ವಿದ್ಯೆಯಲ್ಲಿ ಅಂಬೇಡ್ಕರ್ ಅವರನ್ನು ಮೀರಿಸಿದ ವ್ಯಕ್ತಿ ಮತ್ತೊಬ್ಬರಿಲ್ಲ: ಎಂ.ದೇವದಾಸ್ | ಅಂಬೇಡ್ಕರ್ ಪರಿನಿಬ್ಬಾಣ, ಮಹಾನಾಯಕ ಫ್ಲೆಕ್ಸ್ ಉದ್ಘಾಟನೆ ಕಾರ್ಯಕ್ರಮ
ಕಡಬ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊಫೆಸರ್ ಕೃಷ್ಣಪ್ಪ ಸ್ಥಾಪಿತ 47-75/75) ತಾಲೂಕು ಶಾಖೆ ಕಡಬ ಇದರ ವತಿಯಿಂದ ವಿಶ್ವ ರತ್ನ ,ಸಂವಿಧಾನ ಶಿಲ್ಪಿ, ಪರಮಪೂಜ್ಯ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ 64 ನೇ ವರ್ಷದ ಪರಿನಿಬ್ಬಾಣ ಹಾಗೂ ಮಹಾನಾಯಕ ಧಾರಾವಾಹಿಯ ಫ್ಲೆಕ್ಸ್ ಅನಾವರಣ ಕಾರ್ಯಕ್ರಮವನ್ನು ಕಡಬದ ಮುಖ್ಯ ಪೇಟೆಯಲ್ಲಿ ನಡೆಸಲಾಯಿತು .
ಫ್ಲೆಕ್ಸ್ ಉದ್ಘಾಟನೆ ಮಾಡಿ ಮಾತನಾಡಿದ ದಸಂಸ ಸಂಸ್ಥಾಪಕ ಸದಸ್ಯರಾದ ಎಂ. ದೇವದಾಸ್ ಮಂಗಳೂರು, ಬಾಬಾ ಸಾಹೇಬ್ ಅಂಬೇಡ್ಕರ್ ರವರ ಅಪಾರ ಜ್ಞಾನದ ಫಲದಿಂದ ಪ್ರತಿಯೊಬ್ಬ ಭಾರತೀಯನ್ನು ತಲೆ ಎತ್ತಿ ನಡೆಯುವಂತಹ ಸಂವಿಧಾನ ರಚಿಸಿದರು,ಅವರ ವಿದ್ಯಾಭ್ಯಾಸವನ್ನು ಮೀರಿಸಬಲ್ಲ ಇನ್ನೊಂದು ವ್ಯಕ್ತಿ ಇಲ್ಲ. ಅಂಬೇಡ್ಕರ್ ರವರ ನೈಜ ಘಟನೆಯನ್ನು ಧಾರಾವಾಹಿ ಮೂಲಕ ಪ್ರಸಾರ ಮಾಡುವ ಝೀ ಟಿವಿಯನ್ನು ನಾವು ಬೆಂಬಲಿಸುವುದರ ಜೊತೆಗೆ ಅಂಬೇಡ್ಕರವರ ನೈಜ ಇತಿಹಾಸವನ್ನು ಪ್ರತಿಯೊಬ್ಬ ಭಾರತೀಯನ್ನು ತಿಳಿದುಕೊಳ್ಳಬೇಕು ಎಂದರು.
ಇವತ್ತು ದೇಶದಲ್ಲಿ ಹಲವು ಸಮಸ್ಯೆಗಳಿದ್ದು, ದೆಹಲಿಯಲ್ಲಿ ಕೊರೆಯುವ ಚಳಿಯನ್ನು ಲೆಕ್ಕಿಸದೆ ರೈತರು ಪ್ರತಿಭಟನೆ ಮಾಡುತ್ತಿದ್ದರೆ, ಕೆಂದ್ರ ಸರ್ಕಾರ ಮಾತ್ರ ಲವ್ ಜಿಹಾದ್ ಗೋ ಹತ್ಯೆ ಎಂದು ಜನರನ್ನು ದಿಕ್ಕು ತಪ್ಪಿಸುತ್ತಿದೆ. ತಾಕತ್ತ್ ಇದ್ದರೆ ಹಲವು ಬಿಜೆಪಿ ಮುಖಂಡರುಗಳ ಸಹೋದರಿಯರು ಮುಸ್ಲಿಂ ಯುವಕನ್ನು ಮದುವೆಯಾಗಿದ್ದರೆ ಇದರ ಬಗ್ಗೆ ಮಾತನಾಡಲಿ ಎಂದು ಸವಾಲು ಹಾಕಿದರು.
ಪ್ರಮುಖ ಭಾಷಣವನ್ನು ಮಾಡಿದ ಅನಂದ ಮಿತ್ತಬೈಲ್, ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ನೀಡುವ ಭೀಮಾ ರಾಜ್ಯ ಇಂದು ಬೇಕಾಗಿದ್ದು, ಸಂವಿಧಾನ ಶಿಲ್ಪಿಯ ಕಥೆಯನ್ನು ಪ್ರಚಾರ ಮಾಡುವಾಗ ಹಲವಾರು ಬೆದರಿಕೆ ಬಂದರು ಅದನ್ನು ಲೆಕ್ಕಿಸದೆ ಪ್ರಚಾರ ಮಾಡಿದ ಝಿ .ಟಿವಿಯ ಜೊತೆ ಸದಾ ದಸಂಸ ಇರುತ್ತದೆ ಎಂದರು.
ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮಾನ ಸಲ್ಲಿಸಿ ಮಾತನಾಡಿದ ಜಿಲ್ಲಾ ಸಂಚಾಲಕಾದ ರಘು ಕೆ, ಎಕ್ಕಾರು ಮಹಾನಾಯಕ ಧಾರಾವಾಹಿಯ ಫ್ಲೆಕ್ಸ್ ಗಳಿಗೆ ಕೆಲವು ಕಡೆ ಹಾನಿ ಮಾಡುವ ಕೆಟ್ಟ ಕೆಲಸ ನಡೆಯುತ್ತಿದ್ದು ಅಂತವರು ಮೊದಲು ಅಂಬೇಡ್ಕರವರ ಇತಿಹಾಸ ತಿಳಿದು ಕೊಳ್ಳಬೇಕು, ಮಹಾನಾಯಕ ಧಾರಾವಾಹಿ ಕೆಲವು ಪುಸ್ತಕಗಳಲ್ಲಿ ದಾಖಲಿಸಿದ ಘಟನೆ ನೈಜ ಚಿತ್ರಣವಾಗಿದ್ದು ನಿಮಗೆ ಧೈರ್ಯ ಇದ್ದರೆ ಕೋರ್ಟ್ ಕೇಸ್ ಹಾಕಿ ಅದು ಬಿಟ್ಟು ಹಾನಿ ಮಾಡುವಂತಹ ಕೀಲು ಮಟ್ಟಕ್ಕೆ ಇಳಿದರೆ ದಸಂಸ ತಕ್ಕ ಉತ್ತರ ನೀಡುವುದು ಅನಿವಾರ್ಯವಾಗಬಹುದು ಎಂದರು.
ಮಹಿಳಾ ಘಟಕದ ಜಿಲ್ಲಾ ಸಂಚಾಲಕಿ ಸರೋಜಿ ಮಾತನಾಡಿ, ಪ್ರಸ್ತುತ ಮಹಿಳೆಯರು ಮಕ್ಕಳ ಹೆಚ್ಚು ಮಹಾನಾಯಕ ಧಾರಾವಾಹಿ ನೋಡುವುದರ ಮೂಲಕ ತನ್ನ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಸಲಹೆ ನೀಡಿದರು .
ಅಧ್ಯಕ್ಷತೆ ವಹಿಸಿದ್ದ ಉಮೇಶ್ ಕೊಡಿಬಾಂಳ ಮಾತನಾಡಿ, ಅಂಬೇಡ್ಕರವರನ್ನು ಮಹಾನಾಯಕ ಮೂಲಕ ಮನೆಗೆ ತಲುಪಿದ ಝೀ ಟಿವಿಯ ಮುಖ್ಯಸ್ಥ ರಾಘವೇಂದ್ರ ಹುಣಸೂರು ಮತ್ತು ನಿರ್ಮಾಪಕಿ ಪ್ರಣತಿ ಸಿಂಧಿ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಜಿಲ್ಲಾ ಸಂಘಟನಾ ಸಂಚಾಲಕ ನಾಗೇಶ್ ಚಿಲಿಂಬಿ, ಪುತ್ತೂರು ತಾಲೂಕು ಶಾಖೆ ಸಂಚಾಲಕರಾದ ಗಣೇಶ್ ಗುರಿಯಾನ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು .
ವಿದ್ಯಾರ್ಥಿ ಘಟಕದ ಮಾಜಿ ಜಿಲ್ಲಾ ಸಂಚಾಲಕ ರಾಕೇಶ್ ಕುಂದಾರ್, ಕಡಬ ತಾಲೂಕು ಸಂಘಟನೆ ಸಂಚಾಲಕರಾದ ಪುಟ್ಟಣ್ಣ ತೋಟಂತಿಲ್ಲ,ಗಣೇಶ್ ಕಾರ್ತಡ್ಕ ,ರವಿ ಮರ್ದಾಳ , ಅನ್ನೋರ್ ,ಅಣ್ಣು ಪೇರುಮಜಲು,ಸುಜೀವ ಪೇರುಮಜಲು, ರಂಗನಾಥ್,ವಿಜಯ್ ಅಂತೂರ್,ಮನೋಜ್ ಮೀತ್ತಬೈಲ್ ಹಾಗೂ ಪುತ್ತೂರು ತಾಲೂಕು ಸಂಘಟನೆ ಸಂಚಾಲಕರುಗಳಾದ ಬಾಬು ಸವಣೂರು, ವಿಶ್ವನಾಥ್ ಪುಣ್ಚಾತ್ತಾರ್,ನಾಗೇಶ್ ಕುರಿಯ, ಅಂಬೇಡ್ಕರ್ ವಾದ ಕಡಬ ತಾಲೂಕು ಶಾಖೆ ಸಂಚಾಲಕರಾದ ವಸಂತ ಕಲ್ಲಗುಡೆ, ದಲಿತ್ ಸೇವಾ ಸಮಿತಿ ಜೊತೆ ಕಾರ್ಯದರ್ಶಿ ಚಿದಾನಂದ, ಅಂಬೇಡ್ಕರ್ ಅನುಯಾಯಿ ಶಶಿಧರ್ ಬೋಟ್ಟಡ್ಕ ,ಹ್ಯಾರಿಸ್ ಕಲಾರ ಮೊದಲಾದವರು ಭಾಗವಹಿಸಿದ್ದರು . ಸ್ವರಾಜ್ ಮಿತ್ತಬೈಲ್ ಸ್ವಾಗತಿಸಿ , ಹರೀಶ್ ಅಂಕಜಾಲ್ ಕಾರ್ಯಕ್ರಮ ನಿರೂಪಣೆ ಮಾಡಿ ಧನ್ಯವಾದ ನೀಡಿದರು.