ಪಾಲಾರ್ ಚಿತ್ರದ ಟ್ರೈಲರ್ ಟ್ವೀಟ್ ಮಾಡಿ ಶುಭಕೋರಿದ ಕಬಾಲಿ ಖ್ಯಾತಿಯ ನಿರ್ದೇಶಕ ಪಾ. ರಂಜಿತ್

pa ranjit
29/11/2022

ಬಹುನಿರೀಕ್ಷಿತ ‘ಪಾಲಾರ್’ ಕನ್ನಡ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಈ ಚಿತ್ರದ ಟ್ರೈಲರ್ ನ್ನು ಕಬಾಲಿ ಖ್ಯಾತಿಯ ನಿರ್ದೇಶಕ ಪಾ. ರಂಜಿತ್ ಅವರು ಟ್ವೀಟ್ ಮಾಡಿ ಶುಭಕೋರಿದ್ದಾರೆ.

ಪಾಲಾರ್ ಸಿನಿಮಾ ಕನ್ನಡ ಚಲನಚಿತ್ರರಂಗದಲ್ಲಿ ಮೈಲಿಗಲ್ಲು ಆಗಲಿ ಎಂದು ಪಾ.ರಂಜಿತ್ ಶುಭಕೋರಿದ್ದಾರೆ.

ಜೀವ ನವೀನ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಕನ್ನಡದ ಬಹು ನಿರೀಕ್ಷಿತ ‘ಪಾಲಾರ್’ ಚಿತ್ರದ ಅಧಿಕೃತ ಟ್ರೈಲರ್ ಸೌನವಿ ಕ್ರಿಯೇಷನ್ಸ್ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ.

ಹೊಸಬರ ಚಿತ್ರಗಳು ಇತ್ತೀಚೆಗೆ ಭರ್ಜರಿಯಾಗಿ ಯಶಸ್ವಿ ಕಾಣುತ್ತಿದೆ. ಈ ಸಾಲಿಗೆ ಪಾಲಾರ್ ಚಿತ್ರ ಕೂಡ ಸೇರಲಿದೆ ಅನ್ನೋ ನಿರೀಕ್ಷೆಗಳು ಸೃಷ್ಟಿಯಾಗಿವೆ. ನೆಲ ಮೂಲದ ಕಥೆಗಳು ಸಿನಿಮಾ ಕ್ಷೇತ್ರದಲ್ಲಿ ಯಶಸ್ವಿ ಹೆಜ್ಜೆಯನ್ನಿಡುತ್ತಾ, ದಾಖಲೆಗಳನ್ನು ಬರೆಯುತ್ತಿವೆ. ಈ ಸಾಲಿಗೆ ಪಾಲಾರ್ ಚಿತ್ರ ಕೂಡ ಸೇರುತ್ತದೆ ಎನ್ನುವ ನಿರೀಕ್ಷೆಗಳು ಹುಟ್ಟಿಕೊಂಡಿವೆ.

ಈಗಾಗಲೇ ಪಾಲಾರ್ ಚಿತ್ರ ಭಾರೀ ಪ್ರಚಾರ ಪಡೆದುಕೊಂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪಾಲಾರ್ ಕುರಿತಂತೆ ಭಾರೀ ಚರ್ಚೆಗಳು ಸೃಷ್ಟಿಯಾಗಿವೆ.

YouTube video player

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version