ಗಾಂಜಾ ಇದೆಯೆಂದು ಮನೆ ತಲಾಶ್: ಜಿಂಕೆ ಮಾಂಸ, ಬಂದೂಕು, ಉಗುರುಗಳು ಪತ್ತೆ

shivanaga shetty
16/12/2022

ಚಾಮರಾಜನಗರ: ಗಾಂಜಾ ಸಂಗ್ರಹದ ಖಚಿತ ಮಾಹಿತಿ ಮೇರೆಗೆ ಸೆನ್ ಹಾಗೂ ಬಂಡೀಪುರ ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದ ವೇಳೆ ಜಿಂಕೆ ಮಾಂಸ, ಪ್ರಾಣಿಗಳ ಉಗುರುಗಳು ಪತ್ತೆಯಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಅಣ್ಣೂರುಕೇರಿ ಗ್ರಾಮದಲ್ಲಿ ನಡೆದಿದೆ.

ಶಿವನಾಗಶೆಟ್ಟಿ (34) ಬಂಧಿತ ಆರೋಪಿ‌. ಈತನ ಮನೆಯಲ್ಲಿ ಗಾಂಜಾ ಇದೆ ಎಂದು ಶೋಧಿಸಿದಾಗ 6 ಗಾಂಜಾ ಗಿಡ ಜೊತೆಗೆ 5 ಕೆಜಿಯಷ್ಟು ಜಿಂಕೆ ಮಾಂಸ ಕೂಡ ಪತ್ತೆಯಾಗಿದೆ.

ಬೇಟೆಗಾಗಿ ಬಳಸಿದ್ದ ನಾಡ ಬಂದೂಕು, ಕರಡಿಯ ಉಗುರುಗಳು, ಕಾಡುಬೆಕ್ಕಿನ  ಉಗುರುಗಳು, ಸಿಡಿಮದ್ದು ಕೂಡ ಪತ್ತೆಯಾಗಿದೆ.‌ ಘಟನೆ ಸಂಬಂಧ ಇಬ್ಬರು ಪರಾರಿಯಾಗಿದ್ದು ಶಿವನಾಗನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version