ನಾನು ಕಬಡ್ಡಿ ಆಡಿದನ್ನು ವಿಡಿಯೋ ಮಾಡಿದವ ‘ರಾವಣ’ | ಪ್ರಗ್ಯಾ ಸಿಂಗ್ ಠಾಕೂರ್
ಭೋಪಾಲ್: ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಅವರು ಕಬಡ್ಡಿ ಆಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದೀಗ ಈ ವಿಡಿಯೋ ಹರಿಯಬಿಟ್ಟವರ ವಿರುದ್ಧ ಅವರು ಬಹಿರಂಗವಾಗಿಯೇ ಆಕ್ರೋಶ ಹೊರ ಹಾಕಿದ್ದಾರೆ.
ನಾನು ಕಬಡ್ಡಿ ಆಡುತ್ತಿರುವುದನ್ನು ವಿಡಿಯೋ ಮಾಡಿರುವವರು ರಾವಣರು. ಅವರ ವೃದ್ಧಾಪ್ಯ ಜೀವನ ಮತ್ತು ಮುಂದಿನ ಜನ್ಮ ಹಾಳಾಗಿ ಹೋಗುತ್ತಿದೆ ಎಂದು ವಿಡಿಯೋ ಮಾಡಿದವರನ್ನು ಪ್ರಗ್ಯಾ ಶಪಿಸಿದ್ದಾರೆ. ಜೊತೆಗೆ ನಾನು ಎರಡು ದಿನಗಳ ಹಿಂದೆ ಆರತಿ ಬೆಳಗಲು ಹೋಗಿದ್ದು, ಈ ವೇಳೆ ಮೈದಾನದಲ್ಲಿ ಆಟವಾಡುತ್ತಿದ್ದ ಕೆಲವು ಕ್ರೀಡಾಪಟುಗಳು ನನಗೆ (ಕಬಡ್ಡಿ) ರೈಡ್ ಮಾಡುವಂತೆ ವಿನಂತಿಸಿದರು. ಈ ಸನ್ನಿವೇಶದ ಒಂದು ಚಿಕ್ಕ ತುಣುಕು ಸೆರೆಹಿಡಿದು ಮಾಧ್ಯಮಗಳಲ್ಲಿ ತೋರಿಸಲಾಗಿದೆ ಎಂದು ಹೇಳಿದ್ದಾರೆ.
ಇನ್ನೂ ಈ ವಿಡಿಯೋ ಮಾಡಿರುವ ವ್ಯಕ್ತಿ ನಿಮ್ಮ ನಡುವೆ ಇರುವ ರಾವಣ ಎಂದು ಅರ್ಥ. ಸಿಂಧಿ ಸಹೋದರರಲ್ಲಿ ಯಾರೋ ಅಂಥ ಒಬ್ಬ ವ್ಯಕ್ತಿ ಇದ್ದಾರೆ. ಅವರು ನನ್ನನ್ನು ದೊಡ್ಡ ಶತ್ರುವಾಗಿ ನೋಡುತ್ತಿದ್ದಾರೆ. ಯಾಕೆ ಅಂತ ಗೊತ್ತಿಲ್ಲ ಎಂದು ಅವರು ಹೇಳಿದ್ದಾರೆ.
29, 2008ರಲ್ಲಿ ಮಲೆಗಾಂವ್ ಸ್ಫೋಟ ನಡೆದಿತ್ತು. ಈ ಸ್ಫೋಟದಲ್ಲಿ 6 ಮಂದಿ ಅಮಾಯಕರು ತಮ್ಮ ಪ್ರಾಣ ಕಳೆದುಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಗ್ಯಾ ಸಿಂಗ್ ಠಾಕೂರ್ ಅವರನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಕಳೆದ 9 ವರ್ಷಗಳಿಂದ ಜೈಲಿನಲ್ಲಿದ್ದ ಅವರು, ಬೆನ್ನು ಮೂಳೆ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗಿತ್ತು. ಗಾಲಿ ಕುರ್ಚಿಯ ಮೂಲಕ ಅನೇಕ ವರ್ಷಗಳ ವರೆಗೆ ಅವರು ಕಳೆದಿದ್ದರು.
ಗಂಭೀರ ಆರೋಗ್ಯ ಸಮಸ್ಯೆಯ ಕಾರಣ ನೀಡಿದ್ದ ಪ್ರಗ್ಯಾ ಸಿಂಗ್ ಠಾಕೂರ್ ಗೆ ಕೋರ್ಟ್ ಜಾಮೀನು ನೀಡಿತ್ತು. ಆದರೆ, ಇದೀಗ ಅವರ ನೃತ್ಯ, ಕಬಡ್ಡಿ ಆಟಗಳು ಸಾಮಾಜಿಕ ಜಾಲತಾಣಗಳಲ್ಲಿ ರಾರಾಜಿಸುತ್ತಿವೆ. ಈ ವಿಡಿಯೋಗಳ ಬಗ್ಗೆ ಪ್ರಗ್ಯಾ ಸಿಂಗ್ ಠಾಕೂರ್ ಅವರನ್ನು ಪ್ರಶ್ನಿಸಿದ್ದ ಕಾಂಗ್ರೆಸ್, ಅನಾರೋಗ್ಯದ ಕಾರಣ ನೀಡಿ ಜಾಮೀನು ಪಡೆದುಕೊಂಡಿರುವ ಅವರು ಈಗ ಆರೋಗ್ಯವಂತರಾಗಿದ್ದಾರೆಯೇ ಎಂದು ಕೇಳಿತ್ತು.
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಮಧ್ಯಪ್ರದೇಶ ಕಾಂಗ್ರೆಸ್ ವಕ್ತಾರ ನರೇಂದ್ರ ಸಿಂಗ್, ನಿಮ್ಮನ್ನು ಆರೋಗ್ಯ ವಂತ ಸ್ಥಿತಿಯಲ್ಲಿ ನೋಡಲು ಸಂತಸವಾಗುತ್ತಿದೆ. ಜನ ಸಮಸ್ಯೆಯಲ್ಲಿದ್ದಾಗ, ಅವರಿಗೆ ನಿಮ್ಮ ಅಗತ್ಯ ಇದ್ದಾಗ ಮಾತ್ರ ನಿಮ್ಮ ಆರೋಗ್ಯ ಹದಗೆಡುತ್ತದೆ. ದೇವರು ನಿಮ್ಮನ್ನು ಸದಾ ಆರೋಗ್ಯದಲ್ಲಿರುವಂತೆ ನೋಡಿಕೊಳ್ಳಲಿ ಎಂದು ಹೇಳಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb
ಇನ್ನಷ್ಟು ಸುದ್ದಿಗಳು…
ಕದ್ರಿ ಐತಿಹಾಸಿಕ ಬೌದ್ಧ ಸ್ಥಳ ವೀಕ್ಷಣೆ: 54 ಬೌದ್ಧ ಬಿಕ್ಕುಗಳ ಕರಾವಳಿ ಪ್ರವಾಸ
ಲಾಡ್ಜ್ ನಲ್ಲಿ ದಸರ ಪಾರ್ಟಿಯ ವೇಳೆ ಸ್ನೇಹಿತರ ನಡುವೆ ಗಲಾಟೆ: ಓರ್ವನ ಬರ್ಬರ ಹತ್ಯೆ
ಉಗ್ರಪ್ಪಗೆ ರಕ್ಷಣೆ ಸಲೀಂ ಅವರ ಉಚ್ಛಾಟನೆ: “ಸಿದ್ದಹಸ್ತʼ ಶೂರನ ನಿಜಬಣ್ಣ ಬಯಲು” | ಕುಮಾರಸ್ವಾಮಿ ಕಿಡಿ
ದಕ್ಷಿಣ ಕನ್ನಡ, ಉಡುಪಿ ಸಹಿತ 16 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ!
ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಅವರಿಗೆ 89 ಸಾವಿರ ರೂ. ಪಂಗನಾಮ ಹಾಕಿದ ಸೈಬರ್ ಕಳ್ಳರು!
ಬಜರಂಗದಳದಿಂದ ತ್ರಿಶೂಲ ದೀಕ್ಷೆ: ಪರಿಶೀಲನೆ ನಡೆಸಲು ಪೊಲೀಸ್ ಆಯುಕ್ತರಿಂದ ಸೂಚನೆ
ದಕ್ಷಿಣ ಕನ್ನಡ: ಭೀಮ್ ಸೇನೆಯಿಂದ ದಮ್ಮ ಚಕ್ರ ಪರಿವರ್ತನಾ ದಿನಾಚರಣೆ
ಪರಿವರ್ತನೆ ಬಯಸುವ ಚಲನಶೀಲ ಮನುಷ್ಯರಿಗೆಲ್ಲರಿಗೂ 65ನೇ ಧಮ್ಮ ದೀಕ್ಷಾ ದಿನದ ಶುಭಾಶಯಗಳು