ಜೊತೆ ಜೊತೆಯಲಿ ಧಾರಾವಾಹಿ ವೀಕ್ಷಕರಿಗೆ ಸಿಹಿ ಸುದ್ದಿ ನೀಡಿದ ಅನು ಸಿರಿಮನೆ
ಬೆಂಗಳೂರು: “ಜೊತೆ ಜೊತೆಯಲಿ” ಧಾರಾವಾಹಿಯಿಂದ ಅನು ಸಿರಿಮನೆ ಪಾತ್ರ ಮಾಡುತ್ತಿದ್ದ ನಟಿ ಮೇಘಾ ಶೆಟ್ಟಿ ಸೀರಿಯಲ್ ತೊರೆದು ಚಿತ್ರರಂಗಕ್ಕೆ ಕಾಲಿಡಲಿದ್ದಾರೆ ಎನ್ನುವ ಗೊಂದಲಗಳಿಗೆ ಸ್ವತಃ ಅವರೇ ತೆರೆ ಎಳೆದಿದ್ದಾರೆ.
ನಾನು ಸೀರಿಯಲ್ ನಿಂದ ಹೊರಗಿದ್ದೇನೆ ಎನ್ನುವ ಸುದ್ದಿಯಾಗಿತ್ತು. ಕುಟುಂಬ ಎಂದರೆ ಗೊಂದಲಗಳು ಸಹಜ. ನನ್ನ ಕುಟುಂಬದಲ್ಲಿಯೂ ಗೊಂದಲಗಳಾಗಿದ್ದವು. ಈಗ ಗೊಂದಲ ನಿವಾರಣೆಯಾಗಿದ್ದು, ಜೊತೆ ಜೊತೆಯಲಿ ಸೀರಿಯಲ್ ಮುಗಿಯುವವರೆಗೂ ‘ಅನು ಸಿರಿಮನೆ’ ಈ ಪಾತ್ರವನ್ನು ನಾನೇ ಮುಂದುವರಿಸುತ್ತೇನೆ. ಇದಕ್ಕಾಗಿ ನನ್ನ ಗುರುಗಳಾದ ನಿರ್ದೇಶಕ ಆರೂರು ಜಗದೀಶ್ ಹಾಗೂ ಝೀ ಕನ್ನಡ, ಜೊತೆ ಜೊತೆಯಲಿ ಧಾರಾವಾಹಿ ಕುಟುಂಬಕ್ಕೆ ಆಭಾರಿಯಾಗಿರುತ್ತೇನೆ ಎಂದು ಅವರು ಇನ್ ಸ್ಟಾಗ್ರಾಮ್ ನಲ್ಲಿ ವಿಡಿಯೋ ಪೊಸ್ಟ್ ಮಾಡಿದ್ದಾರೆ.
ಇನ್ನೂ ಈ ಗೊಂದಲಗಳಿಂದ ನನ್ನ ಪ್ರೀತಿಯ ವೀಕ್ಷಕರಿಗೆ ಮತ್ತು ನನ್ನ ಕುಟುಂಬಕ್ಕೆ ಆತಂಕ ಉಂಟಾಗಿದ್ದಕ್ಕೆ ಕ್ಷಮೆಯಾಚಿಸುತ್ತೇನೆ ಎಂದು ಅವರು ಹೇಳಿದ್ದಾರೆ. ಹಿಂದಿನ ರೀತಿಯೇ ನಮ್ಮನ್ನು ಪ್ರೋತ್ಸಾಹಿಸಿ, ಜೊತೆ ಜೊತೆಯಲಿ ಸೀರಿಯಲ್ ನನಗೆ ಬಹಳಷ್ಟು ಕೊಟ್ಟಿದೆ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಸುದ್ದಿಗಳು
ಜೊತೆ ಜೊತೆಯಲಿ ಸೀರಿಯಲ್ ನಿಂದ ಹೊರ ಬಂದ ಮೇಘ ಶೆಟ್ಟಿ | ಅನು ಪಾತ್ರ ಮುಂದೆ ಯಾರು ನಿರ್ವಹಿಸಲಿದ್ದಾರೆ?
“ಬೀಸ್ಟ್” ಇಳೆಯದಳಪತಿ ವಿಜಯ್ ಅವರ 65ನೇ ಚಿತ್ರದ ಫಸ್ಟ್ ಲುಕ್ ಬಿಡುಗಡೆ
ಪ್ರಧಾನಿಯೇ ವಿಫಲವಾಗಿರೋವಾಗ, ಹೊಸ ಸಚಿವರಿಂದ ಏನು ಮಾಡಲು ಸಾಧ್ಯ? | ಸತೀಶ್ ಜಾರಕಿಹೊಳಿ ಪ್ರಶ್ನೆ
ಅಪ್ರಾಪ್ತೆಗೆ ಮಾದಕ ವ್ಯಸನ ಕಲಿಸಿ ಲೈಂಗಿಕ ದೌರ್ಜನ್ಯ: ಬೆಚ್ಚಿ ಬೀಳಿಸಿದ ಯುವಕರ ಗ್ಯಾಂಗ್ ನ ಕೃತ್ಯ