡೆಮೋಕ್ರಾಟಿಕ್ ಮತ್ತು ರಿಪಬ್ಲಿಕನ್ ಸೇರಿದಂತೆ ಎಲ್ಲರ ಸಹಕಾರ ಕೋರುತ್ತೇನೆ ಎಂದು ಅವರು ಹೇಳಿದರು.

ಇತ್ತೀಚಿನ ಸುದ್ದಿ