ಭಾರತಕ್ಕೆ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿದ WWE ಸೂಪರ್ ಸ್ಟಾರ್ ಗಳು - Mahanayaka
8:05 PM Wednesday 11 - December 2024

ಭಾರತಕ್ಕೆ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿದ WWE ಸೂಪರ್ ಸ್ಟಾರ್ ಗಳು

happy independence day
15/08/2021

ಮನರಂಜನಾ ಕುಸ್ತಿ ಸಂಸ್ಥೆ WWE ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆಗೆ  ಶುಭಾಶಯ ಕೋರಿದ್ದು, ಜಾನ್ ಸಿನಾ, ಸ್ಟೆಫನಿ ಮೆಕ್ ಮಹೊನ್ ಸೇರಿದಂತೆ ಹಲವು ಸೂಪರ್ ಸ್ಟಾರ್ ಗಳು ಹಾಗೂ ಭಾರತದ ಕುಸ್ತಿ ಪಟುಗಳು ಕೂಡ ಸ್ವಾತಂತ್ರ್ಯೋತ್ಸವಕ್ಕೆ ಶುಭಕೋರಿದ್ದಾರೆ.

WWE ಸಂಸ್ಥೆಯ ಅಧ್ಯಕ್ಷೆ ಸ್ಟೆಫನಿ ಮೆಕ್ ಮಹೊನ್, ಸೂಪರ್ ಸ್ಟಾರ್ ಜಾನ್ ಸೀನಾ ಸೇರಿದಂತೆ ಚಾರ್ಲೊಟ್ ಫ್ಲೇರ್, ನಿಕ್ಕಿ ಎ.ಎಸ್.ಎಚ್, ಡೇಮಿಯನ್ ಪ್ರೀಸ್ಟ್, ಬಾಬಿ ಲ್ಯಾಶ್ಲೆ, ಅಲೆಕ್ಸಾ ಬ್ಲಿಸ್, ಇವಾ ಮೇರಿ, ಕರಿಯೊ ಕ್ರಾಸ್, ಸೇಥ್ ಲಾರೆನ್ಸ್ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ತಿಳಿಸಿದರು.

ಇನ್ನೂ ಭಾರತೀಯ ಸೂಪರ್ ಸ್ಟಾರ್ ಗಳಾದ ಶ್ಯಾಂಕಿ, ವೀರ್ ಮತ್ತು ಜಿಂದರ್ ಮಹಲ್ ಹಾಗೂ ಗ್ರೇಟ್ ಖಾಲಿ ಬಳಗದ ಹಲವು ತಾರೆಗಳು ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಹಾರೈಸಿದ್ದಾರೆ. WWE ಒಂದು ಮನರಂಜನೆಯ ಕುಸ್ತಿಯಾಗಿದ್ದು, ಧಾರವಾಹಿ ರೂಪದಲ್ಲಿ ಪ್ರಸಾರವಾಗುತ್ತಿರುತ್ತದೆ. ಈ ಶೋಗೆ ಭಾರತದಲ್ಲಿ ಅತೀ ಹೆಚ್ಚು ವೀಕ್ಷಕರಿದ್ದಾರೆ.

ಇತ್ತೀಚೆಗೆ ಭಾರತೀಯ ಕುಸ್ತಿಪಟುಗಳಿಗೆ WWE ಹೆಚ್ಚಿನ ಅವಕಾಶಗಳನ್ನು ನೀಡಿದೆ. ಗ್ರೇಟ್ ಖಲಿ ಶಿಷ್ಯರು ಇದೀಗ WWEಯಲ್ಲಿ ಅತ್ಯುತ್ತಮ ಪ್ರದರ್ಶನಗಳಿಗಾಗಿ ಸುದ್ದಿಯಲ್ಲಿದ್ದಾರೆ.

ಇನ್ನಷ್ಟು ಸುದ್ದಿಗಳು…

ಮೊಟ್ಟೆ ವಿಚಾರ: ಧ್ವಜಾರೋಹಣಕ್ಕೆ ಬಂದ ಸಚಿವೆ ಶಶಿಕಲಾ ಜೊಲ್ಲೆಗೆ ಮುತ್ತಿಗೆ ಹಾಕಿದ ಮಹಿಳೆಯರು!

ಧ್ವಜಸ್ತಂಭ ನಿಲ್ಲಿಸುತ್ತಿದ್ದ ವೇಳೆ ಮೂವರ ಮೇಲೆ ಪ್ರವಹಿಸಿದ ವಿದ್ಯುತ್: ಓರ್ವ ಬಾಲಕನ ದಾರುಣ ಸಾವು

ಅಮೃತಘಳಿಗೆಯ ವಿಜೃಂಭಣೆಯೂ, ಪ್ರಜಾತಂತ್ರ ಭಾರತದ ಆತಂಕಗಳೂ | ನಾ ದಿವಾಕರ

ಬಾಡಿ ಸ್ಪ್ರೇ ಬಳಸದೇ ಬೆವರಿನ ವಾಸನೆಯಿಂದ ಮುಕ್ತಿ ಪಡೆಯುವುದು ಹೇಗೆ?

ಕಾರ್ಯಕ್ರಮದ ವೇದಿಕೆಯಲ್ಲಿಯೇ ಬೈದಾಡಿಕೊಂಡು ಹೊಡೆದಾಟಕ್ಕೆ ನಿಂತ ಶಾಸಕ-ಸಂಸದ!

ಇತ್ತೀಚಿನ ಸುದ್ದಿ