ಜೊತೆ ಜೊತೆಯಲಿ ಸೀರಿಯಲ್ ನಿಂದ ಹೊರ ಬಂದ ಮೇಘ ಶೆಟ್ಟಿ | ಅನು ಪಾತ್ರ ಮುಂದೆ ಯಾರು ನಿರ್ವಹಿಸಲಿದ್ದಾರೆ? - Mahanayaka
1:10 PM Sunday 14 - September 2025

ಜೊತೆ ಜೊತೆಯಲಿ ಸೀರಿಯಲ್ ನಿಂದ ಹೊರ ಬಂದ ಮೇಘ ಶೆಟ್ಟಿ | ಅನು ಪಾತ್ರ ಮುಂದೆ ಯಾರು ನಿರ್ವಹಿಸಲಿದ್ದಾರೆ?

jote joteyali megha shetty
09/07/2021

ಕನ್ನಡದ ಹಿಟ್ ಸಿರಿಯಲ್ ಗಳಲ್ಲಿ ಒಂದಾದ  ಜೊತೆ ಜೊತೆಯಲಿ ಧಾರವಾಹಿಯಲ್ಲಿ ಅನು ಪಾತ್ರದಲ್ಲಿ ನಟಿಸುತ್ತಿದ್ದ ಮೇಘಶೆಟ್ಟಿ ಅವರು ಸೀರಿಯಲ್ ನಿಂದ ಹೊರ ಬಂದಿದ್ದಾರೆ ಎಂದು ಹೇಳಲಾಗಿದ್ದು, ಹೀಗಾಗಿ ಮುಂದಿನ ತಿಂಗಳಿನಿಂದ ಈ ಸಿರಿಯಲ್ ಗೆ ಹೊಸ ನಟಿ ಎಂಟ್ರಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.


Provided by

ಮಾಹಿತಿಗಳ ಪ್ರಕಾರ ನಿನ್ನೆ ಮೇಘ ಶೆಟ್ಟಿ ಅವರು ಜೊತೆ ಜೊತೆಯಲಿ ಸೀರಿಯಲ್ ನಿಂದ ಅಧಿಕೃತವಾಗಿ ಹೊರ ಬಂದಿದ್ದಾರೆ ಎಂದು ಹೇಳಲಾಗಿದೆ. ನಿನ್ನೆ ಅವರ ಕೊನೆಯ ಶೂಟಿಂಗ್ ನಡೆದಿದೆ ಎಂದು ಹೇಳಲಾಗಿದೆ.

ಇನ್ನು ಕೆಲವು ದಿನಗಳ ಕಾಲ ಮೇಘ ಶೆಟ್ಟಿ ಅವರು ನಟಿಸಿರುವ ಎಪಿಸೋಡ್ ಗಳು ಪ್ರಸಾರವಾಗಲಿದೆ. ಈ ತಿಂಗಳ ಬಳಿಕ ಹೊಸ ನಟಿಯ ಎಂಟ್ರಿಯಾಗಲಿದೆ ಎಂದು ತಿಳಿದು ಬಂದಿದೆ.  ಸದ್ಯ ಹೊಸ ನಾಯಕಿಯ ಹುಡುಕಾಟದಲ್ಲಿ  ಸೀರಿಯಲ್ ತಂಡ ನಿರತರಾಗಿದ್ದಾರೆ ಎಂದು ಹೇಳಲಾಗಿದೆ.

ವೈಯಕ್ತಿಕ ಹಾಗೂ ಸಿನಿಮಾಗಳ ಕಾರಣಕ್ಕಾಗಿ ಮೇಘ ಶೆಟ್ಟಿ ಜೊತೆ ಜೊತೆಯಲಿ ಸೀರಿಯಲ್ ನ್ನು ತ್ಯಜಿಸಿದ್ದಾರೆ ಎಂದು ಹೇಳಲಾಗಿದೆ. ಈ ಸೀರಿಯಲ್ ಆರಂಭದಲ್ಲಿ ಭಾರೀ ಹವಾ ಸೃಷ್ಟಿಸಿತ್ತು. ಗಂಡಸರನ್ನು ಕೂಡ ಸೆಳೆದಿತ್ತು. ಈ ಸೀರಿಯಲ್ ನಲ್ಲಿ ನಾಯಕರಾಗಿ ಅನಿರುದ್ಧ್ ಅವರು ನಟಿಸುತ್ತಿದ್ದಾರೆ.

ಇತ್ತೀಚಿನ ಸುದ್ದಿ