ಕೆ.ಎಸ್.ಆರ್.ಟಿ.ಸಿ. ಡಿಪೋದಲ್ಲಿ ಕಂಡೆಕ್ಟರ್ ಮೃತದೇಹವಿಟ್ಟು ದಲಿತ ಸಂಘಟನೆಗಳಿಂದ ಪ್ರತಿಭಟನೆ
ಚಿಕ್ಕಮಗಳೂರು: ಬಸ್ ರಿಪೇರಿ ಮಾಡುವಾಗ ಡ್ರೈವರ್ ಗೆ ಕಿಟಕಿಯಿಂದ ಊಟ ಕೊಡಲು ಹೋದ ಕಂಡಕ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಕೆ.ಎಸ್.ಆರ್.ಟಿ.ಸಿ. ಡಿಪೋದಲ್ಲಿ ಮೃತದೇಹವಿಟ್ಟು ಅಧಿಕಾರಿಗಳ ವಿರುದ್ಧ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಶ್ರೀನಾಥ್ (40) ಮೃತ ಕಂಡಕ್ಟರ್ ಆಗಿದ್ದಾರೆ. ನಿನ್ನೆ ಚಿಕ್ಕಮಗಳೂರಿನಿಂದ ಮೈಸೂರಿಗೆ ಹೋಗಿದ್ದ ಸರ್ಕಾರಿ ಬಸ್ ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ ಕೆಟ್ಟು ನಿಂತಿತ್ತು. ಬೆಳಗ್ಗೆ 9 ಗಂಟೆಗೆ ಬಸ್ ಕೆಟ್ಟು ಹೋಗಿತ್ತು. ಆದರೆ, ಮೆಕ್ಯಾನಿಕ್ ರಾತ್ರಿ 9 ಗಂಟೆಗೆ ಹೋಗಿದ್ದಾನೆ.
ಬಸ್ ರಿಪೇರಿಯಾಗುವುದನ್ನು ಡ್ರೈವರ್ ಹಾಗೂ ಕಂಡೆಕ್ಟರ್ ಕಾಯುತ್ತಿದ್ದರು. ಇದೇ ವೇಳೆ ರಾತ್ರಿ ಊಟವನ್ನು ಡ್ರೈವರ್ ಗೆ ಬಸ್ ನ ಕಿಟಕಿಯಿಂದ ನೀಡಲು ಕಂಡೆಕ್ಟರ್ ಹೋಗುತ್ತಿದ್ದ ವೇಳೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದ್ದು, ಪರಿಣಾಮವಾಗಿ ಕಂಡೆಕ್ಟರ್ ದಾರುಣವಾಗಿ ಸಾವನ್ನಪ್ಪಿದ್ದರು.
ಘಟನೆಯನ್ನು ಖಂಡಿಸಿ, ಕಂಡೆಕ್ಟರ್ ಮೃತದೇಹವನ್ನ ಡಿಪೋದಲ್ಲಿಟ್ಟು ದಲಿತ ಸಂಘಟನೆಗಳಿಂದ ಪ್ರತಿಭಟನೆ ನಡೆಸಿತು. ಕಂಡಕ್ಟರ್ ಸಾವಿಗೆ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: