ಜೋಹಾನ್ಸ್‌ಬರ್ಗ್‌ನಲ್ಲಿ ಭೂಗತ ಅನಿಲ ಪೈಪ್ ಸ್ಫೋಟ: ಅಪಾರ ಹಾನಿ, ಓರ್ವ ಬಲಿ - Mahanayaka
12:55 AM Friday 20 - September 2024

ಜೋಹಾನ್ಸ್‌ಬರ್ಗ್‌ನಲ್ಲಿ ಭೂಗತ ಅನಿಲ ಪೈಪ್ ಸ್ಫೋಟ: ಅಪಾರ ಹಾನಿ, ಓರ್ವ ಬಲಿ

20/07/2023

ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ಭೂಗತ ಅನಿಲ ಪೈಪ್ ಸ್ಫೋಟ ಸಂಭವಿಸಿದ್ದು ಈ ಘಟನೆಯಲ್ಲಿ ಓರ್ವ ಮೃತಪಟ್ಟು, 41 ಮಂದಿ ಗಾಯಗೊಂಡಿದ್ದಾರೆ.

ಈ ಕುರಿತು ಸಾರ್ವಜನಿಕ ಸುರಕ್ಷತೆ ಮೇಯರ್ ಸಮಿತಿ (ಎಂಎಂಸಿ) ಸದಸ್ಯರಲ್ಲಿ ಒಬ್ಬರಾದ ರಾಬರ್ಟ್ ಮುಲಾಡ್ಜಿ ಸ್ಥಳದಲ್ಲೇ ಉಪಸ್ಥಿತರಿದ್ದು ತುರ್ತು ಕ್ರಮಗಳನ್ನು ಕೈಗೊಳ್ಳಲು ಸಹಕರಿಸಿದರು.

ಈ ಕುರಿತು ಮಾಹಿತಿ ನೀಡಿದ ಅವರು, ಸ್ಪೋಟದ ಕಾರಣ ಮತ್ತು ಹಾನಿಯ ಪ್ರಮಾಣವನ್ನು ಪತ್ತೆ ಹಚ್ಚಲು ತುರ್ತು ಕ್ರಮ ಕೈಗೊಂಡು ಅಗತ್ಯ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ ಎಂದರು. ಸ್ಪೋಟದ ತೀವ್ರತೆಯಿಂದ ಜನರಲ್ಲಿ ಆತಂಕ ಸೃಷ್ಟಿಯಾಗಿತ್ತು. ಜನನಿಬಿಡವಾಗಿದ್ದ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡು ಕೆಲವೆಡೆ ಕುಸಿತವಾಗಿದೆ. ಹಲವಾರು ವಾಹನಗಳಿಗೆ ಹಾನಿಯಾಗಿವೆ ಮತ್ತು ಕೆಲವು ವಾಹನಗಳು ರಸ್ತೆಯಿಂದ ಹಾರಿ ದೂರ ಹೋಗಿ ಬಿದ್ದಿವೆ ಎಂದು ದಕ್ಷಿಣ ಆಫ್ರಿಕಾದ ಸುದ್ದಿವಾಹಿನಿ ಟೈಮ್ಸ್ ಲೈವ್ ವರದಿ ಮಾಡಿದೆ.


Provided by

ಗಾಯಗೊಂಡವರಿಗೆ ಸ್ಥಳದಲ್ಲಿ ತುರ್ತು ಚಿಕಿತ್ಸೆ ನೀಡಿ ಹೆಚ್ಚಿನ ವೈದ್ಯಕೀಯ ಸೌಲಭ್ಯಕ್ಕಾಗಿ ಬೇರೆಬೇರೆ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಸ್ಫೋಟದಿಂದಾಗಿ ಜಿಲ್ಲೆಯ ಹಲವಾರು ರಸ್ತೆಗಳನ್ನು ಮುಚ್ಚಲಾಗಿದೆ ಎಂದು ಜೋಹಾನ್ಸ್ ಬರ್ಗ್ ಮೆಟ್ರೋ ಪೊಲೀಸ್ ಇಲಾಖೆ (ಜೆಎಂಪಿಡಿ) ಮಾಹಿತಿ ನೀಡಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ