ಪತ್ರಕರ್ತರು ಸಮಾಜಮುಖಿ ಚಿಂತನೆ ಹೊಂದಿರಬೇಕು: ರಘುವೀರಸಿಂಗ್ ಠಾಕೂರ್
ಔರಾದ್: ಪತ್ರಕರ್ತರು ನಿರ್ಭೀತ ವರದಿ ಮಾಡುವ ಎದೆಗಾರಿಕೆ, ನ್ಯಾಯ ನಿಷ್ಠುರವಾಗಿ ಸಮಾಜಮುಖಿ ಚಿಂತನೆಗಳನ್ನು ಮಂಡಿಸುವ ಗುಣ ಹೊಂದಿರಬೇಕು ಎಂದು ಸಿಪಿಐ ರಘುವೀರಸಿಂಗ್ ಹೇಳಿದರು.
ತಾಲ್ಲೂಕಿನ ಸಿದ್ಧರಾಮೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಪತ್ರಕರ್ತರು ವೃತ್ತಿ ಧರ್ಮ ಎತ್ತಿ ಹಿಡಿದು ಸಮಾಜದ ತಪ್ಪುಗಳನ್ನು ತಿದ್ದುವ ಕೆಲಸ ಮಾಡಬೇಕು’ ಪತ್ರಕರ್ತರು ಬಹಳ ಎಚ್ಚರಿಕೆಯಿಂದ ಕೆಲಸಮಾಡಬೇಕು. ಪ್ರಸ್ತುತ ದಿನಗಳಲ್ಲಿ ಪತ್ರಿಕೋದ್ಯಮ ಬೆಳವಣಿಗೆ ಕಂಡಾಗ ತುಂಬಾ ಸಂತೋಷವಾಗುತ್ತದೆ ಎಂದರು.
ಅನುಭವ ಮಂಟಪ ಸಂಸ್ಥೆಯ ಸ್ಥಾನಿ ಕಮಿಟಿ ಅಧ್ಯಕ್ಷ ಸಂಜುಕುಮಾರ ಜುಮ್ಮಾ ಮಾತನಾಡಿ ಪತ್ರಕರ್ತರಿಗೆ ಸಮಾಜದಲ್ಲಿ ಮಹತ್ವದ ಸ್ಥಾನವಿದ್ದು, ಅವರಿಗೆ ಹೊಣೆಗಾರಿಕೆಯೂ ದೊಡ್ಡದಿದೆ. ಹಿರಿಯ ಪತ್ರಕರ್ತರು ಕಿರಿಯರಿಗೆ ಮಾದರಿಯಾಗಿ ಇರುವ ಅಗತ್ಯ ಇದೆ. ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಮಾಧ್ಯಮಗಳ ಪಾತ್ರ ಬಹಳ ಮಹತ್ವದ್ದು. ಆಡಳಿತ ನಡೆಸುವವರ ಲೋಪ ದೋಷಗಳನ್ನು ಎತ್ತಿ ತೋರಿಸಿ, ಜನಾಭಿಪ್ರಾಯ ರೂಪಿಸುವ ದೊಡ್ಡ ಶಕ್ತಿ ಮಾಧ್ಯಮಕ್ಕಿದೆ. ಔರಾದ್ ತಾಲೂಕಿನ ಅಭಿವೃದ್ಧಿಯ ಕುಂಟಿತಕ್ಕೆ ಇರುವ ನೂನ್ಯತೆಗಳನ್ನು ಎತ್ತಿತೋರಿಸುವ ಕೆಲಸವನ್ನು ತಾಲೂಕಿನ ಪತ್ರಕರ್ತರು ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಪ್ರಾಂಶುಪಾಲ ನವೀಲಕುಮಾರ ಉತ್ಕಾರ ಮಾತನಾಡಿ ಪತ್ರಿಕಾರಂಗ ಸರಕಾರ ಹಾಗೂ ಸಮಾಜದ ನಡುವಿನ ಸಂಪರ್ಕದ ಕೊಂಡಿಯಂತಾಗಿ ಕಾರ್ಯನಿರ್ವಹಿಸುತ್ತಿದೆ. ಸಾರ್ವಜನಿಕರ ಕುಂದು ಕೊರತೆಗಳ ಬಗ್ಗೆ ವರದಿಗಳನ್ನು ಸರಕಾರದ ಹಾಗೂ ಜನಪತ್ರಿನಿಧಿಗಳ ಗಮನಕ್ಕೆ ತರುವ ನಿಟ್ಟಿನಲ್ಲಿ ವರದಿಗಾರರು ಅವಿರತವಾಗಿ ಶ್ರಮಿಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲ ಗುರುಪ್ರೀತ್ ಕೌರ್, ಮುಖ್ಯ ಗುರುಗಳಾದ ಶಿವಕುಮಾರ್ ಹಿರೇಮಠ ಗಜಾನಂದ್ ಮುಂಗೆ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರಾದ ಧನರಾಜ್ ಮುಸ್ತಾಪುರ, ಸಂಜು ಲಾದ ಹಾಗೂ ತಾಲೂಕಿನ ಹಿರಿಯ ಪತ್ರಕರ್ತ ಶರಣಪ್ಪಾ ಚಿಟಮೆ, ಅಮರೇಶ ಚಿದ್ರೆ, ಮನ್ಮಥಪ್ಪಾ ಸ್ವಾಮಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕ ಅಧ್ಯಕ್ಷ ಶಿವಾನಂದ ಮೊಕ್ತೆದಾರ, ಮಲ್ಲಪ್ಪಾ ಗೌಡ, ಪರಮೇಶ ವಿಳಸಪೂರೆ, ರಿಯಾಜಪಾಶ್, ಬಾಲಾಜಿ ಕುಂಬಾರ, ಸೂರ್ಯಕಾಂತ ಎಕಲಾರ, ಅಹ್ಮದ ಜಂಬಗಿ, ಅಂಬಾದಾಸ ನೇಳಗೆ, ರಾಚಯ್ಯ ಸ್ವಾಮಿ, ಅಲಿಂಪಾಶ, ಸುಧೀರ್ ಪಾಂಡ್ರೆ, ರವಿಕುಮಾರ ಶಿಂದೆ, ಅಂಬಾದಾಸ ಉಪ್ಪಾರ, ಶಿವಾನಂದ ಬೇಂದ್ರೆ ಸೇರಿದಂತೆ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ:- ರವಿಕುಮಾರ ಶಿಂದೆ
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: