ಜೊತೆ ಜೊತೆಯಲಿ ಧಾರಾವಾಹಿಯಿಂದ ಅನಿರುದ್ಧ್ ಔಟ್?: ಶೂಟಿಂಗ್ ವೇಳೆ ನಡೆದ್ದದ್ದೇನು?
Zee Kannadaದಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿ ಬಗ್ಗೆ ಗುಸು ಗುಸು ಸುದ್ದಿಗಳು ಕೇಳಿ ಬರುತ್ತಿದ್ದು, ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್ ಅವರು ನಾಯಕ ನಟನಾಗಿ ನಟಿಸುತ್ತಿರುವ ಈ ಧಾರವಾಹಿಯಿಂದ ಇದೀಗ ಅನಿರುದ್ಧ್ ಅವರನ್ನು ಜೊತೆ ಜೊತೆಯಲಿ ಧಾರಾವಾಹಿಯಿಂದ ತಂಡ ಹೊರ ಹಾಕಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.
ವರದಿಗಳ ಪ್ರಕಾರ, ಧಾರವಾಹಿಯ ನಾಯಕ ಅನಿರುದ್ಧ್ ವಿರುದ್ಧ ಸಿರಿಯಲ್ ತಂಡದಲ್ಲಿ ತಕರಾರು ಎದ್ದಿದ್ದು, ದೃಶ್ಯವೊಂದರಲ್ಲಿ ನಟಿಸುವ ವಿಚಾರಕ್ಕೆ ಸಂಬಂಧಿಸಿದಂತೆ ತಕರಾರು ಉಂಟಾಗಿದ್ದು, ಇದಕ್ಕೆ ಅನಿರುದ್ಧ್ ಒಪ್ಪದೇ ಶೂಟಿಂಗ್ ಅರ್ಧಕ್ಕೆ ಬಿಟ್ಟು ಹೊರ ನಡೆದಿದ್ದಾರೆನ್ನಲಾಗಿದೆ.
ಅನಿರುದ್ಧ್ ಅವರು ಈ ಹಿಂದೆಯೂ ಇದೇ ರೀತಿ ವರ್ತಿಸಿದ್ದರು. ಈ ವೇಳೆ ಧಾರಾವಾಹಿ ತಂಡದವರು ಅವರ ಮನವೊಲಿಸಿ ಮತ್ತೆ ಕರೆತಂದಿದ್ದರು. ಆದರೆ, ಪದೇ ಪದೇ ಅವರ ಈ ವರ್ತನೆಯಿಂದ ಬೇಸತ್ತು ಅವರನ್ನು ಧಾರಾವಾಹಿಯಿಂದ ಹೊರ ಹಾಕಲು ನಿರ್ಧರಿಸಲಾಗಿದೆ. ಅಲ್ಲದೇ ಯಾವುದೇ ನಿರ್ಮಾಪಕರು ಧಾರವಾಹಿಗಳಲ್ಲಿ ಅನಿರುದ್ಧ್ ಅವರಿಗೆ ಅವಕಾಶ ನೀಡಬಾರದು ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.
ಜೊತೆ ಜೊತೆಯಲಿ ಧಾರಾವಾಹಿ, ಅತ್ಯುತ್ತಮ ಟಿಆರ್ ಪಿ ಹೊಂದಿದೆ. ಆರಂಭದಲ್ಲಿ ಜನಪ್ರಿಯವಾಗಿದ್ದ ಧಾರಾವಾಹಿ, ಈಗಲೂ ಜನಪ್ರಿಯತೆ ಮುಂದುವರಿಸಿಕೊಂಡು ಬಂದಿದೆ. ಧಾರಾವಾಹಿಯ ನಟಿ ಮೇಘ ಶೆಟ್ಟಿ, ಈ ಹಿಂದೆ ಸೀರಿಯಲ್ ನಿಂದ ಹೊರ ನಡೆಯುವುದಾಗಿ ಹೇಳಿ ವಿವಾದವಾಗಿತ್ತು. ಇದೀಗ ಅನಿರುದ್ಧ್ ಅವರ ವಿವಾದ ಆರಂಭವಾಗಿದೆ. ಈ ವಿವಾದ ಸುಖಾಂತ್ಯವಾಗಲಿ ಎಂದು ಧಾರಾವಾಹಿ ವೀಕ್ಷಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka