ಚೀನಾ ದೊಡ್ಡ ತಪ್ಪು ಮಾಡಿದೆ | ಚೀನಾದ ಅಧ್ಯಕ್ಷ ಶಿ ಜಿನ್ ಪಿಂಗ್ ವಿರುದ್ಧ ಗುಡುಗಿದ ಜೋ ಬೈಡೆನ್
ನವದೆಹಲಿ: ರೋಮ್ ನಲ್ಲಿ ನಡೆದ ಜಿ-20 ಶೃಂಗಸಭೆ ಮತ್ತು ಗ್ಲಾಸ್ಗೋದಲ್ಲಿ ನಡೆದ COP26 ಕ್ಲೈಮೇಟ್ ಶೃಂಗಸಭೆಗೆ ಚೀನಾದ ಅಧ್ಯಕ್ಷ ಶಿ ಜಿನ್ ಪಿಂಗ್ ಗೈರಾಗಿದ್ದು, ಇದರ ವಿರುದ್ಧ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಬೈಡನ್, ಕೊಪ್ 26 ಸಭೆಗೆ ಬಾರದೇ ಚೀನಾ ಅಧ್ಯಕ್ಷ ಜಿನ್ ಪಿಂಗ್ ದೊಡ್ಡ ತಪ್ಪು ಮಾಡಿದ್ದಾರೆ. ಪ್ರಪಂಚದ ಕೆಲವು ದೇಶಗಳು ಚೀನಾ ಕಡೆಗೆ ನೋಡುತ್ತಿವೆ. ಆದರೆ, ಸಭೆಗೆ ಗೈರಾಗುವ ಮೂಲಕ ಚೀನಾ ಯಾವ ಸಂದೇಶವನ್ನು ನೀಡಲು ಹೊರಟಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಾಗತಿಕ ನಾಯಕತ್ವದ ಆಕಾಂಕ್ಷೆಗಳಿಂದ ಚೈನೀಸ್ ಪ್ರೀಮಿಯರ್ ದೂರ ಸರಿಯುತ್ತಿದೆ. ಈ ಮೂಲಕ ಚೀನಾ ದೊಡ್ಡ ತಪ್ಪು ಮಾಡಿದೆ ಎಂದು ನಾನು ಭಾವಿಸುತ್ತೇನೆ ಎಂದು ಬೈಡನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka