ಜೂನಿಯರ್ ಚಿರು ಫೋಟೋ ಬಿಡುಗಡೆ ಮಾಡಿದ ಮೇಘನಾ
14/02/2021
ಬೆಂಗಳೂರು: ಚಿರಂಜೀವಿ ಸರ್ಜಾ ಹಾಗೂ ಮೇಘನಾ ದಂಪತಿಯ ಮುದ್ದು ಕಂದನ ಫೋಟೋ ಪ್ರೇಮಿಗಳ ದಿನವಾದ ಇಂದು ಬಹಿರಂಗಗೊಂಡಿದ್ದು, ಈ ಬಗ್ಗೆ ಮೇಘನಾ ಅವರು ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.
ವಿಡಿಯೋದಲ್ಲಿ ಮಗುವಿನ ಫೋಟೋವನ್ನು ರಿವೀಲ್ ಮಾಡಿದ್ದಾರೆ. ಪೆ.14ರಂದು ಜೂನಿಯರ್ ಚಿರು ನಿಮಗೆಲ್ಲರಿಗೂ ಹಲೋ ಹೇಳಲಿದ್ದಾನೆ ಎಂದು ಮೇಘನಾ ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿಕೊಂಡಿದ್ದರು.
ಅಂತೆಯೇ ಇಂದು ಜೂನಿಯರ್ ಚಿರು ಫೋಟೋ ಹಾಗೂ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಮೇಘನಾ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಚಿರು ಹೃದಯಾಘಾತದಿಂದ ನಿಧನರಾಗಿದ್ದರು. ಈ ನೋವಿನ ನಡುವೆಯೇ ಮೇಘನಾ ಚಿರು ಪುತ್ರನಿಗೆ ಜನ್ಮ ನೀಡಿದ್ದರು. ಇದೀಗ ಪುಟ್ಟ ಕಂದ ಈ ಕುಟುಂಬದಲ್ಲಿ ಚಿರುವಿನ ಸಾವಿನ ನೋವನ್ನು ಮರೆಸುವ ಪ್ರಯತ್ನದಲ್ಲಿದ್ದಾನೆ.