ಕಡಬ: ಕಾನ್ ಸ್ಟೇಬಲ್ ನಿಂದ ಅತ್ಯಾಚಾರ ಪ್ರಕರಣ | ಇಂದು ನಡೆದ ಬೆಳವಣಿಗೆಗಳೇನು? - Mahanayaka
2:22 AM Tuesday 23 - December 2025

ಕಡಬ: ಕಾನ್ ಸ್ಟೇಬಲ್ ನಿಂದ ಅತ್ಯಾಚಾರ ಪ್ರಕರಣ | ಇಂದು ನಡೆದ ಬೆಳವಣಿಗೆಗಳೇನು?

shivaraj kadaba police
28/09/2021

ಕಡಬ: ಕಾನ್ ಸ್ಟೇಬಲ್ ನಿಂದಲೇ ಅಪ್ರಾಪ್ತೆಯ ಅತ್ಯಾಚಾರ ಹಾಗೂ ಸಂತ್ರಸ್ತ ಯುವತಿಯ ಗರ್ಭಪಾತ ಪ್ರಕರಣ ತೀವ್ರತೆ ಪಡೆದುಕೊಂಡಿದ್ದು, ಕಡಬ ಠಾಣೆಯ ಕಾನ್ ಸ್ಟೇಬಲ್ ಶಿವರಾಜ್ ವಿರುದ್ಧ ದೂರು ದಾಖಲಾಗುತ್ತಿದ್ದಂತೆಯೇ ಘಟನೆ ಸಂಬಂಧ ಹಿರಿಯ ಅಧಿಕಾರಿಗಳು ಕಡಬ ಠಾಣೆಗೆ ಆಗಮಿಸಿದ್ದಾರೆ.

ಸೋಮವಾರ ಸಂತ್ರಸ್ತ ಯುವತಿಯ ತಂದೆ ಘಟನೆಯ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರು. ಮಗಳನ್ನು ಅತ್ಯಾಚಾರ ಮಾಡಿ, ಆಕೆ ಗರ್ಭಾವತಿಯಾದಾಗ ಗರ್ಭಪಾತ ಮಾಡಿಸಿ ಮಂಗಳೂರಿನ ಅಜ್ಞಾತ ಸ್ಥಳದಲ್ಲಿಡಲಾಗಿದೆ. ಗರ್ಭಪಾತ ಮಾಡಿಸಲು ಆರೋಪಿ ಶಿವರಾಜ್ ಹಣ ನೀಡಿದ್ದಾನೆ ಎಂದೂ ಆರೋಪಿಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡಬ ಠಾಣೆಗೆಗೆ ದ.ಕ.ಜಿಲ್ಲಾ ಎಸ್ ಪಿ ಋಷಿಕೇಶ್ ಭಗವಾನ್ ಸೋನಾವಣೆ ಹಾಗೂ ಡಿವೈಎಸ್ ಪಿ ಗಾನ ಪಿ.ಕುಮಾರ್ ಸೋಮವಾರ ಭೇಟಿ ನೀಡಿ, ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು. ಇಂದು ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ, ದಕ್ಷಿಣ ಕನ್ನಡ ಜಿಲ್ಲಾ ಎಸ್ ಪಿ ಋಷಿಕೇಶ್ ಭಗವಾನ್ ಸೋನಾವಣೆ ಭೇಟಿ ನೀಡಿದ್ದಾರೆ. ಈ ಮೂಲಕ ಪ್ರಕರಣದ ತನಿಖೆಗೆ ಇನ್ನಷ್ಟು ಚುರುಕುಗೊಂಡಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj

ಇನ್ನಷ್ಟು ಸುದ್ದಿಗಳು…

ಆರೆಸ್ಸೆಸ್ ನದ್ದು ತಾಲಿಬಾನ್ ಸಂಸ್ಕೃತಿ, ಬಿಜೆಪಿಯವರಿಗೆ ಮನುಷ್ಯತ್ವ ಇಲ್ಲ | ಸಿದ್ದರಾಮಯ್ಯ ವಾಗ್ದಾಳಿ

ರಾಜ್ಯದಲ್ಲಿ ಆಪರೇಷನ್ ಹಸ್ತ ಆರಂಭ? | ಬಿಜೆಪಿಯ ಮೊದಲ ವಿಕೆಟ್ ಪತನ?

ಗೋಶಾಲೆ ನಿರ್ಮಾಣಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 98 ಎಕರೆ ಪ್ರದೇಶಕ್ಕೆ ಗುರುತು | ಸಚಿವ ಎಸ್.ಅಂಗಾರ

ಮಂಗಳೂರು: ಬೇರೆ ಬೇರೆ ಧರ್ಮದ ವಿದ್ಯಾರ್ಥಿಗಳು ಜೊತೆಯಾಗಿ ಪ್ರಯಾಣಿಸುತ್ತಿದ್ದ ಕಾರಿಗೆ ದಾಳಿ: ಐವರು ಕಿಡಿಗೇಡಿಗಳ ಬಂಧನ

ಚೆಕಪ್ ಗೆ ಹೋದ ಮಹಿಳೆಯ ವಸ್ತ್ರ ಕಳಚಿ ಲೈಂಗಿಕ ಕಿರುಕುಳ | ವೈದ್ಯ ಅರೆಸ್ಟ್

ಭಾರತೀಯರಿಗೆ ಶಾಕಿಂಗ್ ನ್ಯೂಸ್ | ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆ

ಶಾಕಿಂಗ್ ನ್ಯೂಸ್: ಸೈಬರ್ ಸೆಂಟರ್ ನಲ್ಲಿ ಇಬ್ಬರು ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ

ಇತ್ತೀಚಿನ ಸುದ್ದಿ