1,500 ವರ್ಷಗಳ ಹಳೆಯ, ಜೊತೆಯಾಗಿ ಸಮಾಧಿ ಮಾಡಲಾದ ಪ್ರೇಮಿಗಳ ಅಸ್ಥಿಪಂಜರಗಳು ಪತ್ತೆ ! - Mahanayaka
7:28 PM Thursday 19 - September 2024

1,500 ವರ್ಷಗಳ ಹಳೆಯ, ಜೊತೆಯಾಗಿ ಸಮಾಧಿ ಮಾಡಲಾದ ಪ್ರೇಮಿಗಳ ಅಸ್ಥಿಪಂಜರಗಳು ಪತ್ತೆ !

1500 year old skeletons
28/08/2021

ಚೀನಾ:  ಚೀನಾದಲ್ಲಿ  386. 434 CE ಕಾಲಮಾನದ ಉತ್ತರ ವೀ ರಾಜವಂಶದ ಗಂಡು ಹೆಣ್ಣಿನ ಅಸ್ಥಿಪಂಜರಗಳು ಪತ್ತೆಯಾಗಿದ್ದು,  ಉತ್ತರ ಚೀನಾದ ಶಾಂಕ್ಸಿ ಪ್ರಾಂತ್ಯವನ್ನು ಉತ್ಖನನ ಮಾಡುವ ವೇಳೆ, ಇಲ್ಲಿನ ಕಾರ್ಮಿಕರು ಅವುಗಳನ್ನು ಕಂಡು ಹಿಡಿದಿದ್ದಾರೆ.

ಅಸ್ಥಿ ಪಂಜರದಲ್ಲಿರುವ ಮೃತದೇಹಗಳು ಗಂಡು ಮತ್ತು ಹೆಣ್ಣಿನ ಅಸ್ಥಿ ಪಂಜರಗಳಾಗಿದ್ದು, ಈ ಪೈಕಿ ಪುರುಷನ ಅಸ್ಥಿ ಪಂಜರವು  ಸುಮಾರು 29ರಿಂದ 35 ವರ್ಷದೊಳಗಿನ ವ್ಯಕ್ತಿ ಎನ್ನಲಾಗಿದ್ದು, ಐದು ಅಡಿ 4 ಇಂಚು ಎತ್ತರ ಇದೆ. ಮಹಿಳೆಗೆ ಸಾಯುವ ಸಂದರ್ಭದಲ್ಲಿ 35ರಿಂದ 40 ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದೆ.

ಈ ಇಬ್ಬರಿಗೂ ಗಾಢವಾದ ಸಂಬಂಧ ಇದ್ದಿರಬಹುದು ಎಂದು ಹೇಳಲಾಗಿದೆ. ಆದರೆ, ಇವರ ಜೀವನದ ಕಥೆ ಏನು ಎನ್ನುವುದು ಇನ್ನೂ ತಿಳಿದು ಬಂದಿಲ್ಲ.  ಪತ್ನಿ ತನ್ನ ಸತ್ತ ಪತಿಯೊಂದಿಗೆ ಸಮಾಧಿ ಯಾಗಿರುವಳೇ? ಅಥವಾ ಒಂದೇ ಬಾರಿಗೆ ಇಬ್ಬರು ಕೂಡ ಮೃತಪಟ್ಟಿರ ಬಹುದೇ ಎಂಬ ಬಗ್ಗೆ ಇತಿಹಾಸ ತಜ್ಞರು ಇದೀಗ ಅಧ್ಯಯನ ನಡೆಸುತ್ತಿದ್ದಾರೆ.


Provided by

ಇನ್ನಷ್ಟು ಸುದ್ದಿಗಳು…

ಕಲಬುರ್ಗಿ ಜಿಲ್ಲೆಯ ಜನರು ಸೋಂಬೇರಿಗಳು ಎಂಬ ತನ್ನ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಸಚಿವ ಮುರುಗೇಶ್ ನಿರಾಣಿ

ಶಾಕಿಂಗ್ ನ್ಯೂಸ್ : ಭಾರತದ ಈ ದೊಡ್ಡ ನಗರ ಜಲಸಮಾಧಿಯಾಗಲಿದೆ!

ವಿಮಾನದೊಳಗೆ ಸಿಗರೇಟ್ ಸೇದಿದ ಮಹಿಳೆ: ಸಹ ಪ್ರಯಾಣಿಕರು ವಿರೋಧಿಸಿದರೂ ಕ್ಯಾರೇ ಅನ್ನಲಿಲ್ಲ

ಸಾಮೂಹಿಕ ಅತ್ಯಾಚಾರ ಪ್ರಕರಣ: ಬಂಧಿತ ಐದು ಮಂದಿಯ ಪೈಕಿ ಓರ್ವ ಅಪ್ರಾಪ್ತ ವಯಸ್ಕ

ಯೋಗಿ ವಿರುದ್ಧ ಸ್ಪರ್ಧಿಸುತ್ತೇನೆ ಎಂದಿದ್ದ ಮಾಜಿ ಐಪಿಎಸ್ ಅಧಿಕಾರಿ ಅರೆಸ್ಟ್!

ಮೈಸೂರು: ಸಾಮೂಹಿಕ ಅತ್ಯಾಚಾರದ ಆರೋಪಿಗಳು ಇನ್ನಷ್ಟು ಕೃತ್ಯಗಳಲ್ಲಿ ಭಾಗಿಯಾಗಿರುವ ಶಂಕೆ!

126 ಪ್ರಯಾಣಿಕರನ್ನು ಹೊತ್ತು ಹಾರುತ್ತಿದ್ದ ವಿಮಾನದ ಪೈಲಟ್ ಗೆ ಹೃದಯಾಘಾತ: ಮುಂದೆ ನಡೆದದ್ದೇನು?

ಇತ್ತೀಚಿನ ಸುದ್ದಿ