ಜ್ಯೂಸ್ ಎಂದು ಭಾವಿಸಿ ತಾತನ ಬ್ರಾಂಡಿ ಕುಡಿದ 5 ವರ್ಷದ ಬಾಲಕ, ತಾತ ಇಬ್ಬರೂ ಸಾವು
ವೆಲ್ಲೂರ್: ಜ್ಯೂಸ್ ಎಂದು ಭಾವಿಸಿ ಆಲ್ಕೋ ಹಾಲ್ ಸೇವಿಸಿದ್ದ 5 ವರ್ಷ ವಯಸ್ಸಿನ ಬಾಲಕ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಅಣ್ಣಾನಗರ್ ನಲ್ಲಿ ನಡೆದಿದ್ದು, ತಾತ ಕುಡಿಯಲು ತಂದಿಟ್ಟಿದ್ದ ಬ್ರಾಂಡಿ ಮೊಮ್ಮಗನ ಸಾವಿಗೆ ಕಾರಣವಾಗಿದೆ.
62 ವರ್ಷ ವಯಸ್ಸಿನ ತಾತಾ ಚಿನ್ನಸ್ವಾಮಿ ತಮ್ಮ ರೂಮ್ ನಲ್ಲಿ ಬ್ರಾಂಡಿ ಬಾಟಲಿ ಇಟ್ಟಿದ್ದು, ಅವರ ರೂಮ್ ಗೆ ಯಾರೂ ಇಲ್ಲದ ವೇಳೆ ಹೋದ ಬಾಲಕ ಬ್ರಾಂಡಿಯನ್ನು ಜ್ಯೂಸ್ ಎಂದು ಭಾವಿಸಿ ಕುಡಿದಿದ್ದಾನೆ. ಆತ ಕುಡಿದಿರುವ ವಿಚಾರ ಕೂಡ ಯಾರಿಗೂ ತಿಳಿದಿರಲಿಲ್ಲ.
ಏಕಾಏಕಿ ಬಾಲಕನ ಆರೋಗ್ಯದಲ್ಲಿ ಏರುಪೇರಾಗಿದೆ. ಮೊಮ್ಮಗ ಬ್ರಾಂಡಿಯನ್ನು ಸೇವಿಸಿ ಅಸ್ವಸ್ಥನಾಗಿದ್ದಾನೆ ಎನ್ನುವುದು ತಿಳಿಯುತ್ತಿದ್ದಂತೆಯೇ ತಾತ ಚಿನ್ನ ಸ್ವಾಮಿ ಕೂಡ ಆಘಾತಕ್ಕೊಳಗಾಗಿ ತೀವ್ರವಾಗಿ ಅಸ್ವಸ್ಥರಾಗಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ತಾತಾ ಹಾಗೂ ಮೊಮ್ಮಗ ಇಬ್ಬರೂ ಮೃತಪಟ್ಟಿದ್ದಾರೆ.
ಶ್ರೀಮಂತರ ಸೇವಿಸುವ ಡ್ರಗ್ಸ್ ಗಳನ್ನು ಬ್ಯಾನ್ ಮಾಡಿ, ಬಡವರು ಸೇವಿಸುವ ಮದ್ಯವನ್ನು ಮಾರಾಟ ಮಾಡಲಾಗುತ್ತಿದೆ. ಬಡವರ ಪ್ರಾಣವನ್ನು ಹಿಂಡುತ್ತಿರುವ ಮದ್ಯವನ್ನು ದೇಶಾದ್ಯಂತ ಬ್ಯಾನ್ ಮಾಡಬೇಕು ಎನ್ನುವ ಒತ್ತಾಯಗಳು ಈ ಹಿಂದಿನಿಂದಲೂ ಕೇಳಿ ಬರುತ್ತಿದೆ. ಮದ್ಯ ಕೂಡ ಮಾದಕ ವ್ಯಸನವೇ ಆಗಿದೆ. ಅದನ್ನು ಬ್ಯಾನ್ ಮಾಡಿದರೆ, ಎಷ್ಟೋ ಬಡವರ ಮನೆಗಳಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ ಎನ್ನುವ ಅಭಿಪ್ರಾಯಗಳು ಸಮಾಜದಲ್ಲಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GprkhpfFmuL8YDKlAEmru9
ಇನ್ನಷ್ಟು ಸುದ್ದಿಗಳು…
ಪ್ರವಾದಿಯ ಅವಹೇಳನಾಕಾರಿ ವ್ಯಂಗ್ಯ ಚಿತ್ರ ಬಿಡಿಸಿದ್ದ ವಿವಾದಿತ ಕಲಾವಿದ ಅಪಘಾತದಲ್ಲಿ ಸಾವು!
ಬಿಜೆಪಿ ರೈತರ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನು ಬ್ರಿಟಿಷರು ಕೂಡ ಮಾಡಿರಲಿಲ್ಲ | ಅಖಿಲೇಶ್ ಯಾದವ್
ರೈತರ ಹತ್ಯಾಕಾಂಡ: ಬೇಡಿಕೆ ಈಡೇರದ ಹೊರತು ಮೃತ ರೈತರ ಅಂತ್ಯಸಂಸ್ಕಾರ ಮಾಡಲ್ಲ | ರಾಕೇಶ್ ಟಿಕಾಯತ್ ಪಟ್ಟು
ಲಿಖಿಂಪುರ ರೈತರ ಹತ್ಯಾಕಾಂಡ: ಬಿಎಸ್ ಪಿ ನಾಯಕರನ್ನೂ ಗೃಹ ಬಂಧನದಲ್ಲಿರಿಸಲಾಗಿದೆ | ಮಾಯಾವತಿ
ಕಾರು ಹತ್ತಿಸಿ ಪ್ರತಿಭಟನಾ ನಿರತ ಮೂವರು ರೈತರ ಭೀಕರ ಹತ್ಯೆ ಮಾಡಿದ ಕೇಂದ್ರ ಸಚಿವರ ಪುತ್ರ!
ಪತ್ನಿಯನ್ನು 500 ರೂಪಾಯಿಗೆ ಮಾರಾಟ ಮಾಡಿದ ಪತಿ | ಖರೀದಿಸಿದವನಿಂದ ಮಹಿಳೆಯ ಅತ್ಯಾಚಾರ
ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರಿನಲ್ಲಿ ಮುಳುಗಿ ದಾರುಣ ಸಾವು!




























