ಜೂನ್ 21 ರಂದು 30 ಸಾವಿರ ಜನರಿಗೆ ಲಸಿಕಾಕರಣಕ್ಕೆ ಗುರಿ: ಜಿಲ್ಲಾಧಿಕಾರಿ - Mahanayaka
8:14 AM Saturday 21 - September 2024

ಜೂನ್ 21 ರಂದು 30 ಸಾವಿರ ಜನರಿಗೆ ಲಸಿಕಾಕರಣಕ್ಕೆ ಗುರಿ: ಜಿಲ್ಲಾಧಿಕಾರಿ

latha
20/06/2021

ಚಿಕ್ಕಬಳ್ಳಾಪುರ: ಜಿಲ್ಲಾ ಸರ್ಕಾರಿ ಆಸ್ಪತ್ರೆ, ಎಲ್ಲಾ ತಾಲ್ಲೂಕು ಸರ್ಕಾರಿ ಆಸ್ಪತ್ರೆಗಳು,ಎಲ್ಲಾ ನಗರಸಭೆ/ಪುರಸಭೆಗಳು, 4ನಗರ ಆರೋಗ್ಯ ಕೇಂದ್ರಗಳು, 2ಸಮುದಾಯ ಆರೋಗ್ಯ ಕೇಂದ್ರಗಳು, 57ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕೋವಿಡ್ ಲಸಿಕಾ ಕೇಂದ್ರಗಳೂ ಸೇರಿದಂತೆ ಜಿಲ್ಲೆಯ ಎಲ್ಲಾ 157 ಗ್ರಾಮ ಪಂಚಾಯಿತಿಗಳಲ್ಲಿ ಒಟ್ಟು 232 ಲಸಿಕಾ ಕೇಂದ್ರಗಳಲ್ಲಿ ಜೂನ್ 21 ರಂದು ಕೋವಿಡ್-19 ಲಸಿಕಾ ಮೇಳವನ್ನು ಆಯೋಜಿಸಲಾಗಿದ್ದು,30 ಸಾವಿರ ಜನರಿಗೆ ಲಸಿಕಾಕರಣ ಮಾಡಲು ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಅವರು ತಿಳಿಸಿದರು .

ಕರೋನಾವನ್ನು ಸಂಪೂರ್ಣವಾಗಿ ತೊಲಗಿಸಬೇಕಾದರೆ ಕೋವಿಡ್ ಲಸಿಕಾಕರಣವೇ ಅಂತಿಮ ಅಸ್ತ್ರವಾಗಿದೆ ಇದನ್ನು ಸರ್ಕಾರ ಮನಗಂಡು ಚಾಲ್ತಿಯಲ್ಲಿರುವ ಲಸಿಕಾಕರಣ ಪ್ರಕ್ರಿಯೆಗೆ ಇನ್ನಷ್ಟು ವೇಗ ನೀಡಲು ಕೋವಿಡ್-19 ಲಸಿಕಾ ಮೇಳವನ್ನು ಆಯೊಜಿಸುವಂತೆ ಆದೇಶಿಸಿದೆ.ಈ ಹಿನ್ನಲೆಯಲ್ಲಿ ಜೂನ್ 21ರಂದು ಜಿಲ್ಲೆಯಾದ್ಯಂತ “ಕೋವಿಡ್-19 ಲಸಿಕಾ ಮೇಳ”ವನ್ನು ವಿವಿಧ ಆದ್ಯತಾ ಗುಂಪಿನವರಿಗೆ ಹಮ್ಮಿಕೊಳ್ಳಲಾಗಿದ್ದು,ಆರೋಗ್ಯ ಇಲಾಖೆಯೂ ಸೇರಿದಂತೆ ಜಿಲ್ಲಾಡಳಿತದ ಎಲ್ಲಾ ಅಧಿಕಾರಿ/ಸಿಬ್ಬಂದಿಗಳು ಉತ್ತಮ ಕೆಲಸ ಮಾಡಿ 30000 ಲಸಿಕಾ ಗುರಿಯನ್ನು ತಲುಪಬೇಕೇಂದು ಸೂಚನೆ ನೀಡದರಲ್ಲದೇ ಜನರು ಸಹ ಈ ಮೇಳವನ್ನು ಯಶಸ್ವಿಗೊಳಿಸುವ ಮೂಲಕ 7ನೇ ಅಂತರಾಷ್ಟ್ರೀಯ ಯೋಗಾ ದಿನಾಚರಣೆಯನ್ನು ಆಚರಿಸಬೇಕು ಎಂದು ಜಿಲ್ಲಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಕೋವಿಡ್ 3 ಅಲೆ?


Provided by

ಭಾರತದಲ್ಲಿ ಕರೋನಾ 3 ಅಲೆ ಬರುವುದಾಗಿ ವಿಶ್ವಸಂಸ್ಥೆಯು ಅಭಿಪ್ರಾಯಪಟ್ಟಿದೆ ಮಕ್ಕಳ ಮೇಲೆ ದುಷ್ಪರಿಣಾಮ ಬೀರುವುದರ ಬಗ್ಗೆ ಖಾತರಿ ಪಡಿಸಿಲ್ಲ ಆದರೂ 3 ಅಲೆ ಬಂದರೆ ಎದುರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆಯನ್ನೂ ಸಹ ಮಾಡಿಕೊಂಡಿದೆ ಈ ಹಿಂದಿನಂತೆ ಜಿಲ್ಲೆಯ ಜನರು ಕೋವಿಡ್ ಮಾರ್ಗ ಸೂಚಿಗಳನ್ನು ಪಾಲಿಸುವುದರ ಜೊತೆಗೆ ಲಸಿಕೆ ಹಾಕಿಸಿಕೊಳ್ಳುವ ಮೂಲಕ ರೋಗನಿರೋಧಕ ಶಕ್ತಿಯನ್ನು ಹೇಚ್ಚಿಸಿಕೊಂಡು 3ನೇ ಅಲೆ ಜಿಲ್ಲೆಗೆ ಬರದಂತೆ ತಡೆಯಲು ಪಣ ತೊಡಬೇಕಿದೆ.ಜೂನ್ 21 ರಿಂದ ಸರ್ಕಾರ ಕೆಲವು ಕೋವಿಡ್ ನಿಬಂಧನೆಗಳನ್ನು ಜಿಲ್ಲೆಯಲ್ಲಿ ಸಡಿಲ ಮಾಡಿದೆ ಎಂದು ನಿರ್ಲಕ್ಷ್ಯ ವಹಿಸಿದರೆ ಆಪತ್ತಿಗೆ ಒಳಗಾಗುವ ಸಂಭವವಿರುತ್ತದೆ ಅಂತಹ ಅವಘಡಕ್ಕೆ ಜನರು ಅವಕಾಶ ಮಾಡಿಕೊಡಬೇಡಿ ಎಂದರು.

ಆದ್ಯತಾ ಗುಂಪಿನವರ ವಿವರ

* 45 ವರ್ಷ ಮೇಲ್ಪಟ್ಟ ಎಲ್ಲಾ ಫಲಾನುಭವಿಗಳಿಗೆ ಮೊದಲ ಆದ್ಯತೆ.
* 2ನೇ ಡೋಸ್ ಬಾಕಿ ಇರುವ ಫಲಾನುಭವಿಗಳಿಗೆ ಆದ್ಯತೆ ಮೇಲೆ ಲಸಿಕಾಕರಣ.
* ಭಾರತ ಸರ್ಕಾರದ ವ್ಯಾಖ್ಯಾನದಂತೆ ಆರೋಗ್ಯ ಕಾರ್ಯಕರ್ತೆಯರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಲಸಿಕಾಕರಣ.
* 18 ರಿಂದ 44 ವರ್ಷದ ವಯೋಮಾನದವರ ಸರ್ಕಾರ ಗುರ್ತಿಸಿರುವ ದುರ್ಬಲ ಗುಂಪಿನ ಫಲಾನುಭವಿಗಳು ಮತ್ತು ಜಿಲ್ಲಾ ಕೊರೋನ ಮುಂಚೂಣಿ ಕಾರ್ಯಕರ್ತರಿಗೆ ಆದ್ಯತೆ ಮೇಲೆ ಲಸಿಕಾಕರಣ.

ಮೇಲ್ಕಂಡ ಆದ್ಯತಾ ಗುಂಪಿನವರಿಗೆ ಕೋವಿಡ್-19 ಲಸಿಕಾ ಮೇಳದಲ್ಲಿ ಲಸಿಕಾಕರಣಕ್ಕಾಗಿ ಜಿಲ್ಲೆಯಾದ್ಯಂತ ಜಿಲ್ಲಾ ಆಸ್ಪತ್ರೆ, ಎಲ್ಲಾ ತಾಲ್ಲೂಕು ಆಸ್ಪತ್ರೆಗಳು, ನಗರ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಗ್ರಾಮ ಪಂಚಾಯಿತಿಯಲ್ಲಿ ಕೋವಿಡ್ ಲಸಿಕಾ ಕೇಂದ್ರಗಳನ್ನು ಆಯೋಜಿಸಲಾಗಿದೆ. ಸಾರ್ವಜನಿಕರು ಸದರಿ ಲಸಿಕಾ ಮೇಳದ ಸದುಪಯೋಗವನ್ನು ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಆರ್.ಲತಾ ಅವರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ