ಸಂಘ ಪರಿವಾರದ ನಾಯಕನ ಕಿರುಕುಳಕ್ಕೆ ವಿದ್ಯಾರ್ಥಿನಿ ಬಲಿ: ಈಗೆಲ್ಲಿದ್ದಾರೆ ನಳಿನ್ ಕುಮಾರ್ ಕಟೀಲ್?: ಕೆ.ಅಶ್ರಫ್ ಪ್ರಶ್ನೆ
ಇತ್ತೀಚೆಗೆ ಚಿಕ್ಕಮಗಳೂರಲ್ಲಿ ಕಾಲೇಜ್ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿದ್ದು ತನ್ನ ಸಾವಿಗೆ ಸಂಘ ಪರಿವಾರದ ಓರ್ವ ಯುವ ನಾಯಕ ಹಿತೇಶ್ ಕಾರಣ ಎಂದು ಡೆತ್ ನೋಟ್ ಬರೆದು ಇಟ್ಟಿದ್ದಾಳೆ. ದುಷ್ಕರ್ಮಿ ವಿರುದ್ಧ ಪ್ರಕರಣ ದಾಖಲಿಸಲು ಕೂಡಾ ಪೊಲೀಸರು ತಡ ಮಾಡಿದ್ದಾರೆ. ನಳಿನ್ ಕುಮಾರ್ ಕಟೀಲ್ ಈಗೆಲ್ಲಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ. ಅಶ್ರಫ್ ಪ್ರಶ್ನಿಸಿದ್ದಾರೆ.
ರಾಜ್ಯ ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ರವರು ಇತ್ತೀಚೆಗೆ ಬಹಿರಂಗವಾಗಿ ಮೂಲಭೂತ ಸೌಕರ್ಯದ ಪ್ರಶ್ನೆ ಕೇಳಬೇಡಿ. ರಸ್ತೆ ಗುಂಡಿ, ಚರಂಡಿ ಬಗ್ಗೆ ಮಾತನಾಡಬೇಡಿ. ಲವ್ ಜಿಹಾದ್ ಬಗ್ಗೆ ಪ್ರಶ್ನೆ ಕೇಳಿ ಎಂದು ಹೇಳಿಕೆ ನೀಡಿದ್ದರು. ಇಂದು ರಾಜ್ಯದಲ್ಲಿ ನಳಿನ್ ರವರು ಬಿತ್ತಿದ ಭೀಜದ ಫಸಲು ಬರುತ್ತಾ ಇದೆ. ಸಂಘ ಪರಿವಾರದ ಪುಂಡರು ಸ್ವಚ್ಚಂದವಾಗಿ ಕಾನೂನಿನ ಭಯವಿಲ್ಲದೆ, ಎಗ್ಗಿಲ್ಲದೇ ಯುವತಿಯರ ವಿಷಯದಲ್ಲಿ ಮದ್ಯ ಪ್ರವೇಶಿಸಿ ಅವರ ಖಾಸಗಿತನವನ್ನು ಭಂಗ ಗೊಳಿಸುವುದಲ್ಲದೇ ಜೀವ ಹಾನಿಯವರೆಗೆ ರಾದ್ದಾಂತವನ್ನು ಮುಂದುವರಿಸಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ನಳಿನ್ ಕುಮಾರ ಕಟೀಲ್ ಅವರು ಉಪದೇಶಿಸಿದ ಪಾಠ ಲವ್ ಜಿಹಾದ್ ನಿಂದ ಮೊದಲ್ಗೊಂಡು ನಾರಿ ರಕ್ಷಕರು ಸೃಷ್ಟಿಯಾಗುವವರೆಗೆ ಫಸಲು ತೆಗೆಯುತ್ತಿದ್ದು, ಬೇಲಿಯೇ ಎದ್ದು ಹೊಲ ಮೇಯ್ದಂತೆ ಇದೆ. ದುಷ್ಕರ್ಮಿ ಹಿತೇಶ್ ನಿಗೆ ಶಿಕ್ಷೆ ಆಗಬೇಕಿದೆ. ನಳಿನ್ ನೈತಿಕ ಹೊಣೆ ಹೊತ್ತು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಅವರು ಒತ್ತಾಯಿಸಿದ್ದಾರೆ.
ಅಂಗಡಿ ಮಳಿಗೆಯಲ್ಲಿ ಮುಸ್ಲಿಮ್ ಯುವಕ ಯುವತಿ ಪರಸ್ಪರ ಮಾತನಾಡಿ ಕೊಂಡರೂ ಎಂದು ತಗಾದೆ ಎಬ್ಬಿಸಿ, ಹಲ್ಲೆ ನಡೆಸಿ ರಾದ್ದಾಂತಗೈದ ಪ್ರಕರಣದಲ್ಲಿ ಹೇಳಿಕೆ ನೀಡಿದ ಶೋಭಕ್ಕ, ಭರತ್, ಪೂಂಜಾಗಳು ಹೀಗೆಲ್ಲಿದ್ದಾರೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ:
ನನಗೆ ಹೆಣ್ಣಾಗಿ ಬದುಕಲು ಇಷ್ಟ, ನನ್ನನ್ನು ಬದುಕಲು ಬಿಡಿ: ನಿಝಾಮ್ ಮನವಿ
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw