ಸಿಹಿ ಸುದ್ದಿ: ಭಾರತಕ್ಕೆ ಬರಲಿದೆ ಸಿಂಗಲ್ ಡೋಸ್ ಕೊವಿಡ್ ಲಸಿಕೆ
ನವದೆಹಲಿ: ಭಾರತದಲ್ಲಿ ಡಬಲ್ ಡೋಸ್ ಲಸಿಕೆ ಇದೀಗ ಸಿಗುತ್ತಿವೆ. ಒಂದು ಡೋಸ್ ಲಸಿಕೆ ಹಾಕಿಸಿಕೊಂಡರೂ ಇನ್ನೊಂದು ಡೋಸ್ ಲಸಿಕೆಗೆ ಮತ್ತೆ ಸಾಹಸ ಪಟ್ಟವರಿದ್ದಾರೆ. ಆದರೆ ಈ ನಡುವೆ ದೇಶದ ಜನರಿಗೆ ಸಿಹಿಸುದ್ದಿಯೊಂದು ಲಭಿಸಿದ್ದು, ಸಿಂಗಲ್ ಡೋಸ್ ಲಸಿಕೆ ಶೀಘ್ರವೇ ಭಾರತಕ್ಕೆ ಬರಲಿದೆ ಎಂದು ವರದಿಯಾಗಿದೆ.
ಅಮೆರಿಕಾ ಔಷಧಿ ಕಂಪೆನಿ ಜಾನ್ಸನ್ ಆಂಡ್ ಜಾನ್ಸನ್ ತನ್ನ ಲಸಿಕೆಯ ತುರ್ತು ಬಳಕೆಗೆ ಭಾರತ ಸರ್ಕಾರದ ಒಪ್ಪಿಗೆ ಕೇಳಿದೆ ಎಂದು ಹೇಳಲಾಗಿದ್ದು, ಭಾರತ ಸರ್ಕಾರ ಒಪ್ಪಿಗೆ ನೀಡಿದರೆ, ಭಾರತದಲ್ಲಿ ಸಿಂಗಲ್ ಡೋಸ್ ಕೊವಿಡ್ ಲಸಿಕೆ ಸಿಗಲಿದ್ದು, ಇದು ಜನರ ಹೊರೆಯನ್ನು ಕಡಿಮೆ ಮಾಡಲಿದೆ.
ಸದ್ಯ ಭಾರತದಲ್ಲಿ ಕೋವ್ಯಾಕ್ಸಿನ್, ಕೋವಿಶೀಲ್ಡ್ ಮತ್ತು ರಷ್ಯಾದ ಲಸಿಕೆ ಸ್ಪುಟ್ನಿಕ್-ವಿ ಲಭ್ಯವಿದೆ. ಆದರೆ ಈ ಲಸಿಕೆಗಳು ಡಬಲ್ ಡೋಸ್ ಲಸಿಕೆಗಳಾಗಿವೆ. 130 ಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಈವರೆಗೆ 49.53 ಕೋಟಿಗಿಂತ ಹೆಚ್ಚು ಡೋಸ್‌ಗಳನ್ನು ನೀಡಲಾಗಿದೆ. ಇದೀಗ ಸಿಂಗಲ್ ಡೋಸ್ ಲಸಿಕೆ ಭಾರತದಲ್ಲಿ ಲಭ್ಯವಾದರೆ, ಲಸಿಕಾ ಅಭಿಯಾನ ವೇಗವಾಗಿ ನಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ಇನ್ನಷ್ಟು ಸುದ್ದಿಗಳು…
ರಾಜ್ಯದಲ್ಲಿ ಆಗಸ್ಟ್ 23ರಿಂದ ಶಾಲಾ ಕಾಲೇಜು ಆರಂಭಕ್ಕೆ ತೀರ್ಮಾನ | ಸಿಎಂ ಹೇಳಿದ್ದೇನು?
ಎಲ್ಲ ವಿದ್ಯಾರ್ಥಿಗಳು ಪಾಸ್, ಶಿಕ್ಷಣ ಸಚಿವರು ಫೇಲ್! | ರಿ ಎಕ್ಸಾಮ್ ಬರೀತಾರಾ ಸುರೇಶ್ ಕುಮಾರ್?
ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿ | ದ.ಕ.ಸೇರಿದಂತೆ 8 ಗಡಿ ಜಿಲ್ಲೆಗಳಲ್ಲಿ ವಾರಾಂತ್ಯ ಕರ್ಫ್ಯೂ
“ಕೋತಿ ತಾನು ಕೆಡುವುದಲ್ಲದೇ ವನವನ್ನೆಲ್ಲ ಕೆಡಿಸ್ತು” | ಎನ್.ಮಹೇಶ್ ಬಿಜೆಪಿ ಸೇರ್ಪಡೆಗೆ ಎಸ್ ಡಿಪಿಐ ಆಕ್ರೋಶ
ತಾಯಿಯೇ ಮಗನಿಗೆ ಮೋಸ ಮಾಡಿದಾಗ ಮಗ ಅನಾಥನಾಗಿದ್ದ | ಬಿಜೆಪಿ ಸೇರ್ಪಡೆಗೆ ಎನ್.ಮಹೇಶ್ ಪ್ರತಿಕ್ರಿಯೆ